ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮೀನು ಷರತ್ತು ಉಲ್ಲಂಘನೆ: ಜೂಲಿಯನ್ ಅಸಾಂಜ್‌ಗೆ 50 ವಾರ ಶಿಕ್ಷೆ

|
Google Oneindia Kannada News

ಲಂಡನ್, ಮೇ 1: ಜಾಮೀನು ನಿಬಂಧನೆಗಳನ್ನು ಉಲ್ಲಂಘನೆ ಮಾಡಿದ ತಪ್ಪಿಗಾಗಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರಿಗೆ 50 ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಲಂಡನ್‌ನಲ್ಲಿ ಏಳು ವರ್ಷಗಳ ಹಿಂದೆ ಈಕ್ವೆಡಾರ್‌ನ ರಾಜತಾಂತ್ರಿಕ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ಸಂದರ್ಭದಲ್ಲಿ ಅಸಾಂಜ್ ಅವರು ಜಾಮೀನು ನಿಬಂಧನೆಗಳನ್ನು ಉಲ್ಲಂಘಿಸಿದ್ದರು ಎಂದು ಅರೋಪಿಸಲಾಗಿದೆ.

ಈಕ್ವೆಡಾರ್ : ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆ ಬಂಧನ ಈಕ್ವೆಡಾರ್ : ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆ ಬಂಧನ

ಲಂಡನ್‌ನ ಸೌತ್‌ವರ್ಕ್‌ ಕ್ರೌನ್‌ ಕೋರ್ಟ್‌ನಲ್ಲಿ ಅಸಾಂಜ್ ಅವರ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲಾಯಿತು.

50 weeks jail for wikileaks founder Julian assange for breaching bail in 2012

ವಿವಿಧ ದೇಶಗಳ ಅತ್ಯಂತ ಮಹತ್ವದ ರಹಸ್ಯಗಳನ್ನು ಅಂತರ್ಜಾಲದಲ್ಲಿ ಸೋರಿಕೆ ಮಾಡುವ ಮೂಲಕ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ವಿರುದ್ಧ ಸ್ವೀಡನ್‌ನ ಇಬ್ಬರು ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

ಜೂಲಿಯನ್ ಅಸಾಂಜೆಗೆ ಪೌರತ್ವ ನೀಡಿದ ಈಕ್ವೆಡಾರ್ ಜೂಲಿಯನ್ ಅಸಾಂಜೆಗೆ ಪೌರತ್ವ ನೀಡಿದ ಈಕ್ವೆಡಾರ್

ಈ ಪ್ರಕರಣದಿಂದ ಸ್ವೀಡನ್‌ಗೆ ಗಡಿಪಾರಾಗುವ ಭೀತಿಗೆ ಒಳಗಾಗಿದ್ದ ಅಸಾಂಜ್, 2012ರಲ್ಲಿ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದರು. 2017ರಲ್ಲಿ ಸ್ವೀಡನ್ ಅವರ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಕೈಬಿಟ್ಟಿತು. ಆದರೆ, ಜಾಮೀನು ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದರಿಂದ ಏಪ್ರಿಲ್ 11ರಂದು ಈಕ್ವೆಡಾರ್ ರಾಜತಾಂತ್ರಿಕ ಕಚೇರಿಯಲ್ಲಿ ಮೆಟ್ರೊಪಾಲಿಟನ್ ಪೊಲೀಸ್ ಸರ್ವಿಸ್‌ನ ಅಧಿಕಾರಿಗಳು ಬಂಧಿಸಿದ್ದರು.

English summary
A London court sentenced Wikileaks founder Julian assange for 50 weeks jail for breaching bail conditions in 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X