ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯರನ್ನು ದಿವಾಳಿ ಎಂದು ಘೋಷಿಸಲು ಬ್ಯಾಂಕ್ ಅಪೀಲು

|
Google Oneindia Kannada News

Recommended Video

ವಿಜಯ್ ಮಲ್ಯರನ್ನು ದಿವಾಳಿ ಎಂದು ಘೋಷಿಸಲು ಬ್ಯಾಂಕ್ ಅಪೀಲು | Oneindia Kannada

ಲಂಡನ್, ಡಿಸೆಂಬರ್ 12: ಹತ್ತು ಸಾವಿರ ಕೋಟಿ ರೂಪಾಯಿ ಸಾಲ ಮರು ಪಾವತಿಸಲು ವಿಫಲವಾಗಿ ಬ್ರಿಟನ್ ಗೆ ಪಲಾಯನ ಮಾಡಿರುವ ವಿಜಯ್ ಮಲ್ಯರನ್ನು ದಿವಾಳಿ ಎಂದು ಘೋಷಿಸಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಳತ್ವದ ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್ ಗಳು ಬ್ರಿಟನ್ ಹೈಕೋರ್ಟ್ ಗೆ ಮನವಿ ಮಾಡಿಕೊಂಡಿವೆ.

ವಿಜಯ್ ಮಲ್ಯ ಪರ ವಕೀಲರು ಕೋರ್ಟ್ ನಲ್ಲಿ ಈ ಅಫೀಲನ್ನು ವಜಾ ಮಾಡುವಂತೆ ಕೋರಿದ್ದಾರೆ. "ಭಾರತದ ನ್ಯಾಯಾಲಯದಲ್ಲಿ ಬ್ಯಾಂಕ್ ಗಳು ಸಾಲದ ಪರಿಸ್ಥಿತಿಯನ್ನು ವ್ಯತಿರಿಕ್ತವಾಗಿ ಪ್ರಸ್ತಾಪ ಮಾಡಿದ್ದಾರೆ.

ವಿಜಯ್ ಮಲ್ಯ ಹಸ್ತಾಂತರ ವಿರುದ್ಧದ ಮೇಲ್ಮನವಿಗೆ ಕೋರ್ಟ್ ಒಪ್ಪಿಗೆ ವಿಜಯ್ ಮಲ್ಯ ಹಸ್ತಾಂತರ ವಿರುದ್ಧದ ಮೇಲ್ಮನವಿಗೆ ಕೋರ್ಟ್ ಒಪ್ಪಿಗೆ

ಒಂದು ವೇಳೆ ನ್ಯಾಯಾಲಯ ಈ ಅರ್ಜಿಯನ್ನು ಸ್ವೀಕರಿಸುವುದಾದರೆ ವಿಜಯ್ ಮಲ್ಯರ ಹಸ್ತಾಂತರ ಪ್ರಕರಣದ ನಿರ್ಧಾರವನ್ನು ಮುಂದೂಡಬೇಕೆಂದು" ಮಲ್ಯ ಪರ ವಕೀಲ ಮಾರ್ಷಲ್ ಮನವಿ ಮಾಡಿದರು.

ಮಲ್ಯ ವಿರುದ್ದ ವಂಚನೆ ಆರೋಪ

ಮಲ್ಯ ವಿರುದ್ದ ವಂಚನೆ ಆರೋಪ

ವಿಜಯ್ ಮಲ್ಯ ಅವರನ್ನು ದಿವಾಳಿ ಎಂದು ಘೋಷಣೆ ಮಾಡುವಂತೆ ಬ್ಯಾಂಕ್ ಆಫ್ ಬರೋಡ, ಕಾರ್ಪೋರೇಶನ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಯುಕೋ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಬ್ರಟನ್ ಹೈಕೋರ್ಟ್ ಗೆ ಮನವಿ ಮಾಡಿವೆ.

ವಿಜಯ್ ಮಲ್ಯ ಈ ಹಿಂದೆ ತಮ್ಮ ಮಾಲೀಕತ್ವದ ಕಿಂಗ್ ಫಿಶರ್ ಸಂಸ್ಥೆಯ ಸಾಲವನ್ನು ಬ್ಯಾಂಕ್ ಗಳಿಗೆ ಮರು ಪಾವತಿ ಮಾಡಲಾಗದೆ, ಭಾರತೀಯ ಬ್ಯಾಂಕ್ ಗಳಿಗೆ ವಂಚಿಸಿದ್ದಾರೆ. ಅವರ ವಿರುದ್ದ ವಂಚನೆ ಮತ್ತು ಅಕ್ರಮ ಹಣ ಹಣ ವರ್ಗಾವಣೆ ಆರೋಪವಿದೆ.

ಫೆಬ್ರವರಿಯಲ್ಲಿ ಹಸ್ತಾಂತರ ವಿಚಾರಣೆ

ಫೆಬ್ರವರಿಯಲ್ಲಿ ಹಸ್ತಾಂತರ ವಿಚಾರಣೆ

ವಿಜಯ್ ಮಲ್ಯ ಅವರು 10 ಸಾವಿರ ಕೋಟಿ ರೂಪಾಯಿ ಮೊತ್ತದ ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಅವರು ಭಾರತದಿಂದ ಪರಾರಿಯಾಗಿ ಸದ್ಯ ಲಂಡನ್ ನಲ್ಲಿ ವಾಸ ಮಾಡುತ್ತಿದ್ದಾರೆ. ಭಾರತ ಸರ್ಕಾರ ಅವರನ್ನು ವಾಪಸ್ ಕರೆತರಲು ಪ್ರಯತ್ನ ನಡೆಸಿದೆ. ಈ ಮಧ್ಯೆ ಎಸ್ ಬಿಐ ಬ್ಯಾಂಕ್ ನೇತೃತ್ವದಲ್ಲಿ ಬ್ರಿಟನ್ ಹೈಕೋರ್ಟ್ ಗೆ ಅವರನ್ನು ದಿವಾಳಿ ಎಂದು ಘೋಷಿಸಲು ಮನವಿ ಮಾಡಿವೆ.

2016 ರ ಮಾರ್ಚ್ ನಲ್ಲಿ ಲಂಡನ್ ಗೆ ಪರಾರಿಯಾಗಿದ್ದ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಟನ್ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ವಿಜಯ್ ಮಲ್ಯ ಅದರ ವಿರುದ್ದ ಮೇಲ್ಮನವಿ ಸಲ್ಲಿಸಿದ್ದು, ಫೆಬ್ರವರಿಯಲ್ಲಿ ವಿಚಾರಣೆ ನಡೆಯಲಿದೆ.

ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಸದ್ಯಕ್ಕಿಲ್ಲವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಸದ್ಯಕ್ಕಿಲ್ಲ

ಮಾಜಿಗಳ ತಪ್ಪಿಗೆ ಹಾಲಿಗಳಿಗೆ ಶಿಕ್ಷೆ ಇಲ್ಲ

ಮಾಜಿಗಳ ತಪ್ಪಿಗೆ ಹಾಲಿಗಳಿಗೆ ಶಿಕ್ಷೆ ಇಲ್ಲ

ದಿವಾಳಿತನ ಕಾನೂನಿಗೆ ತಂದಿರುವ ತಿದ್ದುಪಡಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ದಿವಾಳಿಯಾಗುವ ಸಂದರ್ಭದಲ್ಲಿ ಎದುರಾಗುವ ಕೆಲವು ತೊಂದರೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗಿದೆ.

ದಿವಾಳಿಯಾದ ಯಾವುದಾದರೂ ಸಂಸ್ಥೆಯ ಈ ಹಿಂದಿನ ಆಡಳಿತ ಮಂಡಳಿ ಮಾಡಿದ ತಪ್ಪಿಗೆ ಹಾಲಿ ಆಡಳಿತ ಮಂಡಳಿ ಕ್ರಿಮಿನಲ್ ನಡಾವಳಿಗೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶ ಈ ತಿದ್ದುಪಡಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಮೋದಿ ಸಂಪುಟ ತೀರ್ಮಾನ

ಮೋದಿ ಸಂಪುಟ ತೀರ್ಮಾನ

1934 ರ ವಿಮಾನಯಾನ ಕಾನೂನನ್ನು ಉಲ್ಲಂಘನೆ ಮಾಡುವ ವಿಮಾನಯಾನ ಸಂಸ್ಥೆಗಳಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಲು ನಿರ್ಧಾರ ಕೈಗೊಳ್ಳಲಾಯಿತು. ದಂಡ ವಿಧಿಸಲು ಅನುವು ಮಾಡಿಕೊಡುವ ಕೆಲವು ಬದಲಾವಣೆಗಳ ತಿದ್ದುಪಡಿ ಮಸೂದೆ ಮಂಡಿಸಲು ಮೋದಿಯವರ ಸಂಪುಟ ಸಭೆ ಸಮ್ಮತಿ ನೀಡಿತು.

ವಿಮಾನಯಾನ ಕಾನೂನು ಉಲ್ಲಂಘನೆ ಮಾಡಿದಾಗ ವಿಧಿಸಲಾಗುತ್ತಿದ್ದ ದಂಡದ ಮೊತ್ತ 10 ಲಕ್ಷ ರೂಪಾಯಿಗಳು. ಈಗ ಅದನ್ನು 1 ಕೋಟಿ ರೂಪಾಯಿಗೆ ಏರಿಸಲು ತಿದ್ದುಪಡಿ ಮಸೂದೆ ಅವಕಾಶ ನೀಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

English summary
12 banks Run By State Bank of India Have appealed to the UK High Court to declare bankrupt Vijay Mallya who fled to Britain after failing to repay a loan of Rs 10,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X