ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಷ್ಟದಲ್ಲಿರುವ ಭಾರತದ ಬೆಂಬಲಕ್ಕೆ ನಿಲ್ಲಬೇಕು: ಬ್ರಿಟನ್ ಪ್ರಿನ್ಸ್ ಚಾರ್ಲ್ಸ್

|
Google Oneindia Kannada News

ಲಂಡನ್, ಏಪ್ರಿಲ್ 29: ಭಾರತವು ಕೊರೊನಾ ಸೋಂಕಷ್ಟದಲ್ಲಿರುವ ದೇಶಗಳಿಗೆ ಸಹಾಯ ಮಾಡಿದೆ. ಹಾಗೆಯೇ ಭಾರತದ ಸಂಕಷ್ಟದ ಸಮಯದಲ್ಲಿ ನಾವೂ ಬೆಂಬಲಕ್ಕೆ ನಿಲ್ಲಬೇಕು ಎಂದು ಬ್ರಿಟನ್ ಪ್ರಿನ್ಸ್ ಚಾರ್ಲ್ಸ್ ಹೇಳಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಭಾರತದಲ್ಲಿ 3,00,000ಕ್ಕೂ ಹೆಚ್ಚು ಹೊಸ ಹೊಸ ಕೊರೊನಾ ಪ್ರಕರಣಗಳು ವರದಿಯಾಗುತ್ತಿದೆ. ಭಾರತವು ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿದೆ ಮತ್ತು ಹಲವಾರು ರಾಜ್ಯಗಳ ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕ ಮತ್ತು ಹಾಸಿಗೆಗಳ ಕೊರತೆಯನ್ನು ಎದುರಿಸುತ್ತಿದೆ.

ನಾವು ಈ ಯುದ್ಧವನ್ನು ಗೆಲ್ಲುತ್ತೇವೆ. ಬ್ರಿಟಿಷ್ ಏಷ್ಯನ್ ಟ್ರಸ್ಟ್, ಭಾರತದಲ್ಲಿನ ಆಸ್ಪತ್ರೆಗಳ ತುರ್ತು ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಲು ಆಕ್ಸಿಜನ್ ಫಾರ್ ಇಂಡಿಯಾ ಎಂಬ ತುರ್ತು ಅಭಿಯಾನವನ್ನು ಆರಂಭಿಸಿದೆ ಎಂದರು.

Prince Charles

ಬ್ರಿಟನ್ ರಾಜಕುಮಾರ ಚಾರ್ಲ್ಸ್ ತಮ್ಮ ಚಾರಿಟಿ ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮೂಲಕ ಸಂಕಷ್ಟದಲ್ಲಿರುವ ಭಾರತಕ್ಕೆ ತುರ್ತಾಗಿ ನೆರವಿನ ಹಸ್ತ ನೀಡಬೇಕಿದ್ದು ಕೋವಿಡ್ ಸಾಂಕ್ರಾಮಿಕ ರೋಗದ ಭಯಾನಕ ಎರಡನೇ ಅಲೆಯನ್ನು ನಿಭಾಯಿಸುವಾಗ ಭಾರತಕ್ಕೆ ಸಹಾಯ ಮಾಡುವಂತೆ ಜನರನ್ನು ಒತ್ತಾಯಿಸಿದರು.

ಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರ

ಒಂದು ವರ್ಷದಿಂದ ಕೊರೊನಾ ಸೋಂಕು ಪ್ರಪಂಚದಾದ್ಯಂತದ ನಮ್ಮಲ್ಲಿ ಅನೇಕರ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ. ಈ ವಾರ, ಕೊರೊನಾ ಭಾರತದಲ್ಲಿ ಭೀಕರತೆಯನ್ನು ಸೃಷ್ಟಿಸುತ್ತಿದೆ. ಈ ದುರಂತ ದೃಶ್ಯಗಳನ್ನು ಕಂಡು ನಾನು ತುಂಬಾ ದುಃಖಿತನಾಗಿದ್ದೇನೆ ಎಂದಿದ್ದಾರೆ.

ಭಾರತೀಯ ನೆರವು ಮತ್ತು ಜಾಣ್ಮೆ ಇತರ ದೇಶಗಳಿಗೆ ಬೆಂಬಲವಾಗಿದೆ. ಭಾರತವು ಇತರರಿಗೆ ಸಹಾಯ ಮಾಡಿದಂತೆ, ಈಗ ನಾವು ಭಾರತಕ್ಕೆ ಸಹಾಯ ಮಾಡಬೇಕು ಎಂದು ಅವರು ಹೇಳಿದರು.

English summary
Britain’s Prince Charles on Wednesday made an impassioned plea as he backed an emergency appeal launched by his charity, British Asian Trust, and urged people to help India as it copes with a “horrific” second wave of the COVID-19 pandemic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X