ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನವರಿ 12ರಿಂದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ

|
Google Oneindia Kannada News

ಕೊಪ್ಪಳ, ಜನವರಿ 03 : ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಸಿದ್ಧತೆಗಳು ನಡೆಯುತ್ತಿವೆ. ಜನವರಿ 12, 13 ಮತ್ತು 14ರಂದು ಮೂರು ದಿನಗಳ ಕಾಲ ಗವಿಸಿದ್ದೇಶ್ವರ ಜಾತ್ರೆ ನಡೆಯಲಿದೆ.

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯನ್ನು 'ದಕ್ಷಿಣ ಭಾರತದ ಕುಂಭಮೇಳ' ಎಂದು ಕರೆಯಲಾಗುತ್ತದೆ. ಲಕ್ಷಾಂತರ ಜನರು ಮೂರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

 ಶಿರಸಿ ಮಾರಿಕಾಂಬ ಜಾತ್ರೆ ಘೋಷಣೆ ಬೆನ್ನಲ್ಲೇ ದೇಗುಲ ಅಧ್ಯಕ್ಷರ ಮನೆ ಮುಂದೆ ಮಾಟ ಶಿರಸಿ ಮಾರಿಕಾಂಬ ಜಾತ್ರೆ ಘೋಷಣೆ ಬೆನ್ನಲ್ಲೇ ದೇಗುಲ ಅಧ್ಯಕ್ಷರ ಮನೆ ಮುಂದೆ ಮಾಟ

ಗವಿಸಿದ್ದೇಶ್ವರ ಜಾತ್ರೆಗಾಗಿ ಟ್ರೇಲರ್ ಸಾಂಗ್ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದೆ. ಈ ಮೂಲಕ ಆನ್‌ಲೈನ್ ಮೂಲಕವೂ ಜನರಿಗೆ ಜಾತ್ರೆಗೆ ಆಹ್ವಾನ ನೀಡಲಾಗುತ್ತಿದೆ.

 ಮದುಮಕ್ಕಳ ಜಾತ್ರೆ ಕೋಟಿಲಿಂಗೇಶ್ವರನ ಕೊಡಿಹಬ್ಬ ಕಂಡಿರಾ? ಮದುಮಕ್ಕಳ ಜಾತ್ರೆ ಕೋಟಿಲಿಂಗೇಶ್ವರನ ಕೊಡಿಹಬ್ಬ ಕಂಡಿರಾ?

Sri Gavisiddeshwara Jatra Koppla From January 12

ಕೊಪ್ಪಳದ ಗವಿಸಿದ್ದೇಶ್ವರ ವಸತಿ ನಿಲಯದ ವಿದ್ಯಾರ್ಥಿಗಳು ಬಲೂನ್ ಹಿಡಿದು 'ಅಜ್ಜನ ಜಾತ್ರೆಗೆ ಬನ್ನಿ" ಎಂದು ಆಹ್ವಾನ ನೀಡುವ ದೃಶ್ಯವನ್ನು ಡ್ರೋಣ್ ಕ್ಯಾಮರಾ ಮೂಲಕ ಸೆರೆ ಹಿಡಿಯಲಾಗಿದೆ.

ಬಂದೇಬಿಡ್ತು ವರ್ಷಕ್ಕೊಮ್ಮೆ ದರ್ಶನ ನೀಡೋ ಬಿಂಡಿಗ ದೇವಿರಮ್ಮನ ಜಾತ್ರೆಬಂದೇಬಿಡ್ತು ವರ್ಷಕ್ಕೊಮ್ಮೆ ದರ್ಶನ ನೀಡೋ ಬಿಂಡಿಗ ದೇವಿರಮ್ಮನ ಜಾತ್ರೆ

ಜನವರಿ 12ರ ಭಾನುವಾರ ಸಂಜೆ 5.45ಕ್ಕೆ 2020ನೇ ಸಾಲಿನ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಅಂತರ್ ರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಜಾತ್ರೆಯನ್ನು ಉದ್ಘಾಟಿಸಲಿದ್ದಾರೆ.

ಗವಿಸಿದ್ದೇಶ್ವರ ಜಾತ್ರೆಯಲ್ಲಿ ದಾಸೋಹಕ್ಕೂ ಬಹಳ ಮಹತ್ವವಿದೆ. ಉತ್ತರ ಕರ್ನಾಟಕದ ರಸವತ್ತಾದ ಊಟವನ್ನು ಜಾತ್ರೆಯಲ್ಲಿ ಸವಿಯಬಹುದು. ರೊಟ್ಟಿ, ಚಟ್ನಿ, ಪಲ್ಯ ಭಕ್ತರ ಹೊಟ್ಟೆ ತುಂಬಿಸುತ್ತದೆ. ಅನ್ನದ ಪ್ರತಿ ಅಗುಳಿನ ಮಹತ್ವವನ್ನು ಜನರಿಗೆ ಜಾತ್ರೆಯಲ್ಲಿ ಸಾರಿ ಹೇಳಲಾಗುತ್ತದೆ.

ಪ್ರತಿವರ್ಷ ಒಂದೊಂದು ಸಾಮಾಜಿಕ ಸಂದೇಶವೊಂದನ್ನು ಇಟ್ಟುಕೊಂಡು ಜಾತ್ರೆ ಆಚರಣೆ ಮಾಡಲಾಗುತ್ತದೆ. ಈ ಬಾರಿ ಪರಿಸರ ಸಂರಕ್ಷಣೆಯ ಸಂದೇಶವನ್ನು ಮುಂದಿಟ್ಟುಕೊಂಡು ಜಾತ್ರೆ ಆಚರಣೆ ಮಾಡಲಾಗುತ್ತದೆ.

English summary
The three-day Sri Gavisiddeshwara Jatra will be held from January 12, 13 and 14, 2020. Jatra organised by Gavi Mutt, Koppla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X