ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ್ ಪ್ರವಾಹ: 'ಸಹಾಯ ಬೇಕೆ' ಎಂದು ಭಾರತವನ್ನು ಕೇಳಿದ ಬ್ರಿಟನ್ ಪ್ರಧಾನಿ ಬೋರಿಸ್

|
Google Oneindia Kannada News

ಲಂಡನ್, ಫೆಬ್ರವರಿ 08: ಉತ್ತರಾಖಂಡ್ ಹಿಮ ಪ್ರವಾಹಕ್ಕೆ ಸಿಕ್ಕು ನಲುಗಿ ಹೋಗಿದೆ ಈ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಏನಾದರೂ ಸಹಾಯ ಬೇಕೆ ಎಂದು ಭಾರತವನ್ನು ಕೇಳಿದ್ದಾರೆ.

ಭಾರತಕ್ಕೆ ಯಾವುದೇ ರೀತಿಯ ಸಹಾಯವನ್ನು ಮಾಡಲು ಬ್ರಿಟನ್ ಸಿದ್ಧವಿದೆ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.ಇಂತಹ ಸಂದರ್ಭದಲ್ಲಿ ಯುಕೆ ಭಾರತದೊಂದಿಗೆ ನಿಂತಿದೆ, ಯಾವುದೇ ಸಂದರ್ಭದಲ್ಲಿ ನಾವು ಅಗತ್ಯ ಬೆಂಬಲ ನೀಡಲು ಸಿದ್ಧವಿದ್ದೇವೆ ಎಂದರು.

ಉತ್ತರಾಖಂಡ್ ಪ್ರವಾಹ: ಅಪಾಯದ ಹಂತಕ್ಕೆ ತಲುಪಿದ ಧೌಲಿ ಗಂಗಾ ನದಿ ನೀರಿನ ಮಟ್ಟಉತ್ತರಾಖಂಡ್ ಪ್ರವಾಹ: ಅಪಾಯದ ಹಂತಕ್ಕೆ ತಲುಪಿದ ಧೌಲಿ ಗಂಗಾ ನದಿ ನೀರಿನ ಮಟ್ಟ

ಅಲಕಾನಂದ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದೆ ಹಾಗೆಯೇ ಮನೆಗಳು ಹತ್ತಿರದ ಋಷಿಗಂಗಾ ವಿದ್ಯುತ್ ಯೋಜನೆಗೆ ಹಾನಿ ಉಂಟಾಗಿದೆ.ಚಮೋಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪರ್ವತ ಕುಸಿದು ಡ್ಯಾಂ ಒಡೆದ ಪರಿಣಾಮ ಉಂಟಾದ ಅನಾಹುತದಲ್ಲಿ 10 ಮಂದಿ ಬಲಿಯಾಗಿದ್ದು ಇದೇ ವೇಳೆ ಸುರಂಗದಲ್ಲಿ ಸಿಲುಕಿದ್ದ 16 ಮಂದಿಯನ್ನು ಐಟಿಬಿಪಿ ರಕ್ಷಿಸಿದೆ.

 Any Support Needed UK PM Offers Help After Glacier Burst

ಹಿಮ ಪ್ರವಾಹದಲ್ಲಿ ಬರೋಬ್ಬರಿ 150 ಮಂದಿ ನಾಪತ್ತೆಯಾಗಿದ್ದು ಪ್ರಸ್ತುತ ಹತ್ತು ಮೃತದೇಹಗಳು ಸಿಕ್ಕಿರುವುದಾಗಿ ರಕ್ಷಣಾ ತಂಡಗಳು ತಿಳಿಸಿವೆ.ಧೌಲಿ ಗಂಗಾ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದರಿಂದ ನೀರಿನ ಮಟ್ಟದ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಉತ್ತರ ಪ್ರದೇಶದ ಸರ್ಕಾರ ಗಂಗಾ ತೀರದಲ್ಲಿರುವ ಅಧಿಕಾರಿಗಳನ್ನು ಎಚ್ಚರಿಸಿದೆ.

ಉತ್ತರಾಖಂಡದ ಚಮೋಲಿಯ ಜೋಶಿಮಠದಲ್ಲಿ ಭಾರೀ ಪ್ರಮಾಣದಲ್ಲಿ ಹಿಮ ಪ್ರವಾಹ ದೊಡ್ಡ ಅನಾಹುತ ಸೃಷ್ಠಿಸಿದ್ದು ಇದರ ಬೆನ್ನಲ್ಲೇ ನೆರೆಯ ಉತ್ತರಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಹಿಮನದಿಯ ಸ್ಫೋಟವು ಅಲಕಾನಂದ ನದಿ ವ್ಯವಸ್ಥೆಯಲ್ಲಿ ಹಿಮಪಾತ ಮತ್ತು ಪ್ರವಾಹವನ್ನು ಉಂಟುಮಾಡಿತು. ಅದು ಜಲವಿದ್ಯುತ್ ಕೇಂದ್ರಗಳನ್ನು ಹೊಡೆದು ಹಾಕಿತ್ತು. ಅಲ್ಲ ಸದ್ಯ ಪ್ರವಾಹದಲ್ಲಿ 10 ಮಂದಿ ಮೃತಪಟ್ಟಿದ್ದು 125 ಮಂದಿ ಕಾಣೆಯಾಗಿದ್ದಾರೆ.

ಉತ್ತರಪ್ರದೇಶದ ಜಿಲ್ಲಾ ನ್ಯಾಯಾಧೀಶರಿಗೆ ರಿಲೈಫ್ ಕಮೀಷನರ್ ವಿಪತ್ತು ಎಚ್ಚರಿಕೆಯ ವರದಿ ನೀಡಿದ್ದು "ಉತ್ತರಾಖಂಡದ ನಂದೇವಿ ಹಿಮನದಿಯ ಒಂದು ಭಾಗ ಹೊಡೆದಿರುವ ವರದಿಗಳು ಬಂದಿವೆ. ಗಂಗಾ ನದಿಯ ದಡದಲ್ಲಿರುವ ಜಿಲ್ಲೆಗಳು ಹೆಚ್ಚಿನ ಎಚ್ಚರಿಕೆಯಿಂದಿರಬೇಕು. ಅಲ್ಲದೆ ನಿರಂತರವಾಗಿ ನೀರಿನ ಮಟ್ಟದ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

English summary
British Prime Minister Boris Johnson on Sunday expressed solidarity with India after a glacier burst in Uttarakhand, which led to massive flooding in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X