ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೊಮ್ಮೆ ಲಕ್ಷ್ಮಣ ಸವದಿ ಸೋತರೆ ರಾಜ್ಯದ ಮುಖ್ಯಮಂತ್ರಿ!

|
Google Oneindia Kannada News

ಕೊಪ್ಪಳ, ಅಕ್ಟೋಬರ್ 28 : "ಉಪ ಮುಖ್ಯಮಂತ್ರಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಇನ್ನೊಮ್ಮೆ ಚುನಾವಣೆಯಲ್ಲಿ ಸೋತರೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದರು.

ಕೊಪ್ಪಳದಲ್ಲಿ ಮಾತನಾಡಿದ ಶಿವರಾಜ್ ತಂಗಡಗಿ ಲಕ್ಷ್ಮಣ ಸವದಿ ತಮ್ಮ ವಿರುದ್ಧ ಮಾಡಿದ್ದ ಟೀಕೆಗಳಿಗೆ ಉತ್ತರ ನೀಡಿದರು. "ಲಕ್ಷ್ಮಣ ಸವದಿ ಒಮ್ಮೆ ಬಾರಿ ಸೋತಿದ್ದಕ್ಕೆ ಉಪ ಮುಖ್ಯಮಂತ್ರಿಯಾಗಿದ್ದಾರೆ" ಎಂದು ಟೀಕಿಸಿದರು.

ಚುನಾವಣೆ ಸೋತರೂ ಸಚಿವರಾದ ಲಕ್ಷ್ಮಣ ಸವದಿ ಪರಿಚಯಚುನಾವಣೆ ಸೋತರೂ ಸಚಿವರಾದ ಲಕ್ಷ್ಮಣ ಸವದಿ ಪರಿಚಯ

ಕೆಲವು ದಿನಗಳ ಹಿಂದೆ ಕೊಪ್ಪಳಕ್ಕೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, "ಚುನಾವಣೆಯಲ್ಲಿ ಸೋತ ಬಳಿಕ ಶಿವರಾಜ್ ತಂಗಡಗಿ ತನ್ನ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ" ಎಂದು ಹೇಳಿಕೆ ನೀಡಿದ್ದರು.

ಲಕ್ಷ್ಮಣ ಸವದಿಗೆ ಯಾಕೆ ಡಿಸಿಎಂ ಹುದ್ದೆ ಕೊಟ್ರು, ಕಾರಣ ಬಹಿರಂಗಲಕ್ಷ್ಮಣ ಸವದಿಗೆ ಯಾಕೆ ಡಿಸಿಎಂ ಹುದ್ದೆ ಕೊಟ್ರು, ಕಾರಣ ಬಹಿರಂಗ

Shivaraj Tangadagi

"ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈದರೆ ಶಿವರಾಜ್ ತಂಗಡಗಿಗೆ ಪ್ರಚಾರ ಸಿಗುತ್ತದೆ. ಆದ್ದರಿಂದ, ಅವರನ್ನು ಬೈದು ಪ್ರಚಾರ ಪಡೆದುಕೊಳ್ಳುತ್ತಾರೆ" ಎಂದು ಲಕ್ಷ್ಮಣ ಸವದಿ ಆರೋಪಿಸಿದ್ದರು.

ಡಿಸಿಎಂ ವಿರುದ್ದ ಹೇಳಿಕೆ ನೀಡಿ ನಂತರ ವಾಪಸ್ ಪಡೆದ ಜಾರಕಿಹೊಳಿಡಿಸಿಎಂ ವಿರುದ್ದ ಹೇಳಿಕೆ ನೀಡಿ ನಂತರ ವಾಪಸ್ ಪಡೆದ ಜಾರಕಿಹೊಳಿ

ಲಕ್ಷ್ಮಣ ಸವದಿ 2018ರ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ 79,763 ಮತಗಳನ್ನು ಪಡೆದು ಕಾಂಗ್ರೆಸ್‌ನ ಮಹೇಶ್ ಕುಮಟಳ್ಳಿ ವಿರುದ್ಧ ಸೋಲು ಕಂಡಿದ್ದರು. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತ ನಾಯಕರಲ್ಲಿ ಲಕ್ಷ್ಮಣ ಸವದಿ ಸಹವೊಬ್ಬರು. ಈಗ ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಮಹೇಶ್ ಕುಮಟಳ್ಳಿ ಅನರ್ಹಗೊಂಡಿದ್ದು, ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

English summary
Laxman Savadi lost 2018 assembly elections and now he is deputy chief minister. If he lost another election he may become Chief Minister of state said Congress leader and Former minister Shivaraj Tangadagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X