ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಟರ್‌.ಕಾಮ್‌ ಬಳಿಕ ಈ ಸಂಸ್ಥೆಯಿಂದ ಒಮ್ಮೆಗೆ 800 ಉದ್ಯೋಗಿಗಳು ವಜಾ!

|
Google Oneindia Kannada News

ಲಂಡನ್, ಮಾರ್ಚ್ 21: ಕಳೆದ ವರ್ಷ ಡಿಸೆಂಬರ್‌ನಲ್ಲಿ ಜೂಮ್ ಕರೆ ಮೂಲಕ ಕಂಪನಿ ಬೆಟರ್.ಕಾಮ್‌ ತನ್ನ 900 ಉದ್ಯೋಗಿಗಳನ್ನು ವಜಾ ಮಾಡಿದೆ. ಈ ಹಾದಿಯಲ್ಲೇ ಸಾಗಿರುವ ಮತ್ತೊಂದು ಕಂಪನಿಯು ಇದೇ ರೀತಿಯಲ್ಲಿ ಜೂಮ್‌ ಕರೆಯ ಮೂಲಕ ಒಮ್ಮೆಗೆ 800 ಉದ್ಯೋಗಿಗಳನ್ನು ವಜಾ ಮಾಡಿದೆ.

ಒಂದೇ ಬಾರಿಗೆ 900 ಉದ್ಯೋಗಿಗಳನ್ನು ವಜಾ ಮಾಡಿದ ಭಾರತೀಯ-ಅಮೆರಿಕನ್ ಸಿಇಒ ವಿಶಾಲ್ ಗರ್ಗ್ ಹೆಜ್ಜೆಗಳನ್ನು ಅನುಸರಿಸಿ, ಮತ್ತೊಂದು ಕಂಪನಿಯು ಈಗ ಅದೇ ರೀತಿಯಲ್ಲಿ ಸುಮಾರು 800 ಉದ್ಯೋಗಿಗಳನ್ನು ವಜಾ ಮಾಡಿದೆ. ಬ್ರಿಟಿಷ್ ಶಿಪ್ಪಿಂಗ್ ಕಂಪನಿ P&O ಫೆರೀಸ್ ತನ್ನ 800 ಉದ್ಯೋಗಿಗಳನ್ನು ಒಟ್ಟಿಗೆ 3 ನಿಮಿಷಗಳ ಕಾಲ ಜೂಮ್ ಕರೆ ಮೂಲಕ ವಜಾ ಮಾಡಿದೆ.

Viral Video: 900 ಮಂದಿಯನ್ನು ಒಮ್ಮೆಗೆ ಕಂಪನಿಯಿಂದ ಹೊರಕಳಿಸಿದ ಸಿಇಒ ವಿಶಾಲ್Viral Video: 900 ಮಂದಿಯನ್ನು ಒಮ್ಮೆಗೆ ಕಂಪನಿಯಿಂದ ಹೊರಕಳಿಸಿದ ಸಿಇಒ ವಿಶಾಲ್

ಇನ್ನು ಉದ್ಯೋಗಿಗಳಿಗೆ ನೋಟಿಸ್ ಅವಧಿಯನ್ನು ನೀಡಲು ಕೂಡಾ ಅನುಮತಿ ಇಲ್ಲ ಎಂದು ಡೈಲಿ ಮೇಲ್ ವರದಿ ಮಾಡಿದೆ. ಈ ಹಿಂದೆ ಕೇವಲ 3 ನಿಮಿಷದ ಮೀಟಿಂಗ್‌ನಲ್ಲಿ 900 ಮಂದಿಯನ್ನು ಕೆಲಸ ತೊರೆಯುವಂತೆ ಭಾರತೀಯ ಮೂಲದ ಸಿಇಒ ವಿಶಾಲ್ ಗರ್ಗ್ ಸೂಚಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು ಎಂಬುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

After Better.com One more Company Fires 800 Employees Over 3-Minute Zoom Call

ಜೂಮ್‌ ಕರೆಯಲ್ಲಿ ಪಿ ಆಂಡ್‌ ಒ ಮುಖ್ಯಸ್ಥರು ಹೇಳಿದ್ದು ಏನು?

"ನಿಮ್ಮನ್ನು ಉದ್ಯೋಗದಿಂದ ಕೂಡಲೇ ವಜಾ ಮಾಡಲಾಗಿದೆ ಎಂದು ನಾನು ನಿಮಗೆ ತಿಳಿಸಲು ವಿಷಾದಿಸುತ್ತೇನೆ," ಎಂದು ಜೂಮ್‌ ಕರೆಯ ಮೂಲಕ ಬ್ರಿಟಿಷ್ ಶಿಪ್ಪಿಂಗ್ ಕಂಪನಿ P&O ಫೆರೀಸ್ ಮುಖ್ಯಸ್ಥರು ಹೇಳಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ. ಸಂಸ್ಥೆಯು "ಮುಂದಿನ ಕೆಲವು ದಿನಗಳವರೆಗೆ" ನೌಕಾಯಾನವನ್ನು ಸ್ಥಗಿತಗೊಳಿಸಿದೆ ಎಂದು ಕೂಡಾ ತಿಳಿಸಿದ್ದಾರೆ.

ಆದರೆ ಸಾರಿಗೆ ಕಾರ್ಯದರ್ಶಿ ರೂಬರ್ಟ್ ಕೋರ್ಟ್ಸ್ ಪ್ರಯಾಣಿಕರಿಗೆ 10 ದಿನಗಳವರೆಗೆ ಅಡಚಣೆ ಉಂಟಾಗಬಹುದು ಎಂಬ ಮಾಹಿತಿ ನೀಡಿದ್ದಾರೆ. ಇನ್ನು ಮುಂದೆ ಸಿಬ್ಬಂದಿ ಪೂರೈಕೆದಾರರು ಸಿಬ್ಬಂದಿಗಳನ್ನು ಸಂಸ್ಥೆಗೆ ಪೂರೈಕೆ ಮಾಡಲಿದ್ದಾರೆ ಎಂದು ಕಂಪನಿಯು ನಿರ್ಧಾರವನ್ನು ಮಾಡಿದೆ ಎಂದು ಹಿರಿಯ P & O ಮ್ಯಾನೇಜರ್ ಗುರುವಾರ ನಾವಿಕರಿಗೆ ತಿಳಿಸಿದರು. ಕೊರೊನಾ ವೈರಸ್‌ ಸಾಂಕ್ರಾಮಿಕ ಸಂದರ್ಭದಲ್ಲಿ 1,100 ಉದ್ಯೋಗಿಗಳಿಗೆ ಪಾವತಿಗಳನ್ನು ಮಾಡಲು ಬ್ರಿಟಿಷ್ ಕಂಪನಿಯು ಯುಕೆ ಸರ್ಕಾರದಿಂದ 10 ಮಿಲಿಯನ್ ಪೌಂಡ್‌ಗಳನ್ನು ಫರ್ಲೋ ನಗದು ರೂಪದಲ್ಲಿ ಸ್ವೀಕರಿಸಿತ್ತು.

ಬೆಟರ್‌.ಕಾಮ್‌ನಲ್ಲಿ ಉದ್ಯೋಗಿಗಳು ಒಮ್ಮೆಗೆ ವಜಾ

ಕೇವಲ 3 ನಿಮಿಷದ ಜೂಮ್ ಮೀಟಿಂಗ್‌ವೊಂದರಲ್ಲಿ ನ್ಯೂಯಾರ್ಕ್ ಮೂಲದ ಅಡಮಾನ ಸಾಲ ನೀಡುವ ಬೆಟರ್ ಡಾಟ್ ಕಾಂ ಎಂಬ ಸಂಸ್ಥೆಯು ಸೂಚನೆ ನೀಡಿತ್ತು. ಭಾರತೀಯ ಮೂಲದ ಸಿಇಒ ವಿಶಾಲ್ ಗರ್ಗ್ ತನ್ನ ಉದ್ಯೋಗಿಗಳೊಂದಿಗೆ ನಡೆಸಿದ ಮೂರು ನಿಮಿಷಗಳ ವಿಡಿಯೋ ಕರೆಯಲ್ಲಿ 900 ಮಂದಿಯನ್ನು ಕೆಲಸ ತೊರೆಯುವಂತೆ ಸೂಚನೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು.

ಬೆಟರ್ ಡಾಟ್ ಕಾಂ ಸಂಸ್ಥೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇ 9ರಷ್ಟು ತಗ್ಗಿಸಿಕೊಂಡಿದ್ದು, ಎಲ್ಲರನ್ನು ಜೂಮ್ ಮೀಟಿಂಗ್ ನಲ್ಲೇ ವಜಾಗೊಳಿಸಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಯುಎಸ್ ಹಾಗೂ ಭಾರತದಲ್ಲಿ ಕಚೇರಿ ಹೊಂದಿರುವ ಸಂಸ್ಥೆಯ 900 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಿಇಒ ಮೂರು ನಿಮಿಷಗಳ ಜೂಮ್ ಕರೆ ಮೂಲಕ ಸಮಯದಲ್ಲಿ ಹಠಾತ್ತನೆ ವಜಾ ಮಾಡಿದ್ದಾರೆ. ಜೂಮ್ ಕರೆ ಸಭೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ವಜಾಗೊಂಡ ಉದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವಜಾಗೊಳಿಸಿದ ಉದ್ಯೋಗಿಗಳು ನಾಲ್ಕು ವಾರಗಳ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶ, ಒಂದು ತಿಂಗಳ ಸಂಪೂರ್ಣ ಪ್ರಯೋಜನಗಳು ಮತ್ತು ಎರಡು ತಿಂಗಳ ಕವರ್-ಅಪ್‌ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ, ಇದಕ್ಕಾಗಿ ಕಂಪನಿಯು ಪ್ರೀಮಿಯಂ ಪಾವತಿಸುತ್ತದೆ ಎಂದು ಬೆಟರ್ ಡಾಟ್ ಕಾಂ ತಿಳಿಸಿತ್ತು. ಆದರೆ ಈ ಬ್ರಿಟಿಷ್‌ ಕಂಪನಿಯಲ್ಲಿ ತಕ್ಷಣಕ್ಕೆ ವಜಾ ಮಾಡಲಾಗಿದೆ.

English summary
After Better.com British shipping company Fires 800 Employees Over 3-Minute Zoom Call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X