ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಜನಾದ್ರಿ ಬೆಟ್ಟಕ್ಕೆ ಯೋಗೀಶ್ವರ್ ಭೇಟಿ; ಕೋವಿಡ್ ನಿಯಮ ಉಲ್ಲಂಘನೆ?

|
Google Oneindia Kannada News

ಕೊಪ್ಪಳ, ಜೂನ್ 30; ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೀಶ್ವರ್ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದರು. ಕೋವಿಡ್ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಅವರು ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರೆ.

ಬುಧವಾರ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಸಿ. ಪಿ. ಯೋಗೀಶ್ವರ್ ಭೇಟಿ ನೀಡಿದರು. ಕೋವಿಡ್ ಮಾರ್ಗಸೂಚಿ ಅನ್ವಯ ದೇವಾಲಯದ ಸಿಬ್ಬಂದಿ ಬಿಟ್ಟು ಬೇರೆಯವರಿಗೆ ದೇವಾಲಯ ಭೇಟಿಗೆ ಅವಕಾಶವಿಲ್ಲ.

ಅಂಜನಾದ್ರಿ ಬೆಟ್ಟದ ಹುಂಡಿ ಎಣಿಕೆ; 6 ಲಕ್ಷ ರೂ. ಸಂಗ್ರಹ ಅಂಜನಾದ್ರಿ ಬೆಟ್ಟದ ಹುಂಡಿ ಎಣಿಕೆ; 6 ಲಕ್ಷ ರೂ. ಸಂಗ್ರಹ

ಆದರೆ ಸಚಿವರು ಎಂಬ ಕಾರಣಕ್ಕೆ ಸ್ಥಳೀಯ ಆಡಳಿತವೂ ಕೋವಿಡ್ ಮಾರ್ಗಸೂಚಿಗಳನ್ನು ಪಕ್ಕಕ್ಕೆ ತಳ್ಳಿ ಸಿ. ಪಿ. ಯೋಗೀಶ್ವರ್ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಿತೆ? ಎಂಬ ಪ್ರಶ್ನೆ ಎದ್ದಿದೆ. ಸಚಿವರಿಗೆ ಮಾರ್ಗಸೂಚಿ ಅನ್ವಯವಾಗುವುದಿಲ್ಲವೇ? ಎಂದು ಜನರು ಪ್ರಶ್ನಿಸಿದ್ದಾರೆ.

ಅಂಜನಾದ್ರಿ ಬೆಟ್ಟ ಆಂಜನೇಯನ ಜನ್ಮಸ್ಥಳ ಅಲ್ವಂತೆ, ತಿರುಮಲ ಅಂತೆ: ಟಿಟಿಡಿ ಹೊಸ ಕ್ಯಾತೆಅಂಜನಾದ್ರಿ ಬೆಟ್ಟ ಆಂಜನೇಯನ ಜನ್ಮಸ್ಥಳ ಅಲ್ವಂತೆ, ತಿರುಮಲ ಅಂತೆ: ಟಿಟಿಡಿ ಹೊಸ ಕ್ಯಾತೆ

ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, "ನಾವು ಲಾಕ್‌ಡೌನ್ ತೆರವುಗೊಂಡ ಬಳಿಕ ಇಲ್ಲಿಗೆ ಬಂದಿದ್ದೇವೆ. ನಾವು ಮಾತ್ರ ಒಳಗೆ ತೆರಳಿದ್ದು, ಇಲಾಖೆ ಅಭಿವೃದ್ಧಿ ವಿಚಾರ ಚರ್ಚೆ ಮಾಡಲು ಬಂದಿದ್ದೇನೆ. ಯಾವ ನಿಯಮವನ್ನೂ ಉಲ್ಲಂಘನೆ ಮಾಡಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂಜನಾದ್ರಿ ಬೆಟ್ಟದ ಅಭಿವೃದ್ಧಿ; 50 ಕೋಟಿ ಕಾಮಗಾರಿಗೆ ಶೀಘ್ರವೇ ಒಪ್ಪಿಗೆ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ; 50 ಕೋಟಿ ಕಾಮಗಾರಿಗೆ ಶೀಘ್ರವೇ ಒಪ್ಪಿಗೆ

ಸಾವಿರಾರು ಕೋಟಿ ರೂ.ಗಳು ಬೇಕು

ಸಾವಿರಾರು ಕೋಟಿ ರೂ.ಗಳು ಬೇಕು

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಗಳು ಬೇಕು. ಪ್ರವಾಸೋದ್ಯಮ ಇಲಾಖೆ ಮಾತ್ರ ಇದನ್ನು ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ. ನಾಲ್ಕಾರು ಇಲಾಖೆಗಳು ಸೇರಿ ಅಭಿವೃದ್ಧಿಗೊಳಿಸಬೇಕು" ಎಂದರು.

ಹಲವಾರು ಸಾಕ್ಷ್ಯಗಳಿವೆ

ಹಲವಾರು ಸಾಕ್ಷ್ಯಗಳಿವೆ

"ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಇಲ್ಲಿಯೇ ಹನುಮಂತ ಜನಿಸಿದ್ದು ಎಂಬುವುದಕ್ಕೆ ಹಲವು ಸಾಕ್ಷಿ, ಪುರಾವೆಗಳಿವೆ. ಯಾರೋ ಹೇಳುತ್ತಾರೆ ಎಂದು ನಾವು ಸುಮ್ಮನಿರಬಾರದು. ಇಲ್ಲಿಯೇ ಹನುಮಂತ ಜನಿಸಿದ್ದು ಎಂಬ ನಿಲುವು ಸರ್ಕಾರದ್ದೂ ಆಗಿದೆ. ಸರ್ಕಾರ ಬೆಟ್ಟದ ಅಭಿವೃದ್ಧಿಗೆ ಬದ್ಧವಾಗಿದೆ" ಎಂದರು.

ನಮ್ಮ ಆಂತರಿಕ ವಿಚಾರ ಹೇಳಿಕೊಂಡಿದ್ಧೇವೆ

ನಮ್ಮ ಆಂತರಿಕ ವಿಚಾರ ಹೇಳಿಕೊಂಡಿದ್ಧೇವೆ

ದೆಹಲಿ ಭೇಟಿಯ ಬಗ್ಗೆ ಮಾತನಾಡಿದ ಯೋಗೀಶ್ವರ್, "ನಮ್ಮಲ್ಲಿ ಆತಂರಿಕ ಸಮಸ್ಯೆಗಳಿವೆ. ಹಾಗಾಗಿ ನಾಯಕರ ಬಳಿ ಹೇಳಿಕೊಳ್ಳಲು ದೆಹಲಿಗೆ ಹೋಗುತ್ತಿದ್ದೇವೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕೆಲಸವನ್ನು ನಾವು ಮಾಡುತ್ತಿಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದರು.

ಹಿರಿಯರು ತೀರ್ಮಾನ ಮಾಡುತ್ತಾರೆ

ಹಿರಿಯರು ತೀರ್ಮಾನ ಮಾಡುತ್ತಾರೆ

"ನಾವು ಪರೀಕ್ಷೆ ಬರೆದಿದ್ದೇವೆ. ಫಲಿತಾಂಶ ಯಾವಾಗ ಬರುತ್ತೆ ಎಂದು ನೋಡೋಣ. ಪಕ್ಷದ ಹಿರಿಯರು ತೀರ್ಮಾನ ಮಾಡಿದಾಗ ಆವಾಗ ಬರುತ್ತದೆ. ರಮೇಶ್ ಜಾರಕಿಹೊಳಿ ದೆಹಲಿ ಭೇಟಿ ವಿಚಾರ ನನಗೆ ತಿಳಿದಿಲ್ಲ" ಎಂದು ಸಿ. ಪಿ. ಯೋಗೀಶ್ವರ್ ಹೇಳಿದರು.

Recommended Video

Sriramulu ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಭೈರತಿ ಬಸವರಾಜ್ | Oneindia Kannada

English summary
Tourism minister of Karnataka C. P. Yogeshwar visited Anjanadri hills, Koppal the borth place of lord Hanuman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X