• search
 • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುತ್ತುಕೊಟ್ಟ ಕುಷ್ಟಗಿ ತಹಶೀಲ್ದಾರ್ ವಿರುದ್ಧ ದೂರು

|

ಕೊಪ್ಪಳ, ಆಗಸ್ಟ್ 28 : ಸರ್ಕಾರಿ ಕಚೇರಿಯಲ್ಲೇ ಮಹಿಳೆಗೆ ಮುತ್ತು ಕೊಟ್ಟಿದ್ದ ಕುಷ್ಟಗಿ ತಹಶೀಲ್ದಾರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮುತ್ತು ಕೊಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

   ಅಧಿಕಾರಿಗಳ ಮನೆಯಲ್ಲಿ ಭ್ರಷ್ಟಾಚಾರದ 82 ಲಕ್ಷ ನಗದು ವಷ | Oneindia Kannada

   ಕೊಪ್ಪಳ ಜಿಲ್ಲೆಯ ಕುಷ್ಟಗಿ ತಹಶೀಲ್ದಾರ್ ಗುರು ಬಸವರಾಜ್ ವಿರುದ್ಧ ನೊಂದ ಮಹಿಳೆ ಕುಷ್ಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಗ್ರಾಮ ಲೆಕ್ಕಾಧಿಕಾರಿಯಾಗಿರುವ ಮಹಿಳೆ ಹಲವು ಆರೋಪಗಳನ್ನು ದೂರಿನಲ್ಲಿ ಮಾಡಿದ್ದಾಳೆ.

   ಕೊಪ್ಪಳ; ದೇಶದಲ್ಲೇ ದೊಡ್ಡ ಆಟಿಕೆ ತಯಾರಿಕಾ ಘಟಕ ನಿರ್ಮಾಣ

   ಗುರು ಬಸವರಾಜ್ ಕುಷ್ಟಗಿಗೆ ಬಂದ ದಿನದಿಂದ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರತಿನಿತ್ಯ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು. ತನಗೆ ನ್ಯಾಯ ಕೊಡಿಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

   ಕೊಪ್ಪ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಮೇಲೆ ಹಲ್ಲೆ

   ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಐಪಿಸಿ ಸೆಕ್ಷನ್ 354 (ಮಹಿಳೆಯರಿಗೆ ಕಿರಿಕಿರಿ ಮಾಡುವುದು), 354 (ಬಿ), 506ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ತಹಶೀಲ್ದಾರ್‌ಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

   ಕಲ್ಲು ಭೂಮಿಯಲ್ಲಿ ಅಂಜದೆ ಅಂಜೂರ ಬೆಳೆದ ಕೊಪ್ಪಳ ರೈತ!

   ಎರಡು ತಿಂಗಳ ಹಿಂದೆ ಗುರು ಬವಸರಾಜ್ ಕಚೇರಿಯಲ್ಲಿಯೇ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಮಹಿಳೆಗೆ ಮುತ್ತು ಕೊಟ್ಟಿದ್ದರು. ಮಂಗಳವಾರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

   ಬಸವರಾಜ್ ಅವರು ಈಗ ಕುಷ್ಟಗಿಯಿಂದ ವರ್ಗಾವಣೆಗೊಂಡಿದ್ದಾರೆ. ಕೊಪ್ಪಳದ ನಗರಾಭಿವೃದ್ಧಿ ಕೋಶದಲ್ಲಿ ಅವರು ಈಗ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

   English summary
   Women filed the complaint against Koppal district Kushtagi tahsildar Guru Basavaraj. Tahsildar kissed women in office and video went viral on social media.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X