ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳ ಗವಿ ಸಿದ್ದೇಶ್ವರ ಜಾತ್ರೆ; 18 ಲಕ್ಷ ಮಿರ್ಚಿ ತಯಾರಿ!

|
Google Oneindia Kannada News

ಕೊಪ್ಪಳ, ಜನವರಿ 13 : ದಕ್ಷಿಣ ಭಾರತದ ಕುಂಭಮೇಳ ಎಂದು ಕರೆಯುವ ಕೊಪ್ಫಳದ ಗವಿ ಸಿದ್ದೇಶ್ವರ ಜಾತ್ರೆಗೆ ಚಾಲನೆ ಸಿಕ್ಕಿದೆ. ಲಕ್ಷಾಂತರ ಭಕ್ತರು ಜಾತ್ರೆಗೆ ಸಾಕ್ಷಿಯಾಗಿದ್ದು, ಭಕ್ತಾದಿಗಳಿಗೆ ದಾಸೋಹ ಕಾರ್ಯವೂ ಭರದಿಂದ ನಡೆಯುತ್ತಿದೆ.

ಗವಿ ಸಿದ್ದೇಶ್ವರ ಜಾತ್ರೆ ಉತ್ತರ ಕರ್ನಾಟಕ ಭಾಗದ ಪ್ರಮುಖವಾದ ಜಾತ್ರೆ. ಉತ್ತರ ಕರ್ನಾಟಕ ಎಂದ ಮೇಲೆ ಮಿರ್ಚಿ (ಮೆಣಸಿನಕಾಯಿ ಬೋಂಡಾ) ಇರಲೇಬೇಕು. ಗವಿ ಸಿದ್ದೇಶ್ವರ ಜಾತ್ರೆಯಲ್ಲಿ 18 ಲಕ್ಷ ಮಿರ್ಚಿ ತಯಾರಿಸಿ ದಾಖಲೆ ಮಾಡಲಾಗಿದೆ.

 ಲಕ್ಷಾಂತರ ಜನರ ಸಮಾಗಮದಲ್ಲಿ ನಾಳೆಯಿಂದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಲಕ್ಷಾಂತರ ಜನರ ಸಮಾಗಮದಲ್ಲಿ ನಾಳೆಯಿಂದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ

Recommended Video

ಗಾಯಕ ವಿಜಯ್ ಪ್ರಕಾಶ್ ಗೆ ಗಂಗಾವತಿಯಲ್ಲಿ ಅವಮಾನ | VIJA7 PRAKASH | ONEINDIA KANNADA

ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆಯಲ್ಲಿ ವಿವಿಧ ಭಕ್ತರು ಮಿರ್ಚಿ ಸೇವೆ ಮಾಡುತ್ತಾರೆ. ಕಳೆದ 5 ವರ್ಷಗಳಿಂದ ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿಯ ಗೆಳೆಯರ ಬಳಗದಿಂದ ಮಿರ್ಚಿ ಸೇವೆ ನಡೆಯುತ್ತಿತ್ತು. ಈ ಬಾರಿ ಗವಿಮಠ ದಾನಿಗಳ ನೆರವಿನಿಂದ ಮಠದ ವತಿಯಿಂದಲೇ ಮಿರ್ಚಿ ಸಿದ್ಧಪಡಿಸಿ ನೀಡಲು ಮುಂದಾಗಿತ್ತು.

ಕೊಪ್ಪಳ; 22 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಹಾಕಿ ಕೊಪ್ಪಳ; 22 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಹಾಕಿ

Bajji

ಸೋಮವಾರ ಜಾತ್ರೆಯ 2ನೇ ದಿನ. ಇಂದು ಜಾತ್ರೆಗೆ ಬಂದ ಭಕ್ತರಿಗಾಗಿ 18 ಲಕ್ಷ ಮಿರ್ಚಿಗಳನ್ನು ಸಿದ್ಧಪಡಿಸಲಾಗಿತ್ತು. ಮಠದ ಪತ್ರಿಕಾ ಪ್ರಕಟಣೆಯಂತೆ ರೊಟ್ಟಿ, ಚಪಾತಿ, ಪಲ್ಯ, ಮಾದಲಿ (ಗೋಧಿಯ ಸಿಹಿ ತಿನಿಸು), ಹಾಲು, ತುಪ್ಪ, ಅನ್ನ, ಸಾರು, ಚಟ್ನಿಪುಡಿ, ಉಪ್ಪಿನಕಾಯಿ ಮತ್ತು ಮಜ್ಜಿಗೆ ಜೊತೆಗೆ ಮಿರ್ಚಿಯನ್ನು ಭಕ್ತಾದಿಗಳಿಗೆ ನೀಡಲಾಗಿದೆ.

ಚಿತ್ರದುರ್ಗದಲ್ಲಿ ವೈಶಿಷ್ಟ್ಯವಾಗಿ ಜರುಗಿದ ಮುಳ್ಳಿನ ಜಾತ್ರೆಚಿತ್ರದುರ್ಗದಲ್ಲಿ ವೈಶಿಷ್ಟ್ಯವಾಗಿ ಜರುಗಿದ ಮುಳ್ಳಿನ ಜಾತ್ರೆ

18 ಲಕ್ಷ ಮಿರ್ಚಿ ತಯಾರು ಮಾಡಲು 300 ಅಡುಗೆಯವರು ಶ್ರಮ ಪಟ್ಟಿದ್ದಾರೆ. 18 ಕ್ವಿಂಟಾಲ್ ಕಡಲೆ ಹಿಟ್ಟು, 15 ಕ್ವಿಂಟಾಲ್ ಹಸಿ ಮೆಣಸು, 10 ಬ್ಯಾರಲ್ ಅಡುಗೆ ಎಣ್ಣೆ, ಜೀರಿಗೆ, ಅಡುಗೆ ಸೋಡಾ ಬಳಕೆ ಮಾಡಲಾಗಿದೆ.

ಕೊಪ್ಫಳದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಿರೂ ಅವರು ಹಸಿದ ಹೊಟ್ಟೆಯಲ್ಲಿ ವಾಪಸ್ ಹೋಗುವುದಿಲ್ಲ. ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತದೆ. ಭಕ್ತಾದಿಗಳು ಸಹ ಶಿಸ್ತನ್ನು ಕಾಪಾಡಿಕೊಂಡು ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳುತ್ತಾರೆ.

English summary
18 lakh mirchi bajji prepared on January 13, 2020 in Sri Gavisiddeshwara Jatra Koppal. Three days of Jatra organised by Gavi Mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X