ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಸಿ ಬಾಂಬ್ ಕರೆ: ಮತ್ತೆ ಆಗಸಕ್ಕೆ ಹಾರಿದ ಏರ್‌ ಇಂಡಿಯಾ ವಿಮಾನ

|
Google Oneindia Kannada News

ಲಂಡನ್, ಜೂನ್ 27: ಬಾಂಬ್ ಬೆದರಿಕೆಯಿಂದ ಲಂಡನ್‌ನಲ್ಲಿ ತುರ್ತು ಲ್ಯಾಂಡ್ ಆಗಿದ್ದ ಏರ್ ಇಂಡಿಯಾ ವಿಮಾನ ಅದು ಹುಸಿ ಬಾಂಬ್ ಕರೆ ಎಂದು ತಿಳಿದ ಬಳಿಕ ಮತ್ತೆ ಆಗಸಕ್ಕೆ ಹಾರಿದೆ.

ಮುಂಬೈನಿಂದ ಅಮರಿಕದ ನೇವಾರ್ಕ್‌ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ತಕ್ಷಣ ಲಂಡನ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಮುಂಬೈಯಿಂದ ಹೊರಟಿದ್ದ AI 191 ವಿಮಾನ ಅಮೆರಿಕದ ನ್ಯೂಜರ್ಸಿಯ ನೇವಾರ್ಕ್ ಗೆ ತಲುಪಬೇಕಿತ್ತು. ಅಷ್ಟರಲ್ಲಿ ಬಾಂಬ್ ಬೆದರಿಕೆ ಕರೆ ಬಂದಿದ್ದರಿಂದ ವಿಮಾನ ಲಂಡನ್ನಿನ ಸ್ಟಾನ್ಸಟೆಡ್ ವಿಮಾನ ನಿಲ್ದಾಣದಲ್ಲಿಯೇ ಲ್ಯಾಂಡ್ ಆಗಿತ್ತು.

ಬಾಂಬ್ ಬೆದರಿಕೆ: ಲಂಡನ್ ನಲ್ಲಿ ಲ್ಯಾಂಡ್ ಆದ ಮುಂಬೈ ಏರ್ ಇಂಡಿಯಾ ವಿಮಾನ ಬಾಂಬ್ ಬೆದರಿಕೆ: ಲಂಡನ್ ನಲ್ಲಿ ಲ್ಯಾಂಡ್ ಆದ ಮುಂಬೈ ಏರ್ ಇಂಡಿಯಾ ವಿಮಾನ

ಸ್ವಲ್ಪ ಸಮಯದ ಬಳಿಕ ಏರ್‌ಇಂಡಿಯಾವು ತನ್ನ ಎಲ್ಲಾ ಟ್ವೀಟ್‌ಗಳನ್ನು ಡಿಲೀಟ್ ಮಾಡಿತ್ತು. ರಾಯ್ಟರ್ಸ್‌ ವರದಿ ಪ್ರಕಾರ ಅದು ಹುಸಿ ಬಾಂಬ್ ಎಂದು ತಿಳಿದುಬಂದಿದೆ. ಲಂಡನ್‌ನಲ್ಲಿ ಬೆಳಗ್ಗೆ 10.45ಕ್ಕೆ ತುರ್ತು ಲ್ಯಾಂಡಿಂಗ್ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿತ್ತು.

After Hoax bomb threat Air India flight back in Air

ವಿಮಾನದಲ್ಲಿ ಎಷ್ಟು ಮಂದಿ ಇದ್ದರು, ಕರೆ ಬಂದಿದ್ದು ಎಲ್ಲಿಂದ ಎಂಬಿತ್ಯಾದಿ ಮಾಹಿತಿ ಕೊನೆಗೂ ಲಭ್ಯವಾಗಿಲ್ಲ. ಇತ್ತೀಚೆಗಷ್ಟೇ ಮೈಸೂರಿನ ವೃದ್ಧರೊಬ್ಬರು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಒಡ್ಡಿದ್ದು ದೊಡ್ಡ ಸುದ್ದಿಯಾಗಿತ್ತು. ಬಳಿಕ ಆತ ಮಾನಸಿಕ ಅಸ್ವಸ್ಥ ಎನ್ನುವುದು ತಿಳಿದುಬಂದಿತ್ತು.

English summary
After Hoax bomb threat Air India flight back in Air, London s Airport had reopened after the precautionary landing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X