ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

4 ಕೋಟಿ ರು. ವೆಚ್ಚದಲ್ಲಿ ನಟ ಯಶ್ ಅಭಿವೃದ್ಧಿಪಡಿಸಿದ್ದ ಕೆರೆ ಈಗ ಖಾಲಿ

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ಅಕ್ಟೋಬರ್ 16: ಸ್ಯಾಂಡಲ್ ವುಡ್ ಸ್ಟಾರ್ ದಂಪತಿ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಯಶೋಮಾರ್ಗದ ಮೂಲಕ ಸುಮಾರು 4 ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದ ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆ ಇದೀಗ ನೀರಿಲ್ಲದೆ ಖಾಲಿಯಾಗಿದೆ.

ಯಶ್ ಅವರು ಅಭಿವೃದ್ಧಿಪಡಿಸಿದ ನಂತರ ಪ್ರತಿವರ್ಷ ತುಂಬಿ ತುಳುಕುತ್ತಿದ್ದ ತಲ್ಲೂರು ಕೆರೆ ಈ ವರ್ಷ ಭಣಗೂಡುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕೆರೆಕಟ್ಟೆಗಳು, ಹಳ್ಳ-ಕೊಳ್ಳ ಭರ್ತಿಯಾಗಿವೆ. ಆದರೆ ಯಲಬುರ್ಗಾ ತಾಲೂಕಿನಲ್ಲಿರು ತಲ್ಲೂರು ಕೆರೆ ಮಾತ್ರ ನೀರಿಲ್ಲದೆ ಕೆರೆಯ ಒಡಲು ಬರಿದಾಗಿದೆ.

ಕೊಪ್ಪಳ ತತ್ತರ, ವಾಡಿಕೆಗಿಂತ ಶೇ.46 ರಷ್ಟು ಅಧಿಕ ಮಳೆ ಕೊಪ್ಪಳ ತತ್ತರ, ವಾಡಿಕೆಗಿಂತ ಶೇ.46 ರಷ್ಟು ಅಧಿಕ ಮಳೆ

ಈ ತಲ್ಲೂರು ಕೆರೆಯನ್ನು ನಟ ಯಶ್ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದರು. ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿ ಯಶ್ ಕೆರೆಯಂತಲೇ ಪ್ರಸಿದ್ಧಿ ಪಡೆದಿದೆ. ಅಭಿವೃದ್ಧಿಪಡಿಸಿದಾಗಿನಿಂದ ತುಂಬಿ ತುಳುಕುತ್ತಿದ್ದ ಕೆರೆ ಈ ಬಾರಿ ಕೊಪ್ಪಳ ಜಿಲ್ಲೆಯ ಎಲ್ಲಾ ಕೆರೆ ತುಂಬಿದರೂ ತಲ್ಲೂರು ಕೆರೆ ಮಾತ್ರ ನೀರಿಲ್ಲದೆ ಬರಿದಾಗಿದೆ.

Koppalla: Yash’s Fruit Bearing Tallur Lake work, Now Ruined By Railway Contractor

ಕೆರೆ ಬರಿದಾಗಲು ರೇಲ್ವೆ ಇಲಾಖೆಯ ಅವೈಜ್ಞಾನಿಕ ಕಾಮಗಾರಿಯೇ ಕಾರಣವಾಗಿದೆ. ಗದಗ-ವಾಡಿ ರೇಲ್ವೆ ಕಾಮಗಾರಿಯಿಂದ ಕೆರೆಯಲ್ಲಿ ನೀರಿಲ್ಲ. ಕೆರೆಗೆ ನೀರು ಹರಿದು ಬರುವ ಮಾರ್ಗವನ್ನು ರೈಲ್ವೇ ಕಾಮಗಾರಿ ನಿಲ್ಲಿಸಿದೆ. ರೈಲ್ವೇ ಕಾಮಗಾರಿ ಮಾಡಿದ ಎಡವಟ್ಟಿನಿಂದಗಿಯೇ ಕೆರೆಗೆ ನೀರಿಲ್ಲ ಎಂದು ರೈಲ್ವೇ ಕಾಮಗಾರಿ ಗುತ್ತಿಗೆದಾರರ ವಿರುದ್ಧ ತಾಲ್ಲೂಕಿನ ರೈತರು ಆಕ್ರೋಶ ಹೊರಹಾಕಿದ್ದಾರೆ.

ಸುಮಾರು 90 ಎಕ್ರೆ ವಿಸ್ತೀರ್ಣವನ್ನು ಈ ಕೆರೆ ಹೊಂದಿದೆ. 'ಯಶೋಮಾರ್ಗ'ದ ಅಡಿಯಲ್ಲಿ 4 ಕೋಟಿ ವೆಚ್ಚದಲ್ಲಿ ಎರಡು ಮೂರು ತಿಂಗಳ ಕಾಲ ಈ ಕೆರೆಯ ಹೂಳೆತ್ತಲಾಗಿತ್ತು. ಇದರಿಂದ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗಲು ಅನುಕೂಲವಾಗಿತ್ತು.

Recommended Video

India China ನಡುವೆ ಮಹತ್ವದ ಮಾತುಕತೆ | Oneindia Kannada

ತಲ್ಲೂರು ಕೆರೆ ತುಂಬಿದ್ದರಿಂದ ಈ ಭಾಗದ ಹತ್ತಕ್ಕೂ ಹೆಚ್ಚು ಗ್ರಾಮದ ರೈತರಿಗೆ ಅನುಕೂಲವಾಗಿತ್ತು. ಕೆರೆ ಕಾಯಕಲ್ಪ ಕಲ್ಪಿಸಿದ ನಟ ಯಶ್ ಕಾರ್ಯವನ್ನು ಆ ಭಾಗದ ರೈತರು ಸ್ಮರಿಸುತ್ತಾರೆ.

English summary
The Tallur lake in Koppal district, which was developed by Yashomarga at a cost of Rs 4 crore, is now empty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X