ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳದಲ್ಲಿ ಜ.19ರಂದು ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ ಲೋಕಾರ್ಪಣೆ

|
Google Oneindia Kannada News

ಕೊಪ್ಪಳ, ಜನವರಿ 19: ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ''ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112'' ಜನವರಿ 19 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು, ಮಹಿಳೆಯರು, ನೊಂದವರು, ಹಿರಿಯ ನಾಗರಿಕರು ತಮ್ಮ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ.

ದಾವಣಗೆರೆ; ಎಲ್ಲಾ ತುರ್ತು ಸೇವೆಗೆ ಒಂದೇ ಸಂಖ್ಯೆ ದಾವಣಗೆರೆ; ಎಲ್ಲಾ ತುರ್ತು ಸೇವೆಗೆ ಒಂದೇ ಸಂಖ್ಯೆ "112"

ತುರ್ತು ಕರೆ ಬಳಕೆ ವಿಧಾನ: ತುರ್ತು ಕರೆ ಸಂಖ್ಯೆ 112 ನ್ನು ಬಳಕೆ ಮಾಡುವ ವಿಧಾನ ಇಂತಿದೆ. ಯಾವುದೇ ಮೊಬೈಲ್ ಫೋನ್ ಅಥವಾ ಸ್ಥಿರ ದೂರವಾಣಿಯಿಂದ 112 ಸಂಖ್ಯೆಗೆ ಕರೆ ಮಡುವುದರ ಮೂಲಕ, 112 ಸಂಖ್ಯೆಗೆ ಸಂದೇಶ (ಎಸ್.ಎಮ್.ಎಸ್) ರವಾನಿಸಬಹುದು ಅಥವಾ 112 ವೆಬ್ ಪೋರ್ಟಲ್ (www.ka.ners.in) ಮೂಲಕ ಸಹಾಯ ಕೋರಬಹುದು.

Koppal: One India One emergency Number 112 launched from Jan 19

ಮೊಬೈಲ್ ಫೋನ್‌ನಲ್ಲಿ 112 ಇಂಡಿಯಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಎಸ್.ಓ.ಎಸ್ ( SOS) ಸೇವೆ ಬಳಕೆ ಮಾಡುವುದರ ಮೂಲಕ ಹಾಗೂ ಇ-ಮೇಲ್ ಐಡಿ [email protected] ಗೆ ಸಂದೇಶ ಕಳುಹಿಸುವುದರ ಮೂಲಕ ಸಹಾಯ ಪಡೆಯಬಹುದಾಗಿದೆ.

Recommended Video

Special Report :Karnataka-Maharashtra ಗಡಿವಿವಾದ ಬೂದಿ ಮುಚ್ಚಿದ ಕೆಂಡ- ಇದು ಇಂದು ನಿನ್ನೆಯ ವಿವಾದವಲ್ಲ..!

Emergency Response Support System (ERSS-112) ಕರ್ತವ್ಯಕ್ಕೆ ಒಟ್ಟ್ಟು 7 ತುರ್ತು ಸ್ಪಂದನಾ ವಾಹನಗಳನ್ನು ನಿಯೋಜಿಸಲಾಗಿದ್ದು, ಪ್ರತಿ ವಾಹನದಲ್ಲಿ 3 ಜನ ಅಧಿಕಾರಿ/ ಸಿಬ್ಬಂದಿಯವರು (24 X 7) ಕರ್ತವ್ಯ ನಿರ್ವಹಿಸುವರು. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದು ಹೇಳಿದರು.

English summary
Public can now use 112 as emergency Number from today(Jan 19) for all emergency services like police, fire, ambulance sadi Koppal SP T Sridhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X