ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್ ಬೆದರಿಕೆ: ಲಂಡನ್ ನಲ್ಲಿ ಲ್ಯಾಂಡ್ ಆದ ಮುಂಬೈ ಏರ್ ಇಂಡಿಯಾ ವಿಮಾನ

|
Google Oneindia Kannada News

ಲಂಡನ್, ಜೂನ್ 27: ಮುಂಬೈಯಿಂದ ಅಮೆರಿಕದ ನೇವಾರ್ಕ್ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವೊಂದು ಬಾಂಬ್ ಬೆದರಿಕೆಯ ಕಾರಣ ಲಂಡನ್ನಿನಲ್ಲಿ ತುರ್ತಾಗಿ ಲ್ಯಾಂಡ್ ಆದ ಘಟನೆ ನಡೆದಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಆದರೆ ಈ ಕುರಿತು ಟ್ವೀಟ್ ಮಾಡಿದ್ದ ಏರ್ ಇಂಡಿಯಾ ಇದೀಗ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದೆ. ಅದಾದ ನಂತರ ಯಾವುದೇ ಮಾಹಿತಿಯನ್ನು ಏರ್ ಇಂಡಿಯಾ ನೀಡಿಲ್ಲ.

ಉಗ್ರನ ಮಾಹಿತಿ: ರಾಮನಗರದಲ್ಲಿ ಎರಡು ಸಜೀವ ಬಾಂಬ್ ಪತ್ತೆಉಗ್ರನ ಮಾಹಿತಿ: ರಾಮನಗರದಲ್ಲಿ ಎರಡು ಸಜೀವ ಬಾಂಬ್ ಪತ್ತೆ

Bomb threat: Mumbai Air India flight has made precautionary landing in London

ಮುಂಬೈಯಿಂದ ಹೊರಟಿದ್ದ AI 191 ವಿಮಾನ ಅಮೆರಿಕದ ನ್ಯೂಜರ್ಸಿಯ ನೇವಾರ್ಕ್ ಗೆ ತಲುಪಬೇಕಿತ್ತು. ಅಷ್ಟರಲ್ಲಿ ಬಾಂಬ್ ಬೆದರಿಕೆ ಕರೆ ಬಂದಿದ್ದರಿಂದ ವಿಮಾನ ಲಂಡನ್ನಿನ ಸ್ಟಾನ್ಸಟೆಡ್ ವಿಮಾನ ನಿಲ್ದಾಣದಲ್ಲಿಯೇ ಲ್ಯಾಂಡ್ ಆಗಿದೆ.

ಬಿಜೆಪಿ ಕೇಂದ್ರ ಕಚೇರಿಗೆ ಹುಸಿ ಬಾಂಬ್ ಕರೆ: ಮೈಸೂರಿಗನ ಕೈವಾಡ?ಬಿಜೆಪಿ ಕೇಂದ್ರ ಕಚೇರಿಗೆ ಹುಸಿ ಬಾಂಬ್ ಕರೆ: ಮೈಸೂರಿಗನ ಕೈವಾಡ?

ವಿಮಾನದಲ್ಲಿ ಎಷ್ಟು ಮಂದಿ ಇದ್ದರು, ಕರೆ ಬಂದಿದ್ದು ಎಲ್ಲಿಂದ ಎಂಬಿತ್ಯಾದಿ ಮಾಹಿತಿ ಲಭ್ಯವಾಗಬೇಕಿದೆ.

ಇತ್ತೀಚೆಗಷ್ಟೇ ಮೈಸೂರಿನ ವ್ಯಕ್ತಿಯೊಬ್ಬ ಬಿಜೆಪಿ ಕೇಂದ್ರ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಒಡ್ಡಿದ್ದು ಸುದ್ದಿ. ನಂತರ ಆತ ಮಾನಸಿಕ ಅಸ್ವಸ್ಥ ಎನ್ನಲಾಗಿತ್ತು.

English summary
Air India Tweets,191 Mumbai- Newark of 27.06.19 has made a precautionary landing at London Stansted Airport due to bomb threat . Update in the matter follows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X