ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಳಿಂಬೆ ಬೆಳೆದು ಲಾಭದ ಸಿಹಿ ಸವಿದ ಕೊಪ್ಪಳದ ರೈತ

|
Google Oneindia Kannada News

ಕೊಪ್ಪಳ, ಜೂನ್ 02 : ದಾಳಿಂಬೆ ಬೆಳೆಯಿಂದ ಲಾಭವೋ?, ನಷ್ಟವೋ? ಎಂದು ಕೆಲವು ರೈತರು ಆಲೋಚಿಸುತ್ತಾರೆ. ಕೊಪ್ಪಳ ಜಿಲ್ಲೆಯ ರೈತರೊಬ್ಬರು ದಾಳಿಂಬೆ ಬೆಳೆದು ಲಾಭದ ಸಿಹಿ ಸವಿದಿದ್ದಾರೆ. ಇತರ ರೈತರಿಗೆ ಮಾದರಿಯಾಗಿದ್ದಾರೆ.

ಮಾವು ಬೆಳೆದು ಯಶಸ್ಸು ಕಂಡಿರುವುದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ರೈತ ಸಂಗನಗೌಡ ಶೀಲವಂತರ. ಬ್ಯಾಂಕ್ ಉದ್ಯೋಗಿಯಾಗಿದ್ದ ಸಂಗನಗೌಡ ಶೀಲವಂತರ ಅವರು ನಿವೃತ್ತಿ ನಂತರ ಗುನ್ನಾಳ ಗ್ರಾಮದ ತಮ್ಮ 4 ಎಕರೆ ಜಮೀನಿನಲ್ಲಿ ಮಾವು ಬೆಳೆಯಲು ಆಲೋಚಿಸಿದರು.

ಮೊದಲ ಸಂಪುಟ ಸಭೆಯಲ್ಲಿಯೇ ರೈತರಿಗೆ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರಮೊದಲ ಸಂಪುಟ ಸಭೆಯಲ್ಲಿಯೇ ರೈತರಿಗೆ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ

ಸುಮಾರು 400 ವಿವಿಧ ತಳಿ ಮಾವಿನ ಗಿಡಗಳನ್ನು ನಾಟಿ ಮಾಡಿದರು. ಆದರೆ, ಮಾವು ಇವರ ಜಮೀನಿನಲ್ಲಿ ಸರಿಯಾಗಿ ಬರಲಿಲ್ಲ. ಸ್ವಲ್ಪ ನೀರಿನಲ್ಲಿ ಲವಣಾಂಶ ಇದ್ದದ್ದು, ಇದಕ್ಕೆ ಕಾರಣವಾಗಿತ್ತು. 2 ವರ್ಷಗಳಾದರು ಮಾವು ಸರಿ ಬರದೇ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದರು.

ಪೂರ್ವ ಮುಂಗಾರು ಮಳೆ ಕೊರತೆಯ ವಿವರ, ರೈತರಿಗೆ ಸಲಹೆಪೂರ್ವ ಮುಂಗಾರು ಮಳೆ ಕೊರತೆಯ ವಿವರ, ರೈತರಿಗೆ ಸಲಹೆ

Pomegranate cultivation success story of Koppal farmer

ಸಹಾಯಕ ತೋಟಗಾರಿಕೆ ಅಧಿಕಾರಿ ಉಮೇಶ ಕಾಳೆ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮಾರ್ಗದರ್ಶನದಂತೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ದಾಳಿಂಬೆ ಬೆಳೆ ಬೆಳೆಯಲು ಮುಂದಾದರು.
2017 ಜುಲೈನಲ್ಲಿ ದಾಳಿಂಬೆ ಕೇಸರಿ ತಳಿಯ ಸುಮಾರು 1,500 ಗೂಟಿ ಮಾಡಿದ ಸಸಿಗಳನ್ನು 10*10 ಅಡಿ ಅಂತರದಲ್ಲಿ ನಾಟಿ ಮಾಡಿದರು. ಹನಿ ನೀರಾವರಿ ಅಳವಡಿಸಿಕೊಂಡು ಗಿಡಗಳಿಗೆ ಇದ್ದ ಕಡಿಮೆ ನೀರಿನಲ್ಲಿಯೇ ನಿರ್ವಹಣೆ ಮಾಡಿ, ಇಲಾಖೆ ಅಧಿಕಾರಿಗಳ ಸಲಹೆಯಂತೆ ನೀರು ಮತ್ತು ಪೋಷಕಾಂಶಗಳ ನೀಡಿದರು.

ನೇಪಥ್ಯಕ್ಕೆ ಸರಿದ ಹೆಂಗಳೆಯರ ನೆಚ್ಚಿನ 'ಮೈಸೂರು ಮಲ್ಲಿಗೆ'ನೇಪಥ್ಯಕ್ಕೆ ಸರಿದ ಹೆಂಗಳೆಯರ ನೆಚ್ಚಿನ 'ಮೈಸೂರು ಮಲ್ಲಿಗೆ'

ಜೀವಾಮೃತದಂತಹ ಸಾವಯುವ ಗೊಬ್ಬರಗಳನ್ನು ನೀಡಿ 2018 ನವಂಬರ್ ತಿಂಗಳಿನಲ್ಲಿ ಚಾಟ್ನಿ ಕೈಗೊಂಡಿರುತ್ತಾರೆ. ನಂತರ ತೋಟಗಾರಿಕೆ ವಿಷಯತಜ್ಞ ವಾಮನಮೂರ್ತಿ ರವರ ಸಲಹೆಯಂತೆ ಕೀಟ, ರೋಗ ಮತ್ತು ಪೋಷಕಾಂಶಗಳ ಸಮರ್ಪಕ ನಿರ್ವಹಣೆ ಮಾಡಿದರು.

ಇದು ವರೆಗೂ ಸುಮಾರು 6 ಟನ್ ಗುಣಮಟ್ಟದ ಇಳುವರಿ ಪಡೆದು ರೂ.60 ಪ್ರತಿ ಕೆಜಿ ಯಂತೆ ಮಾರಾಟ ಮಾಡಿರುತ್ತಾರೆ. ಇನ್ನೂ 3-4 ಟನ್ ಉತ್ತಮ ಗುಣಮಟ್ಟದ ಹಣ್ಣುಗಳು ಕೊಯ್ಲಿಗೆ ಸಿದ್ದವಾಗುತ್ತಿವೆ. ಖರ್ಚೆಲ್ಲಾ ಹೋಗಿ ಅವರ ನಿವ್ವಳ ಲಾಭ 5 ಲಕ್ಷ ಆಗ ಸಿಗುವ ನಿರೀಕ್ಷೆ ಇದೆ.

'ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ನಡಿ ಸಹಾಯಧನ ಪಡೆದಿದ್ದೇನೆ. ಇದಲ್ಲದೇ ಸಮಗ್ರ ಕೀಟ ಮತ್ತು ಪೋಷಕಾಂಶಗಳ ನಿರ್ವಹಣೆ ಯೋಜನೆಯಡಿ ಸಹಾಯಧನ ದೊರಕಿದೆ. ಹನಿ ನೀರಾವರಿಗಾಗಿ ಅರ್ಜಿ ಸಲ್ಲಿಸಿದ್ದು ಅದು ಕೂಡಾ ಸದ್ಯದಲ್ಲೇ ಸಂದಾಯವಾಗಲಿದೆ' ಎಂದು ರೈತ ಸಂಗನಗೌಡ ಶೀಲವಂತರ ಹೇಳಿದ್ದಾರೆ.

ಇದು ವರೆಗೂ ಸುಮಾರು ರೂ.2. ಲಕ್ಷದಷ್ಟು ಖರ್ಚಾಗಿದ್ದು, ರೂ.5. ಲಕ್ಷ ಆದಾಯ ಬರುವ ನಿರೀಕ್ಷೆಯಲ್ಲಿದ್ದೇನೆ ಎಂದು ಸಂಗನಗೌಡ ಶೀಲವಂತರ ಹೇಳಿದ್ದಾರೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಈಗಲೂ ಅಗತ್ಯ ಸಲಹೆಗಳನ್ನು ನೀಡುತ್ತಿದ್ದಾರೆ.

'ಕೈ ಕೆಸರಾದರೆ ಬಾಯಿ ಮೊಸರು' ಎಂಬ ಗಾದೆಯಂತೆ ಬರಗಾಲದಲ್ಲೂ ಉತ್ತಮ ಫಸಲು ಹಾಗೂ ಆದಾಯ ಪಡೆದ ರೈತ ಸಂಗನಗೌಡ ಶೀಲವಂತರ ಇತರರಿಗೂ ಮಾದರಿಯಾಗಿದ್ದಾರೆ.

English summary
Success story of a Koppal farmer who got good revenue from pomegranate cultivation. Horticulture department advised the farmer Sangana Gowda Sheelavanthar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X