ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಡೈರೆಕ್ಟ್; ಮನೆ ಬಾಗಿಲಿಗೆ ಬರುತ್ತೆ ತಾಜಾ ಹಣ್ಣು, ತರಕಾರಿ

Google Oneindia Kannada News

ಬೆಂಗಳೂರು, ಏಪ್ರಿಲ್ 27 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ದೇಶದಲ್ಲಿ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ತರಕಾರಿ ಮತ್ತು ಹಣ್ಣ ಮನೆ ಬಾಗಿಲಿಗೆ ಬಂದರೆ ಹೇಗಿರುತ್ತದೆ?.

Recommended Video

British doctor beats coronavirus with paracetamol,chicken soup,lemonade | Chicken soup | Corona

ಕೃಷಿ ಡೈರೆಕ್ಟ್ ವೆಬ್ ಸೈಟ್ ಮೂಲಕ ನೀವು ಅಗತ್ಯವಾದ ತರಕಾರಿ, ಹಣ್ಣುಗಳನ್ನು ಖರೀದಿ ಮಾಡಬಹುದಾಗಿದೆ. ಕೆ. ಅಶ್ವಿನ್ ಕುಮಾರ್ ಮತ್ತು ತಂಡ ಜನರ ಮನೆ ಬಾಗಿಲಿಗೆ ತಾಜಾ ತರಕಾರಿ ಮತ್ತು ಹಣ್ಣನ್ನು ಸರಬರಾಜು ಮಾಡುವುದಾಗಿ ಘೋಷಣೆ ಮಾಡಿದೆ.

ಬೆಂಗಳೂರಿನ ಜನರಿಗೆ ಮನೆ ಬಾಲಿಲಲ್ಲಿಯೇ ಹಣ್ಣು ತರಕಾರಿ ಪೂರೈಕೆ ಮಾಡಲು ವೇದಿಕೆ ಸಿದ್ಧಪಡಿಸಿದ್ದಾರೆ. ಪ್ರಸ್ತುತ ಬೆಂಗಳೂರು ನಗರದ ಶೇ 50ರಷ್ಟು ಭಾಗದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಕೆಲವೇ ದಿನಗಳಲ್ಲಿ ಇಡೀ ಬೆಂಗಳೂರಿನಲ್ಲಿ ಈ ಸೇವೆ ಲಭ್ಯವಾಗಲಿದೆ.

Krishi Direct Get Vegetables And Fruits On Doorstep

ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ಕುಳಿತು ವೆಬ್‌ಸೈಟ್‌ಗೆ ಭೇಟಿ ನೀಡಿ ತರಕಾರಿ, ಹಣ್ಣುಗಳಿಗಾಗಿ ಬೇಡಿಕೆ ಸಲ್ಲಿಸಬಹುದು. ಕೃಷಿ ಡೈರೆಕ್ಟ್ ಮೊಬೈಲ್ ಅಪ್ಲಿಕೇಶನ್ ಸಹ ಇದ್ದು, ಅವುಗಳ ಮೂಲಕ ಆರ್ಡರ್ ಮಾಡಿ ಮನೆ ಬಾಗಿಲಲ್ಲೇ ತರಕಾರಿ ಪಡೆಯಬಹುದು.

Krishi Direct Get Vegetables And Fruits On Doorstep

ಬದಲಾದ ಸನ್ನಿವೇಶದಲ್ಲಿ ರೈತರು ಮತ್ತು ಗ್ರಾಹಕರನ್ನು ಒಂದೇ ಸೂರಿನಡಿ ತರುವ ಕೆಲಸವನ್ನು ಕೃಷಿ ಡೈರೆಕ್ಟ್ ಮಾಡಿದೆ. ರೈತರಿಂದ ನೇರವಾಗಿ ಹಣ್ಣು, ತರಕಾರಿ ಖರೀದಿ ಮಾಡುವುದರಿಂದ ಅದರ ತಾಜಾತನ ಹಾಗೆಯೇ ಇರುತ್ತದೆ.

Krishi Direct Get Vegetables And Fruits On Doorstep

ಇನ್ಯಾಕೆ ತಡ ವೆಬ್ ಸೈಟ್ ಅಥವ ಮೊಬೈಲ್ ಅಪ್ಲಿಕೇಶನ್‌ ಮೂಲಕ ಬೇಕಾದ ತರಕಾರಿ, ಹಣ್ಣುಗಳಿಗಾಗಿ ಬೇಡಿಕೆ ಸಲ್ಲಿಸಿ, ಮನೆ ಬಾಗಿಲಿನಲ್ಲಿಯೇ ಪಡೆಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X