• search
 • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಲಾಕ್‌ಡೌನ್ ಸಡಿಲ: ಇಂಗ್ಲೆಂಡ್‌ನಲ್ಲಿ ಶಾಲೆ, ಕಾಲೇಜುಗಳು ಪುನರಾರಂಭ

|

ಲಂಡನ್, ಸೆಪ್ಟೆಂಬರ್ 1: ಇಂಗ್ಲೆಂಡ್‌ನಲ್ಲಿ ಲಾಕ್‌ಡೌನ್ ತೆರವುಗೊಳಿಸಲಾಗಿದ್ದು, ಶಾಲಾ, ಕಾಲೇಜುಗಳು ಪುನರಾರಂಭಗೊಂಡಿವೆ.

   Corona ಭೀತಿ ನಡುವೆಯೇ JEE ಪರೀಕ್ಷೆ ಶುರು | Oneindia Kannada

   ಹೆಚ್ಚು ಜನರು ಒಟ್ಟಿಗೆ ಸೇರುವ ಪ್ರದೇಶಗಳು ಹಾಗೂ ಶಾಲೆ-ಕಾಲೇಜುಗಳ ಕಾರಿಡಾರ್‌ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಸಾಕಷ್ಟು ಮಕ್ಕಳಿಗೆ ಶಾಲೆಯ ಹೊಸ ವರ್ಷದ ಆರಂಭವಾಗುತ್ತಿದೆ.ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಮರಳಲು ಸಜ್ಜಾಗಿದ್ದಾರೆ.

   ಕೊರೊನಾ ನಿಯಂತ್ರಣವಿಲ್ಲದ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

   ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗುತ್ತಿದೆ. ಇಂದಿನಿಂದ ಎಲ್ಲಾ ಶಾಲಾ, ಕಾಲೇಜುಗಳು ಪುನರಾರಂಭಗೊಳ್ಳಲಿವೆ.

   ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣಾವಧಿಯ ತರಗತಿಗಳು ಆರಂಭಗೊಳ್ಳುತ್ತಿವೆ. ಶಿಕ್ಷಣದ ಜೊತೆಗೆ ಮಕ್ಕಳ ಬೆಳವಣಿಗೆಗೂ ಇದು ಮುಖ್ಯವಾದುದು ಎಂದು ಇಂಗ್ಲೆಂಡ್‌ನ ಶಿಕ್ಷಣ ಕಾರ್ಯದರ್ಶಿ ವಿಲಿಯಮ್ಸ್ ಹೇಳಿದ್ದಾರೆ.

   ದೇಶಾದ್ಯಂತ ಶಾಲೆ ಆರಂಭದ ದಿನಾಂಕಗಳಲ್ಲಿ ಬದಲಾವಣೆ ಇದ್ದು, ಇಂದಿನಿಂದ ಶೇ.40ರಷ್ಟು ಶಾಲೆಗಳು ಪುನರಾರಂಭಗೊಳ್ಳಲಿವೆ. ಸ್ಕಾಟ್‌ಲೆಂಡ್, ವೇಲ್ಸ್ ನಲ್ಲಿ ಶಾಲೆಗಳು ಈಗಾಗಲೇ ಕಾರ್ಯಾಚರಿಸುತ್ತಿವೆ.

   ಪಾಲಕರಿಗೆ ಹಾಗೂ ಶಾಲೆಗಳಿಗೂ ಇದು ಸುಲಭದ ಮಾತಲ್ಲ, ಆದರೆ ಎಲ್ಲರ ಬೆಂಬಲ, ಶಿಕ್ಷಕರು ಮತ್ತು ಶಾಲೆ ಸಿಬ್ಬಂದಿಯ ಶ್ರಮದಿಂದ ಮತ್ತೆ ವಿದ್ಯಾರ್ಥಿಗಳು ಒಟ್ಟಾಗಿ ತರಗತಿಯಲ್ಲಿ ಪಾಠ ಕಲಿಯಲಿದ್ದಾರೆ.

   ಮಾರಣಾಂತಿಕ ಕೊರೊನಾ ವೈರಸ್ ಮಧ್ಯೆ ಆರ್ಥಿಕ ಇನ್ನಿತರೆ ಚಟುವಟಿಕೆಗಳನ್ನು ಪ್ರಾರಂಭಿಸಿರುವುದು ವಿಪತ್ತನ್ನು ಬರಮಾಡಿಕೊಂಡಂತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

   ವಿಶ್ವ ಆರೋಗ್ಯ ಸಂಸ್ಥೆ ಡೈರೆಕ್ಟರ್ ಜನರಲ್ ಟೆಡ್ರೋಸ್ ಮಾತನಾಡಿ, ಕೊರೊನಾ ಸೋಂಕಿನ ಮೇಲೆ ಯಾವ ದೇಶಗಳು ನಿಯಂತ್ರಣ ಹೊಂದಿದೆ ಅಂತಹ ದೇಶಗಳಲ್ಲಿ ಚಟುವಟಿಕೆಗಳನ್ನು ಆರಂಭಿಸುವುದರಲ್ಲಿ ಅರ್ಥವಿದೆ. ಆದರೆ ಬೇರೆ ದೇಶಗಳಲ್ಲಿ ಕೊರೊನಾ ಸೋಂಕು ಹರಡುವಿಕೆಯ ಗಂಭೀರತೆ ಕುರಿತು ಗಮನ ನೀಡಬೇಕು ಎಂದು ಹೇಳಿದರು.

   ಪ್ರತಿಯೊಂದು ದೇಶದಲ್ಲೂ ಸಮುದಾಯದ ಕಡೆಗೆ ಹೆಚ್ಚು ಒತ್ತು ನೀಡಬೇಕು. ವೈರಸ್ ಹರಡುವುದನ್ನು ತಡೆಯುವುದು, ದುರ್ಬಲ ಗುಂಪುಗಳನ್ನು ರಕ್ಷಿಸುವುದು, ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತ್ಯೇಕ ಕ್ರಮಗಳನ್ನು ಕೈಗೊಳ್ಳುವುದು, ಪ್ರಕರಣಗಳನ್ನು ಪತ್ತೆ ಹಚ್ಚುವುದು, ಪ್ರತ್ಯೇಕಿಸುವುದು ಮತ್ತು ನೋಡಿಕೊಳ್ಳುವುದು ಇವು ಕೂಡ ಪ್ರಮುಖ ಘಟ್ಟವಾಗಿರುತ್ತದೆ.

   English summary
   Hundreds of thousands of children and young people across England are set to resume their classes at schools and colleges from Tuesday after months of lockdown imposed to curb the spread of coronavirus since March. After Months Of Covid Lockdown In England Schools, Colleges Reopen.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X