ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರ ಶಾಶ್ವತವಲ್ಲ, ಅವಶ್ಯಕತೆ ಬಿದ್ದರೆ ರಾಜೀನಾಮೆಗೂ ಸಿದ್ಧ: ಶಾಸಕ ಪರಣ್ಣ ಮುನವಳ್ಳಿ

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ಜುಲೈ 28: ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿರುವುದು ನಮಗೆಲ್ಲಾ ಆಘಾತ ತಂದಿದೆ. ಸಾಮಾನ್ಯ ಕಾರ್ಯಕರ್ತನಾಗಿ ಅವರು ಯಾರೊಂದಿಗೆ ದ್ವೇಷ ಸಾಧಿಸದೇ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದರು. ಆದರೆ ಅವರನ್ನು ಕೊಲೆ ಮಾಡುವ ಮೂಲಕ ಹಿಂದೂ ಮನೋಭಾವನೆಯನ್ನು ಹತ್ತಿಕ್ಕುವಂತಹ ಕೆಲಸ ದುಷ್ಕರ್ಮಿಗಳು ಮಾಡುತ್ತಿದ್ದಾರೆ ಎಂದು ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಹಿಂದೆ ಹರ್ಷ, ಈಗ ಪ್ರವೀಣ ಹತ್ಯೆಯಾಗಿದೆ, ಆದರೆ ಮುಂದಿನ ದಿನಗಳಲ್ಲಿ ಇಂತಹ ಅನೇಕ ಪ್ರವೀಣರನ್ನು ನಾವು ಕಳೆದುಕೊಳ್ಳಬಾರದು. ನಮ್ಮಲ್ಲಿ ಇಂಥಹ ಅನೇಕ ಕಾರ್ಯಕರ್ತರಿದ್ದಾರೆ. ಪ್ರವೀಣ್‌ ಪತ್ನಿ, ತಂದೆ-ತಾಯಿ ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಮನೆಯಲ್ಲಿ ಆದಂತಹ ಘಟನೆ ಬೇರೆ ಮನೆಯಲ್ಲಿ ಹಾಗಬಾರದು ಎಂಬ ಕಳಕಳಿಯಿಂದ ಅವರು ಹೇಳಿದ್ದಾರೆ. ಆದಷ್ಟು ಬೇಗ ಮುಖ್ಯಮಂತ್ರಿಗಳು, ಗೃಹ ಸಚಿವರು ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

Breaking: ಪ್ರವೀಣ್ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಇಂದೇ ನ್ಯಾಯಾಲಯಕ್ಕೆ ಹಾಜರುBreaking: ಪ್ರವೀಣ್ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಇಂದೇ ನ್ಯಾಯಾಲಯಕ್ಕೆ ಹಾಜರು

ಗಂಗಾವತಿ ಕೂಡ ತುಂಬಾ ಸೂಕ್ಷ್ಮವಾದ ಕ್ಷೇತ್ರವಾಗಿದೆ, ನಾನು ಎರಡು ಬಾರಿ ಶಾಸಕನಾಗಿರುವುದಕ್ಕೆ ಹಿಂದೂ ಮತದಾರರಿಂದಲೇ ಎಂದು ಒತ್ತಿ ಹೇಳುತ್ತೇನೆ . ಇಲ್ಲೂ ನಮ್ಮ ಕಾರ್ಯಕರ್ತರ ಮೇಲೆ ಹಲವಾರು ಪ್ರಕರಣಗಳಿವೆ. ಆದರೆ ಪಕ್ಷದ ಕಾರ್ಯಕರ್ತರಿಗೆ ಏನೇ ತೊಂದರೆಯಾದರೆ ನಮಗೂ ತಡೆದುಕೊಳ್ಳುವ ಶಕ್ತಿಯಿಲ್ಲ. ಆದ್ದರಿಂದ ಅಧಿಕಾರ ಶಾಶ್ವತವಲ್ಲ. ನಮಗೆ ಸಂಘದ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ, ಇದಕ್ಕಾಗಿ ಬೇಕಾದರೆ ರಾಜೀನಾಮೆ ನೀಡುವುದಕ್ಕೆ ಸಿದ್ಧನಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

Will resign to MLA post if state doesnt take action on Hindu Activist Murderers says Paranna Munavalli

ಅವಶ್ಯಕತೆಬಿದ್ದರೆ ರಾಜೀನಾಮೆ
ಪಕ್ಷದ ಕಾರ್ಯಕರ್ತರು, ಸಾರ್ವಜನಿಕರಿಗೋಸ್ಕರ ಅವಶ್ಯಕತೆ ಬಿದ್ದರೆ ರಾಜೀನಾಮೆಗೆ ಸಿದ್ಧನಿದ್ದೇನೆ. ಅಧಿಕಾರ ಬರುತ್ತೆ, ಹೋಗುತ್ತೆ, ಅದೇನು ಶಾಶ್ವತವಲ್ಲ. ಗಂಗಾವತಿ ಕೂಡ ಸೂಕ್ಷ್ಮವಾದ ಕ್ಷೇತ್ರ, ಎಲ್ಲಾ ಹಿಂದೂಗಳು ಸೇರಿ ನನ್ನನ್ನು 2 ಬಾರಿ ಗೆಲ್ಲಿಸಿದ್ದಾರೆ. ಇಂತಹ ಘಟನೆಗಳಿಂದ ಪೋಷಕರು ತಮ್ಮ ಮಕ್ಕಳನ್ನು ಹೊರಗೆ ಕಳುಹಿಸುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ನಮಗೆ ರಕ್ಷಣೆ ಸಿಗುತ್ತಿಲ್ಲ ಎನ್ನುವ ಭಾವನೆಯಿದೆ, ಈ ಭಯವನ್ನೂ ಹೋಗಲಾಡಿಸಬೇಕಾಗಿರುವುದು ನಮ್ಮಕರ್ತವ್ಯ. ಇದಕ್ಕಾಗಿ ಅಧಿಕಾರ ಹೋದರೂ ಪರವಾಗಿಲ್ಲ ಎಂದು ತಿಳಿಸಿದ್ದಾರೆ.

ಕಂಡಲ್ಲಿ ಗುಂಡಿಟ್ಟುಕೊಲ್ಲಿ
ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರನ್ನು ಕಂಡಲ್ಲಿ ಗುಂಡಿಡಬೇಕು ಎಂದು ಕೊಪ್ಪಳ ಜಿಲ್ಲೆ ಕುಷ್ಟಗಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಉಮೇಶ್ ಯಾದವ ಆಗ್ರಹಿಸಿದ್ದಾರೆ.

Will resign to MLA post if state doesnt take action on Hindu Activist Murderers says Paranna Munavalli

ಪ್ರವೀಣ್‌ ಹತ್ಯೆ ಪ್ರಕರಣದಲ್ಲಿ ಸರಕಾರದ ಮೃದು ಧೋರಣೆ ನನಗೆ ಬಹಳ ನೋವಾಗಿದೆ. ಹಲವಾರು ಕಾರ್ಯಕರ್ತರ ಕೊಲೆಯಾಗಿದೆ. ಅರೋಪಿಗಳನ್ನ ಬಂಧಿಸಿ ಜೈಲಿನಲ್ಲಿ ಇಟ್ರೆ ಸಾಲದು. ಅವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು. ಇಲ್ಲದಿದ್ದರೆ ಈಗ ರಾಜೀನಾಮೆ ನೀಡಿರುವ ಬಿಜೆಪಿಯ 800 ಕಾರ್ಯಕರ್ತರು ರಾಜಕೀಯ ನಿವೃತ್ತಿಯಾಗಿ,ಯಾವುದಾದರೂ ಉದ್ಯೋಗ ನೋಡಿಕೊಳ್ಳುತ್ತೇವೆ ಯಾದವ್‌ ತಿಳಿಸಿದ್ದಾರೆ.

English summary
We are shocked by the assassination of Praveen Nettaru, If not get justice for his death, I will resign as MLA post, said Ganagavathi MLA Paranna Munavalli in Koppal,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X