• search
 • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಂಗಾವತಿಯಿಂದ ಅಕ್ಕಿ ಸಾಗಾಣೆಗೆ ಪ್ರತ್ಯೇಕ ರೈಲು ಮಾರ್ಗ

|
Google Oneindia Kannada News

ಕೊಪ್ಪಳ, ಫೆಬ್ರವರಿ 19; ಕೊಪ್ಪಳ ಜಿಲ್ಲೆಯ ಗಂಗಾವತಿ ಕರ್ನಾಟಕದ ಭತ್ತದ ಕಣಜವಾಗಿದೆ. ಇಲ್ಲಿ ಬೆಳೆಯುವ ಸೋನಾಮಸೂರಿ ಅಕ್ಕಿ ರಾಜ್ಯ ಮಾತ್ರವಲ್ಲಿ ವಿದೇಶಗಳಲ್ಲಿ ಸಹ ಬೇಡಿಕೆಯನ್ನು ಪಡೆದುಕೊಂಡಿದೆ.

ಗಂಗಾವತಿಯ ಅಕ್ಕಿ ಉದ್ಯಮಕ್ಕೆ ಉತ್ತೇಜನ ನೀಡಲು ನೈಋತ್ಯ ರೈಲ್ವೆ ಸರಕು ಸಾಗಣೆಗಾಗಿಯೇ ಫ್ಲಾಟ್ ಫಾರ್ಮ ಸಹಿತವಾಗಿ ಪ್ರತ್ಯೇಕ ಮಾರ್ಗವನ್ನು ಗಂಗಾವತಿ ರೈಲು ನಿಲ್ದಾಣದಲ್ಲಿ ನಿರ್ಮಾಣ ಮಾಡಿದೆ.

ಮೈಸೂರು-ಚಾಮರಾಜನಗರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಮೈಸೂರು-ಚಾಮರಾಜನಗರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗಕ್ಕೆ ಗಂಗಾವತಿ ಸೇರುತ್ತದೆ. ಪ್ರತ್ಯೇಕ ಮಾರ್ಗದ ಮೂಲಕ ಫೆಬ್ರವರಿ 14ರಂದು 1326 ಟನ್ ಅಕ್ಕಿಯನ್ನು ಗಂಗಾವತಿ ನಿಲ್ದಾಣದಿಂದ ಅಸ್ಸಾಂನ ಗುವಾಹತಿ ಸಮೀಪದ ಅಜ್ರಾಕ್ಕೆ ಸಾಗಣೆ ಮಾಡಲಾಗಿದೆ.

ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ 6 ಪಥವಾಗಿ ಅಗಲೀಕರಣ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ 6 ಪಥವಾಗಿ ಅಗಲೀಕರಣ

ಅಕ್ಕಿಯನ್ನು ಹೊತ್ತ ರೈಲು 2795 ಕಿ. ಮೀ. ಸಂಚಾರ ನಡೆಸಿದೆ. ಇದರಿಂದಾಗಿ ನೈಋತ್ಯ ರೈಲ್ವೆಗೆ 40.45 ಲಕ್ಷ ಆದಾಯ ಬಂದಿದೆ. ಪ್ರತ್ಯೇಕ ಮಾರ್ಗದ ವ್ಯವಸ್ಥೆಯಿಂದಾಗಿ ಪ್ರತಿ ತಿಂಗಳು 3 ರಿಂದ 4 ಮಿನಿ ರೇಕ್ಸ್ ಲಭಿಸುವ ನಿರೀಕ್ಷೆ ಇದೆ.

 ಭಾರತದ ಅಕ್ಕಿಗೆ ಎಲ್ಲಿಲ್ಲದ ಡಿಮ್ಯಾಂಡ್: ದಶಕದಲ್ಲೇ ಮೊದಲ ಬಾರಿಗೆ ಅಕ್ಕಿ ಖರೀದಿಸಿದ ವಿಯೆಟ್ನಾಂ ಭಾರತದ ಅಕ್ಕಿಗೆ ಎಲ್ಲಿಲ್ಲದ ಡಿಮ್ಯಾಂಡ್: ದಶಕದಲ್ಲೇ ಮೊದಲ ಬಾರಿಗೆ ಅಕ್ಕಿ ಖರೀದಿಸಿದ ವಿಯೆಟ್ನಾಂ

ಈ ಮಾರ್ಗವನ್ನು ಕೇವಲ ಅಕ್ಕಿ ಮಾತ್ರವಲ್ಲ ಧಾನ್ಯ, ರಸಗೊಬ್ಬರ ಸಾಗಟಕ್ಕೂ ಬಳಕೆ ಮಾಡಲಾಗುತ್ತದೆ. ಗೂಡ್ಸ್ ಶೆಡ್ ನಿರ್ಮಾಣದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಇದರಿಂದಾಗಿ ರೈತರಿಗೆ ಸಹ ಅನುಕೂಲವಾಗಲಿದೆ.

   ವಾಯುಮಾಲಿನ್ಯದಿಂದ ಬೆಂಗಳೂರಲ್ಲಿ 12 ಸಾವಿರ ಜನರ ಸಾವು...! | AirPollution | Oneindia Kannada

   ನೈಋತ್ಯ ರೈಲ್ವೆ ವಿಭಾಗದ ಡಿಆರ್‌ಎಂ ಅರವಿಂದ ಮಾಲಖೇಡೆ ಈ ಕುರಿತು ಹೇಳಿಕೆ ನೀಡಿದ್ದು, "ಸರಕು ಸಾಗಣೆಗೆ ರೈಲ್ವೆ ಅತ್ಯುಪಯುಕ್ತ ಮಾರ್ಗವಾಗಿದೆ. ಅತಿ ವೇಗ, ಅತಿ ಸುರಕ್ಷಿತ, ಕನಿಷ್ಠ ವೆಚ್ಚದಲ್ಲಿ ಸಾಗಣೆ ಮಾಡಬಹುದು" ಎಂದು ಹೇಳಿದ್ದಾರೆ.

   English summary
   South western railway transported 1,326 metric tonnes of rice from Gangavathi to Azara in Assam. Gangavathi is a town in the Koppal district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X