ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರಾಜೆನಿಕಾ ಲಸಿಕೆ ಪಡೆದು ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾದವರಲ್ಲಿ 7 ಮಂದಿ ಸಾವು

|
Google Oneindia Kannada News

ಲಂಡನ್, ಏಪ್ರಿಲ್ 7: ಆಕ್ಸ್‌ಫರ್ಡ್- ಆಸ್ಟ್ರಾಜೆನಿಕಾದ ಲಸಿಕೆ ಪಡೆದುಕೊಂಡು ಅಪರೂಪದ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಎದುರಿಸಿರುವ 30 ಮಂದಿಯ ಪೈಕಿ ಏಳು ರೋಗಿಗಳು ಮೃತಪಟ್ಟಿದ್ದಾರೆ ಎಂದು ಬ್ರಿಟನ್‌ನ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್ ವಿವಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿರುವ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳು ಅನೇಕ ಕಡೆ ಪತ್ತೆಯಾದ ಕಾರಣದಿಂದ ಯುರೋಪ್‌ನ ವಿವಿಧ ದೇಶಗಳು ಈಗಾಗಲೇ ಈ ಲಸಿಕೆ ಬಳಕೆಯನ್ನು ತಡೆಹಿಡಿದಿವೆ.

ಆಸ್ಟ್ರಾಜೆನಿಕಾ ಲಸಿಕೆ ಪಡೆದ 30 ಮಂದಿಯಲ್ಲಿ ಬ್ಲಡ್ ಕ್ಲಾಟ್ ಪ್ರಕರಣಆಸ್ಟ್ರಾಜೆನಿಕಾ ಲಸಿಕೆ ಪಡೆದ 30 ಮಂದಿಯಲ್ಲಿ ಬ್ಲಡ್ ಕ್ಲಾಟ್ ಪ್ರಕರಣ

ಬ್ರಿಟನ್‌ನ ಔಷಧೀಯ ಮತ್ತು ಆರೋಗ್ಯ ಆರೈಕೆ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್ಆರ್‌ಎ) ಹೇಳಿಕೆ ಬಿಡುಗಡೆ ಮಾಡಿದ್ದು, ಇದುವರೆಗೂ ವರದಿಯಾದ ರಕ್ತ ಹೆಪ್ಪುಗಟ್ಟುವಿಕೆಯ 30 ಪ್ರಕರಣಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

7 Dies In UK Among 30 Who Suffered Rare Blood Clots After AstraZeneca Vaccine

ಬ್ರಿಟನ್‌ನಲ್ಲಿ ಇದುವರೆಗೂ ಆಸ್ಟ್ರಾಜೆನಿಕಾದ 18.1 ಮಿಲಿಯನ್ ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಇವರಲ್ಲಿ 30 ಮಂದಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಪತ್ತೆಯಾಗಿದೆ. ಈ ಪೈಕಿ 22 ಜನರಲ್ಲಿ ಸೆರೆಬ್ರಲ್ ವೆನೊಸ್ ಸಿನಸ್ ಥ್ರಾಂಬೋಸಿಸ್ ಎಂಬ ಅಪರೂಪದ ಹೆಪ್ಪುಗಟ್ಟುವಿಕೆ ಸ್ಥಿತಿ ಕಂಡುಬಂದಿತ್ತು. ಎಂಟು ಪ್ರಕರಣಗಳಲ್ಲಿ ಕಡಿಮೆ ಮಟ್ಟದ ರಕ್ತದ ಪ್ಲೇಟ್‌ಲೆಟ್ಸ್ ಜತೆಗೆ ವಿಭಿನ್ನ ಬಗೆಯ ಥ್ರಾಂಬೋಸಿಸ್ ವರದಿಯಾಗಿದ್ದವು.

ಆದರೆ ಇದುವರೆಗೂ ಫೈಜರ್- ಬಯೋಎನ್‌ಟೆಕ್ ಲಸಿಕೆ ಪಡೆದುಕೊಂಡವರಲ್ಲಿ ಇಂತಹ ಸಮಸ್ಯೆ ಕಂಡುಬಂದಿಲ್ಲ. ಹೀಗಾಗಿ ಈ ಸಮಸ್ಯೆ ಆಸ್ಟ್ರಾಜೆನಿಕಾ ಲಸಿಕೆಯಿಂದಲೇ ಉಂಟಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಪ್ರಕರಣಗಳ ವರದಿಗಳನ್ನು ಪರಾಮರ್ಶೆ ಮಾಡಲಾಗುತ್ತಿದೆ. ಉಳಿದ ಲಸಿಕೆಗಳನ್ನು ಪಡೆದ ಜನರ ಆರೋಗ್ಯದ ಬಗ್ಗೆಯೂ ನಿಗಾ ವಹಿಸಲಾಗಿದೆ.

ಕೊರೊನಾವೈರಸ್ ಏರಿಕೆ ನಡುವೆ ಲಸಿಕೆ ವಿತರಣೆಯಲ್ಲಿ ಇಳಿಕೆ!?ಕೊರೊನಾವೈರಸ್ ಏರಿಕೆ ನಡುವೆ ಲಸಿಕೆ ವಿತರಣೆಯಲ್ಲಿ ಇಳಿಕೆ!?

ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣ ಮತ್ತು ಆಸ್ಟ್ರಾಜೆನಿಕಾ ಲಸಿಕೆ ನಡುವೆ ಸಂಬಂಧವಿದೆ ಎನ್ನುವುದು ಇದುವರೆಗೂ ದೃಢಪಟ್ಟಿಲ್ಲ ಎಂದು ಎಂಎಚ್‌ಆರ್‌ಎ ಮತ್ತು ಯುರೋಪಿಯನ್ ಔಷಧೀಯ ಸಂಸ್ಥೆಗಳೆರಡೂ ತಿಳಿಸಿವೆ. ಆದರೆ ಈ ಲಸಿಕೆಯ ಬಳಕೆಯನ್ನು ಅನೇಕ ದೇಶಗಳು ಸ್ಥಗಿತಗೊಳಿಸಿವೆ. ಯುವ ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿಕೆಲವು ದೇಶಗಳು ಈ ಲಸಿಕೆಯನ್ನು ವಯಸ್ಕರಿಗೆ ಮಾತ್ರ ಬಳಸುತ್ತಿವೆ.

ನೆದರ್ಲ್ಯಾಂಡ್ಸ್ ಕಳೆದ ಶುಕ್ರವಾರ ಆಸ್ಟ್ರಾಜೆನಿಕಾ ಲಸಿಕೆ ಬಳಕೆಗೆ ತಡೆ ನೀಡಿದೆ. ಜರ್ಮನಿಯಲ್ಲಿ 60 ವರ್ಷದೊಳಗಿನ 31 ಮಂದಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದ ಹಿನ್ನೆಲೆಯಲ್ಲಿ ಲಸಿಕೆಯನ್ನು ಅಮಾನತುಗೊಳಿಸಿದೆ. ಫ್ರಾನ್ಸ್, ಡೆನ್ಮಾರ್ಕ್, ನಾರ್ವೆಗಳಲ್ಲಿ ಕೂಡ ಆಸ್ಟ್ರಾಜೆನಿಕಾ ಲಸಿಕೆ ಬಳಕೆ ಮೇಲೆ ನಿರ್ಬಂಧ ವಿಧಿಸಲಾಗಿದೆ.

English summary
7 Dies in UK among 30 who were suffered a rare blood clots issue after taking AstraZeneca- Oxford vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X