ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್‌ನಲ್ಲಿ ಭಾರತ ಮೂಲದ ವ್ಯಕ್ತಿಗೆ ಮೊದಲ ಕೊರೊನಾ ಲಸಿಕೆ

|
Google Oneindia Kannada News

ಲಂಡನ್, ಡಿಸೆಂಬರ್ 08: ಭಾರತ ಮೂಲದ ವ್ಯಕ್ತಿಯೊಬ್ಬರಿಗೆ ಲಂಡನ್‌ನಲ್ಲಿ ಮೊದಲ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ.

ನ್ಯೂಕ್ಯಾಸಲ್ ಆಸ್ಪತ್ರೆಯಲ್ಲಿ ಮಂಗಳವಾರ ಫೈಜರ್ ಬಯೋ ಎನ್‌ಟೆಕ್ ಕೊವಿಡ್ ಲಸಿಕೆಯನ್ನು ಕೊಡಲಾಗುತ್ತಿದೆ. ಈ ಮೂಲಕ ಕೊರೊನಾ ಲಸಿಕೆ ಪಡೆದ ವಿಶ್ವದ ಮೊದಲ ವ್ಯಕ್ತಿ ಎಂದೆನಿಸಿಕೊಳ್ಳಲಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ಅನುಮತಿಗೆ ಭಾರತ್ ಬಯೋಟೆಕ್ ಮನವಿಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ಅನುಮತಿಗೆ ಭಾರತ್ ಬಯೋಟೆಕ್ ಮನವಿ

87 ವರ್ಷದ ವ್ಯಕ್ತಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಕೊರೊನಾ ಲಸಿಕೆಯ ಎರಡು ಡೋಸ್‌ಗಳ ಪೈಕಿ ಒಂದು ಡೋಸ್‌ ಅನ್ನು ಇಂದು ಪಡೆಯಲಿದ್ದೇನೆ, ಅದು ನನ್ನ ಕರ್ತವ್ಯ ಎಂದು ಅವರು ಹೇಳಿದ್ದಾರೆ.

87 Year Old Indian Origin Man First To Get Covid-19 Vaccine In UK

ಲಸಿಕೆಯನ್ನು ಪಡೆಯುವ ಮೂಲಕ ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಸಣ್ಣ ಕೆಲಸವನ್ನು ಮಾಡುತ್ತಿದ್ದೇನೆ ಎನ್ನುವ ತೃಪ್ತಿ ನನಗಿದೆ. ನನ್ನಿಂದಾಗುವ ಎಲ್ಲಾ ಸಹಾಯವನ್ನು ನಾನು ಮಾಡುತ್ತೇನೆ ಎಂದರು.

ಲಸಿಕೆ ಅಭಿವೃದ್ಧಿ ಪಡಿಸಿರುವ ವಿಜ್ಞಾನಿಗಳು, ಲಸಿಕೆ ಪ್ರಯೋಗದಲ್ಲಿ ಭಾಗಿಯಾದ ಸಾರ್ವಜನಿಕರು ಹಾಗೂ ಎನ್‌ಎಚ್‌ಸಿ ಸದಸ್ಯರ ಮೇಲೆ ನನಗೆ ಅಪಾರ ಗೌರವ ಇದೆ ಎಂದು ಪ್ರಧಾನಿ ಜಾನ್ಸನ್ ಹೇಳಿದ್ದಾರೆ.

ಕೊವಿಡ್ ನಿಯಂತ್ರಿಸಲು ರಾಷ್ಟ್ರೀಯ ಆರೋಗ್ಯ ಸೇವೆ ಸಾಕಷ್ಟು ಶ್ರಮವಹಿಸುತ್ತಿದೆ. ಅವರನ್ನು ನಾನು ಗೌರವಿಸುತ್ತೇನೆ , ಅವರದ್ದು ಚಿನ್ನದಂತಹ ಹೃದಯ ಕೊರೊನಾ ಸೋಂಕಿನಿಂದ ನಮ್ಮನ್ನು ರುಕ್ಷಿತವಾಗಿಡಲು ಹೋರಾಡುತ್ತಿದ್ದಾರೆ ಇದಕ್ಕೆ ನಾನು ಕೃತಜ್ಞನಾಗಿರುತ್ತೇನೆ ಎಂದು ಸ್ವಯಂಸೇವಕರು ತಿಳಿಸಿದ್ದಾರೆ.

English summary
An 87-year-old Indian-origin man from the north east of England will become one of the first people in the world to get a vaccine against Covid-19 when he receives his Pfizer/BioNTech jab at a hospital in Newcastle on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X