ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

72 ವರ್ಷದ ವ್ಯಕ್ತಿಯ ದೇಹದಲ್ಲಿ 10 ತಿಂಗಳುಗಳ ಕಾಲ ಇತ್ತು ಕೊರೊನಾ ಸೋಂಕು

|
Google Oneindia Kannada News

ಲಂಡನ್, ಜೂನ್ 24: ಒಂದು ಬಾರಿ ಕೊರೊನಾ ಬಂದರೇ ಉಳಿಯುವುದು ಕಷ್ಟ ಆದರೆ 72 ವರ್ಷದ ವ್ಯಕ್ತಿ 43 ಬಾರಿ ಪರೀಕ್ಷೆ ಮಾಡಿಸಿದಾಗಲೂ ಕೊರೊನಾ ಪಾಸಿಟಿವ್ ಬಂದಿದ್ದು, ಸುಮಾರು 10 ತಿಂಗಳುಗಳ ಕಾಲ ಕೊರೊನಾ ಸೋಂಕು ಅವರ ದೇಹದಲ್ಲೇ ಇದ್ದ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.

72 ವರ್ಷದ ಬ್ರಿಟಿಷ್ ವ್ಯಕ್ತಿಗೆ 10 ತಿಂಗಳುಗಳ ಕಾಲ ಪರೀಕ್ಷೆ ಮಾಡಿಸಿದಾಗಲೆಲ್ಲಾ ಕೊರೊನಾ ಪಾಸಿಟಿವ್ ಬರುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಕೊರೊನಾ ಸೋಂಕು ಇಷ್ಟೊಂದು ದೀರ್ಘ ಕಾಲದ ವರೆಗೆ ದೇಹದಲ್ಲಿದ್ದ ಮೊದಲ ಪ್ರಕರಣ ಎಂದು ಹೇಳಲಾಗಿದೆ.

Stories Of Strength: ಕೊರೊನಾ ಗೆದ್ದು ಸ್ಫೂರ್ತಿಯಾದ 98 ವರ್ಷದ ವೃದ್ಧStories Of Strength: ಕೊರೊನಾ ಗೆದ್ದು ಸ್ಫೂರ್ತಿಯಾದ 98 ವರ್ಷದ ವೃದ್ಧ

ಡೇವ್ ಸ್ಮಿಥ್ ಬ್ರಿಸ್ಟೋಲ್‌ನವರಾಗಿದ್ದು, 43 ಬಾರಿ ಇವರಿಗೆ ಪಾಸಿಟಿವ್ ಬಂದಿತ್ತು, 7 ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಕೊನೆಗೆ ಅವರ ಅಂತ್ಯಕ್ರಿಯೆಗೂ ತಯಾರಿ ನಡೆದಿತ್ತು. ಅವರ ಪತ್ನಿ ಲಿಂಡಾ ಪತಿಯನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿದ್ದರು, ವರ್ಷಗಳ ಕಾಲ ನರಕವನ್ನು ಅನುಭವಿಸಿದ್ದರು.

72-Year-Old UK Man Tested Covid Positive For 10 Straight Months

ಈ ಕುರಿತು ಯೂನಿವರ್ಸಿಟಿ ಆಫ್ ಬ್ರಿಸ್ಟೋಲ್‌ನ ಎಡ್ ಮಾರನ್ ಮಾತನಾಡಿ'' ಅವರ ದೇಹದಲ್ಲಿ ಆಕ್ಟೀವ್ ವೃರಸ್‌ಗಳಿದ್ದವು'' ಎಂದು ಹೇಳಿದ್ದಾರೆ. ಅವರ ವೈರಸ್ ಮಾದರಿಯನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿತ್ತು, ಅದು ಸಕ್ರಿಯ ಹಾಗೂ ಕಾರ್ಯಸಾಧ್ಯವಾದ ವೈರಸ್ ಎಂಬುದು ತಿಳಿದುಬಂದಿದೆ. ಸ್ಮಿಥ್ ಅವರು ಕಾಕ್‌ಟೈಲ್ ಚಿಕಿತ್ಸೆ ಬಳಿಕ ಗುಣಮುಖರಾದರು, ಅವರ ದೇಹದಲ್ಲಿ ಈಗ ಪ್ರತಕಾಯ ಸೃಷ್ಟಿಯಾಗಿದೆ. ಆದರೆ ಈ ಚಿಕಿತ್ಸೆಗೆ ಬ್ರಿಟನ್‌ನಲ್ಲಿ ಅನುಮತಿ ನೀಡಿಲ್ಲ.

ಮೊದಲು ಕೊರೊನಾ ಸೋಂಕು ತಗುಲಿ 305 ದಿನಗಳ ಬಳಿಕ ನೆಗೆಟಿವ್ ಬಂದಿತ್ತು. ಅಲ್ಲಿಯವರೆಗೆ 43 ಬಾರಿ ಪಾಟಿಸಿವ್ ಬಂದಿತ್ತು. ಹೇಗೆ ದೇಹದಲ್ಲಿ ಸೋಂಕು ಅಡಗಿಕೊಳ್ಳುತ್ತದೆ, ಬೇರೆಯವರಿಗೆ ಹರಡುತ್ತದೆ ನಮಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದು ಡೇವಿಡ್‌ಸನ್ ಹೇಳಿದ್ದಾರೆ.ಸ್ಮಿತ್ ಲುಕೇಮಿಯಾದಿಂದ ನರಗಳುತ್ತಿತ್ತು ಇತ್ತೀಚೆಗಷ್ಟೇ ಗುಣಮುಖರಾಗಿದ್ದರು.

English summary
A 72-year-old British man tested positive for coronavirus for 10 months in what is thought to be the longest recorded case of continuous infection, researchers said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X