ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀನು ಸೇವಿಸಿ ದೇವಾಲಯಕ್ಕೆ ಹೋದೆ ಎಂದರು! ಮಾಧ್ಯಮಕ್ಕೆ ಸಿದ್ದು ಪಂಚ್

|
Google Oneindia Kannada News

ಕೊಪ್ಪಳ, ಜನವರಿ 21: "ಮೀನು ಸೇವಿಸಿ ದೇವಾಲಯಕ್ಕೆ ಹೋದೆ ಎಂದು ಟೀಕಿಸಿದರು. ಹಾಗಾದರೆ ಮಾಂಸ ನೈವೇದ್ಯಕ್ಕೆ ಇಟ್ಟ ಬೇಡರ ಕಣ್ಣಪ್ಪನಿಗೆ ದೇವರು ಒಲಿದಿದ್ದೇಕೆ? ನನಗೂ ದೇವರಲ್ಲಿ ನಂಬಿಕೆ ಇದೆ" ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಪತ್ರಕರ್ತರ ಸಮಾವೇಶದ ನಂತರ, ಸಮಾವೇಶದಲ್ಲಿ ತಾವು ಮಾಡಿದ ಭಾಷಣದ ಮುಖ್ಯಾಂಶಗಳನ್ನು ಸಿದ್ದರಾಮಯ್ಯ ಟ್ವೀಟ್ ಮಾಡಿದರು.

ಇಬ್ಬರು ಕಾಂಗ್ರೆಸ್ ಶಾಸಕರ ನಡುವೆ ಮಾರಾಮಾರಿ: ಸಿದ್ದರಾಮಯ್ಯ ಪ್ರತಿಕ್ರಿಯೆ ಇಬ್ಬರು ಕಾಂಗ್ರೆಸ್ ಶಾಸಕರ ನಡುವೆ ಮಾರಾಮಾರಿ: ಸಿದ್ದರಾಮಯ್ಯ ಪ್ರತಿಕ್ರಿಯೆ

ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಮ್ಮನ್ನು ಟೀಕಿಸುತ್ತಿದ್ದ ಟೀಕಾಕಾರರಿಗೆ ಖಡಕ್ ಪ್ರತ್ಯುತ್ತರ ನೀಡಿದ ಅವರು, ಪೂರ್ವಗ್ರಹಮುಕ್ತ, ಶುದ್ಧ ಪತ್ರಿಕೋದ್ಯಮ ಇಂದಿನ ಅಗತ್ಯ ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ಈ ಸಮಾವೇಶದ ನಂತರ ಸಿದ್ದರಾಮಯ್ಯ ಮಾಡಿದ ಸಾಲು ಸಾಲು ಟ್ವೀಟ್ ಗಳು ಇಲ್ಲಿವೆ!

ಮೀನು ಸೇವಿಸಿ ದೇವಾಲಯಕ್ಕೆ ಹೋದೆ ಅಂದ್ರು!

ಮೀನು ಸೇವಿಸಿ ದೇವಾಲಯಕ್ಕೆ ಹೋದೆ ಎಂದು ಟೀಕಿಸಿದರು. ಹಾಗಾದರೆ ಮಾಂಸ ನೈವೇದ್ಯಕ್ಕೆ ಇಟ್ಟ ಬೇಡರ ಕಣ್ಣಪ್ಪನಿಗೆ ದೇವರು ಒಲಿದಿದ್ದೇಕೆ? ನನಗೂ ದೇವರಲ್ಲಿ ನಂಬಿಕೆ ಇದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವುದೇ ದೇವರಿಗೆ ಸಲ್ಲಿಸುವ ಭಕ್ತಿ, ಗೌರವ ಎಂದು ನಂಬಿದವನು ನಾನು.‌

ಮಾಡಬಾರದ್ದನ್ನು ಮಾಡಿ ಮಂಡಿಯೂರಿದರೆ ದೇವರು ಕ್ಷಮಿಸುವನೇ?- ಸಿದ್ದರಾಮಯ್ಯ

ಕಾಂಗ್ರೆಸ್ ಜೊತೆ ಇರಲು ಸಾಧ್ಯವಾಗದಿದ್ದರೆ ಶಾಸಕರು ರಾಜೀನಾಮೆ ನೀಡಲಿ:ಡಿವಿಎಸ್ ಕಾಂಗ್ರೆಸ್ ಜೊತೆ ಇರಲು ಸಾಧ್ಯವಾಗದಿದ್ದರೆ ಶಾಸಕರು ರಾಜೀನಾಮೆ ನೀಡಲಿ:ಡಿವಿಎಸ್

Array

ಜನರ ಮನಸ್ಸಿನಲ್ಲಿ ಮೌಢ್ಯ ಬಿತ್ತಿದವರು ಯಾರು?

ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂದು ಮಾಧ್ಯಮಗಳು ಹೇಳಿದವು, ಹನ್ನೆರಡು ಬಾರಿ ಹೋದೆ. ದೇವರಾಜ ಅರಸು ಅವರ ಬಳಿಕ ಐದು ವರ್ಷದ ಅವಧಿ ಮುಗಿಸಿದ ಮುಖ್ಯಮಂತ್ರಿ ನಾನೇ.‌ ಹಾಗಾದರೆ ಜನರ ಮನಸ್ಸಿನಲ್ಲಿ ಮೌಢ್ಯ ಬಿತ್ತಿದವರು ಯಾರು?

ಯಡಿಯೂರಪ್ಪ ನುಡಿದಂತೆ ನಡೆಯಲಿ: ಸಿದ್ದರಾಮಯ್ಯ ಸಲಹೆಯಡಿಯೂರಪ್ಪ ನುಡಿದಂತೆ ನಡೆಯಲಿ: ಸಿದ್ದರಾಮಯ್ಯ ಸಲಹೆ

ಯಾವ ಆಧಾರದ ಮೇಲೆ ವ್ಯಕ್ತಿತ್ವ ಅಳೆಯುತ್ತೀರಾ?

ಅನೇಕ ಬಾರಿ ಸುಳ್ಳು ಸುದ್ದಿಗಳು, ತಿರುಚಿದ ಸುದ್ದಿಗಳು, ದುರುದ್ದೇಶ ಪೂರಿತ ಸುದ್ದಿಗಳು ಪ್ರಕಟವಾದಾಗ, ಪ್ರಸಾರವಾದಾಗ ಮನಸ್ಸಿಗೆ ನೋವಾಗುತ್ತದೆ. ಕಾರಿನ‌ ಮೇಲೆ ಕಾಗೆ ಕೂರ್ತು, ಮೀನು ತಿಂದು ದೇವಸ್ಥಾನಕ್ಕೆ ಹೋದ್ರು. ಇವೆಲ್ಲ ಸುದ್ದಿಗಳೇ? ಇದರ ಆಧಾರದಲ್ಲಿ ನನ್ನ ವ್ಯಕ್ತಿತ್ವ ಅಳೆಯುತ್ತೀರಾ?- ಸಿದ್ದರಾಮಯ್ಯ

ಸೇಡು ತೀರಿಸಿಕೊಳ್ಳುವ ಯೋಚನೆಯನ್ನೂ ಮಾಡಿಲ್ಲ!

ನಾನು ನನ್ನ ರಾಜಕೀಯ ಜೀವನದಲ್ಲಿ ಮಾಧ್ಯಮಗಳನ್ನು ಓಲೈಸಲು ಹೋದವನಲ್ಲ, ಅದೇ ರೀತಿ ನನ್ನ ವಿರುದ್ಧವಾಗಿ ಸುದ್ದಿಗಳು ಪ್ರಕಟವಾದಾಗ ಸಿಟ್ಟುಮಾಡಿಕೊಂಡು ಸೇಡು ತೀರಿಸಬೇಕೆಂದು ಯೋಚಿಸಿದವನೂ ಅಲ್ಲ. ಮಾಧ್ಯಮಗಳನ್ನು ಅವುಗಳ ಪಾಡಿಗೆ ಕೆಲಸ ಮಾಡಲು ಸ್ವತಂತ್ರವಾಗಿ ಬಿಟ್ಟು ಬಿಡಬೇಕೆಂದು ನಂಬಿದವನು ನಾನು.

ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ

ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇಟ್ಟವನು ನಾನು. ಜನರ ಪರವಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು. ಜನಾಭಿಪ್ರಾಯಗಳನ್ನು ಮೂಡಿಸುವಾಗ ಅದು ಸಮಾಜಮುಖಿ ಆಗಿರಬೇಕು- ಸಿದ್ದರಾಮಯ್ಯ

ಸತ್ಯ ಹೇಳುವುದೇ ಮಾಧ್ಯಮದ ಜವಾಬ್ದಾರಿ

ಸತ್ಯವನ್ನು ಹೇಳುವುದೇ ಮಾಧ್ಯಮಗಳ ಮುಖ್ಯ ಜವಾಬ್ದಾರಿ. ಸತ್ಯ ಎಷ್ಟೇ ಕಹಿಯಿರಲಿ, ಕಟುವಾಗಿರಲಿ ಮಾಧ್ಯಮಗಳು ಅದನ್ನು ಹೇಳಲು ಹಿಂಜರಿಯಬಾರದು. ಯಾವುದೇ ರೀತಿಯ ರಾಗ-ದ್ವೇಷಗಳನ್ನು ಇಟ್ಟುಕೊಳ್ಳಬಾರದು.

ಜನರನ್ನು ಚಿಂತನಶೀಲರನ್ನಾಗಿ ಮಾಡುವುದೇ ನಿಜವಾದ ಮಾಧ್ಯಮ ಧರ್ಮ.

English summary
Former chief minister Siddaramaiah in his twitter account criticizes people who opposed his every moves while he was CM of Karnataka,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X