ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಜೈಶಂಕರ್ ಜತೆ ಬ್ರಿಟನ್ ಪ್ರವಾಸದಲ್ಲಿರುವ ಇಬ್ಬರಿಗೆ ಕೊರೊನಾ ಸೋಂಕು

|
Google Oneindia Kannada News

ಲಂಡನ್, ಮೇ 05: ಸಚಿವ ಜೈಶಂಕರ್ ಜತೆಗೆ ಬ್ರಿಟನ್ ಪ್ರವಾಸದಲ್ಲಿರುವ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜಿ 7 ರಾಷ್ಟ್ರಗಳ ವಿದೇಶಾಂಗ ಹಾಗೂ ಅಭಿವೃದ್ಧಿ ಸಚಿವರ ಸಭೆಗಾಗಿ ಬ್ರಿಟನ್ ನ ವಿದೇಶಾಂಗ ಕಾರ್ಯದರ್ಶಿ ಡೋಮಿನಿಕ್ ರಾಬ್ ಅವರ ಆಹ್ವಾನದ ಮೇರೆಗೆ ಮೇ.03 ರಿಂದ 7 ವರೆಗೆ ಜೈಶಂಕರ್ ಬ್ರಿಟನ್ ಪ್ರವಾಸದಲ್ಲಿದ್ದಾರೆ.

ಎಲ್ಲಾ ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಎಷ್ಟಿದೆ?: ಕೇಂದ್ರ ಮಾಹಿತಿ ಎಲ್ಲಾ ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಎಷ್ಟಿದೆ?: ಕೇಂದ್ರ ಮಾಹಿತಿ

ರಾಷ್ಟ್ರಗಳ ಸದಸ್ಯರು ಭಾಗವಹಿಸಲಿರುವ ಔಪಚಾರಿಕ ಸಭೆಯಲ್ಲಿ ಜೈಶಂಕರ್ ಭಾಗಿಯಾಗಬೇಕಿತ್ತು. ಬ್ರಿಟನ್‌ನ ವಿದೇಶಾಂಗ ಸಚಿವರೊಂದಿಗಿನ ಜೈಶಂಕರ್ ನಡೆಸಬೇಕಿದ್ದ ದ್ವಿಪಕ್ಷೀಯ ಸಭೆಯೂ ಈಗ ವರ್ಚ್ಯುಯಲ್ ಮೋಡ್ ನಲ್ಲಿ ನಡೆಯುವ ಸಾಧ್ಯತೆ ಇದೆ.

2 Members Of Indian Delegation Attending G7 Foreign Ministers Meet In London Test Positive For Covid-19

ಸ್ವತಃ ಎಸ್ ಜೈಶಂಕರ್ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಲಂಡನ್ ನಲ್ಲಿ ತಮ್ಮ ಬಾಕಿ ಕೆಲಸಗಳನ್ನು ವರ್ಚ್ಯುಯಲ್ ಸಭೆಯ ಮೂಲಕವೇ ನಿರ್ವಹಿಸುವುದಾಗಿ ತಿಳಿಸಿದ್ದಾರೆ. ಇಂದು ನಡೆಯಬೇಕಿರುವ ಜಿ7 ಸಭೆಯಲ್ಲೂ ವರ್ಚ್ಯುಯಲ್ ಮೋಡ್ ನಲ್ಲೇ ಭಾಗವಹಿಸುತ್ತೇನೆ ಎಂದು ಜೈಶಂಕರ್ ತಿಳಿಸಿದ್ದಾರೆ.

ಹಲವು ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜೈಶಂಕರ್ ಅವರೊಂದಿಗಿದ್ದ ಇಬ್ಬರು ಸದಸ್ಯರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಭಾರತದಲ್ಲಿ ಕೊರೊನಾ ವೈರಸ್ ಅಬ್ಬರ ಎಂದಿನಂತೆ ಮುಂದುವರೆದಿದ್ದು, ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 3,82 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಒಂದೇ ದಿನ 3,82,315 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,06,65,148ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ ದೇಶದಲ್ಲಿ 3,780 ಮಂದಿ ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 2,26,188ಕ್ಕೆ ತಲುಪಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 34,87,229ಕ್ಕೆ ಏರಿಕೆಯಾಗಿದೆ.

English summary
India's entire delegation to the Group of Seven summit in London is self-isolating after two of its members tested positive for Covid-19, the British government said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X