• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

6 ಅಂಕಿ ಸಂಬಳ ಗಳಿಸುತ್ತಿರುವ 23ರ ಹರೆಯದ ಟಿಕ್ ಟಾಕ್ ಸ್ಟಾರ್!

|

ಲಂಡನ್, ಡಿಸೆಂಬರ್ 02: ಭಾರತದಲ್ಲಿ ವಿಡಿಯೋ ಹಂಚಿಕೆ ತಾಣ ಟಿಕ್ ಟಾಕ್ ಪರ ವಿರೋಧ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಬ್ರಿಟನ್ನಿನ 23ರ ಯುವತಿಯೊಬ್ಬಳು ಟಿಕ್ ಟಾಕ್ ವಿಡಿಯೋ ಮೂಲಕ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಲ್ಲದೆ, ಆರು ಅಂಕಿ ಸಂಬಳ ಎಣಿಸುತ್ತಿದ್ದಾಳೆ.

ಬ್ರಿಟನ್ನಿನ ಸೂಪರ್ ಸ್ಟಾರ್ ಹಾಲಿ ಹಾರ್ನೆಗೆ ಸುಮಾರು 16 ಮಿಲಿಯನ್ ಫ್ಯಾನ್ಸ್ ಇದ್ದಾರೆ. ಭದ್ರತಾ ಸಿಬ್ಬಂದಿ ಜೊತೆಗೆ ತಿರುಗಬೇಕಾದ ಅನಿವಾರ್ಯತೆ ಈ ಸೆಲಿಬ್ರಿಟಿಗೆ ಬಂದಿದೆ. ಕಾರಣ, ಆಕೆ ದಿನದಿಂದ ದಿನಕ್ಕೆ ಪಡೆದುಕೊಳ್ಳುತ್ತಿರುವ ಜನಪ್ರಿಯತೆ ಹಾಗೂ ಗಳಿಸುತ್ತಿರುವ ಮೊತ್ತ.

ಟಿಕ್‌ಟಾಕ್ ವಿಡಿಯೋ ಮಾಡ್ತೀರಾ?: ಈ ಅಂಶಗಳು ನಿಮ್ಮ ಗಮನದಲ್ಲಿರಲಿ

ಕೇವಲ 10 ರಿಂದ 15 ಸೆಕೆಂಡುಗಳ ಕಾಲದ ವಿಡಿಯೋ ತುಣುಕು ಆಕೆಗೆ ಸ್ಟಾರ್ ಪಟ್ಟವನ್ನು ನೀಡಿದೆ. ಆಕೆಯ ಒಂದು ವಿಡಿಯೋ 77.2 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟಿದೆ.

ಇದಕ್ಕೆ ಹೋಲಿಸಿದರೆ ಬಿಬಿಸಿಯ ಸ್ಟ್ರಿಕ್ಲಿ ಕಮ್ ಡ್ಯಾನ್ಸಿಂಗ್ ಪ್ರತಿ ಎಪಿಸೋಡಿಗೆ 10 ಮಿಲಿಯನ್ ವೀಕ್ಷಣೆ ಪಡೆದರೆ ಹೆಚ್ಚು ಎಂದು ಮೇಲ್ ಆನ್ ಲೈನ್ ವರದಿ ಮಾಡಿದೆ.

ಹಾಲಿಗೆ ಇರುವ ಹಿಂಬಾಲಕರ ಪಟ್ಟಿ ನೋಡಿದರೆ ಬಹುತೇಕ 8 ರಿಂದ 15 ವಯೋಮಿತಿಯವರೇ ಇದ್ದಾರೆ. ಇತ್ತೀಚಿನ ಜನಪ್ರಿಯ ಪಾಪ್ ಗೀತೆಗೆ ಲಿಪ್ ಸಿಂಕ್ ಮಾಡುವುದು, ಜನಪ್ರಿಯ ಹಾಡಿಗೆ ಡ್ಯಾನ್ಸ್ ಮಾಡುವುದು ಹೀಗೆ ಎಲ್ಲರೂ ಟಿಕ್ ಟಾಕ್ ನಲ್ಲಿ ಮಾಡುವಂತೆ ಹಾಲಿ ವಿಡಿಯೋ ಮಾಡುತ್ತಿದ್ದಾಳೆ. ಆದರೆ ಹಾಲಿಯ ಮುಗ್ಧತೆ ಎಲ್ಲರಿಗೂ ಮೆಚ್ಚುಗೆಯಾಗಿದೆ, ಆಕೆ ದೊಡ್ಡ ದೊಡ್ಡ ಕಂಪನಿಗಳ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರಿ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಿದ್ದಾಳೆ.

ಟಿಕ್ ಟಾಕ್ ನಲ್ಲಿ ಹಾಸ್ಯ, ಗೇಲಿ, ಮಿಮಿಕ್ರಿ ವಿಡಿಯೋಗಳ ನಡುವೆ ತಮ್ಮ ಮಗಳ ವಿಡಿಯೋಗಳು ಜನಪ್ರಿಯಗೊಂಡು ಅದರಿಂದ ನಿರೀಕ್ಷೆಗೂ ಮೀರಿದ ಹಣ ಸಿಗುತ್ತಿರುವುದಕ್ಕೆ ಹಾಲಿ ತಾಯಿ ಜ್ಯೂಡಿ (45) ಸಕತ್ ಖುಷಿಯಾಗಿದ್ದಾರೆ.

ಹಾಲಿ ಅಲ್ಲದೆ, ಮೇಗನ್(19), ಫೀನಿಕ್ಸ್ (12) ಎಂಬ ಇನ್ನಿಬ್ಬರು ಮಕ್ಕಳನ್ನು ಜ್ಯೂಡಿ ಹೊಂದಿದ್ದಾರೆ. ಗುರ್ನ್ಸೆಯಿಂದ ಪಶ್ಚಿಮ ಸಸೆಕ್ಸ್ ನ 4 ಬೆಡ್ ರೂಮ್ ಮನೆಗೆ ಇತ್ತೀಚೆಗೆ ಶಿಫ್ಟ್ ಆಗಿದ್ದಾರೆ. ಲಂಡನ್ ಹತ್ತಿರವಿದ್ದರೆ ಆಡ್ ಕಂಪನಿ ಜೊತೆ ಒಡನಾಟ ಸುಲಭ ಎಂಬುದು ಜ್ಯೂಡಿ ಯೋಚನೆ. ಮಗಳನ್ನು ಕಾಯಲು ಬಾಡಿಗಾರ್ಡ್ ಗಳನ್ನು ನೇಮಿಸಿದ್ದಾರೆ.

English summary
Holly Horne She is only 23, but already has 16 million fans on social media video app TikTok. She needs to be protected by bodyguards and her earnings have made her mother quit her job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X