ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳೆದ 3 ವರ್ಷದಲ್ಲಿ ಒಂದು ಬಾರಿಯೂ ಈ ಊರಿಗೆ ಅಂಚೆಯಣ್ಣ ಬಂದಿಲ್ಲ

|
Google Oneindia Kannada News

ಯಲಬುರ್ಗಾ, ನವೆಂಬರ್ 12: ಈ ಊರಿಗೆ ಕಳೆದ ಮೂರು ವರ್ಷಗಳಿಂದ ಒಂದು ಪತ್ರವೂ ಬಂದಿಲ್ಲ. ಮನಿ ಆರ್ಡರ್, ಪರೀಕ್ಷೆಗಳ ಪ್ರವೇಶ ಪತ್ರ, ಎಟಿಎಂ ಸೇರಿದಂತೆ ಒಂದೂ ಈ ಊರ ಜನರ ಕೈ ಸೇರಿಲ್ಲ.

ಹಾಗೆಂದ ಮಾತ್ರ ಯಾವ ಪತ್ರವೂ ಬಂದೇ ಇಲ್ಲ ಅಂತಲ್ಲ, ಪೋಸ್ಟ್‌ ಮಾಸ್ಟರ್ ಯಾವ ಪತ್ರವನ್ನೂ ಮನೆಗಳಿಗೆ ತಲುಪಿಸುವ ಕೆಲಸ ಮಾಡಿಲ್ಲ.

ಸುಮಾರು ಮೂರು ವರ್ಷಗಳಿಂದ ಗ್ರಾಮಕ್ಕೆ ವೃದ್ಧಾಪ್ಯ, ವೇತನ, ಆಧಾರ್ ಕಾರ್ಡ್ ಇನ್ನಿತರೆ ಯಾವುದೇ ಪತ್ರಗಳು ಬರುತ್ತಿಲ್ಲ ಎಂಬ ಸಾರ್ವಜನಿಕ ವಲಯದಿಂದ ದೂರು ಬಂದಿದ್ದರಿಂದ ಅಧಿಕಾರಿಗಳು ಕಚೇರಿಗೆ ಬಂದು ಪರಿಶೀಲನೆ ನಡೆಸಿದ್ದಾರೆ.

ಪಾರ್ಸೆಲ್ ನೆಟ್ವರ್ಕ್ ಹೆಚ್ಚಿಸಲು ವೆಬ್ ತಾಣ ತೆರೆದ ಇಂಡಿಯಾ ಪೋಸ್ಟ್ ಪಾರ್ಸೆಲ್ ನೆಟ್ವರ್ಕ್ ಹೆಚ್ಚಿಸಲು ವೆಬ್ ತಾಣ ತೆರೆದ ಇಂಡಿಯಾ ಪೋಸ್ಟ್

ಆಗ ತನಿಖಾ ಅಧಿಕಾರಗಳಿಗೆ ಸಾವಿರಾರು ಪತ್ರಗಳ ಜೊತೆಗೆ ಎಟಿಎಂ ಕಾರ್ಡ್, ಪಾಸ್‌ಬುಕ್, ಪ್ಯಾನ್‌ಕಾರ್ಡ್‌ಗಳು ದೊರೆತಿವೆ.

 ಘಟನೆ ನಡೆದಿದ್ದು ಎಲ್ಲಿ?

ಘಟನೆ ನಡೆದಿದ್ದು ಎಲ್ಲಿ?

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಪೋಸ್ಟ್‌ ಆಫೀಸಿಗೆ ಬಂದಿದ್ದ ಸುಮಾರು ಹೆಚ್ಚು ಪತ್ರಗಳನ್ನು ವಿಲೇವಾರಿ ಮಾಡದೆ ಸ್ಥಳೀಯ ಪೋಸ್ಟ್‌ಮನ್ ಕರ್ತವ್ಯಲೋಪ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪರಿಣಾಮ ಎಟಿಎಂ ಕಾರ್ಡ್, ಪ್ರಮುಖ ಪರೀಕ್ಷೆಗಳ ಪ್ರವೇಶ ಪತ್ರ ಸೇರಿದಂತೆ ಹಲವಾರು ಮಹತ್ವದ ದಾಖಲೆಗಳು ತಲುಪಬೇಕಾದ ವಿಳಾಸಕ್ಕೆ ತಲುಪದೆ ಜನರು ಸಾಕಷ್ಟು ತೊಂದರೆ ಎದುರಸುತ್ತಿದ್ದಾರೆ.

 2017ರಿಂದ 2019ರವರೆಗೆ ಒಂದು ಪತ್ರವೂ ಬಂದಿಲ್ಲ

2017ರಿಂದ 2019ರವರೆಗೆ ಒಂದು ಪತ್ರವೂ ಬಂದಿಲ್ಲ

ಸಂಗನಾಳ ಗ್ರಾಮದ ಪೋಸ್ಟ್‌ಮ್ಯಾನ್ ಸುರೇಶ ತಳವಾರ ಎಂಬುವವರು ಈ ಕೃತ್ಯ ಎಸಗಿದ್ದಾರೆ. 2017ರಿಂದ 2019ರವರೆಗಿನ ಕಚೇರಿಗೆ ಬಂದ ಪತ್ರಗಳನ್ನು ಸಂಬಂಧಿಸಿದವರಿಗೆ ವಿತರಿಸದೆ ಎಲ್ಲವನ್ನು ಅವರು ತನ್ನ ಬಳಿಯೇ ಉಳಿಸಿಕೊಂಡಿದ್ದಾರೆ.

 ಸರ್ಕಾರಿ ಪ್ರಕರಣೆಗಳೂ ಕೂಡ ಅಲ್ಲೇ ಇವೆ

ಸರ್ಕಾರಿ ಪ್ರಕರಣೆಗಳೂ ಕೂಡ ಅಲ್ಲೇ ಇವೆ

ಕಚೇರಿಗೆ ಬಂದಿದ್ದ ಪತ್ರಗಳಲ್ಲಿ ಸರ್ಕಾರದ ಅಧಿಕೃತ ಪ್ರಕಟಣೆಗಳು, ವಿಮೆ ನೋಟಿಸುಗಳು, ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್‌ಗಳು, ಪದವಿ ಪ್ರಮಾಣ ಪತ್ರಗಳು, ಪರೀಕ್ಷಾ ಪ್ರವೇಶಪತ್ರಗಳು, ಕೆಲಸದ ನೇಮಕ ಪತ್ರ ಹಾಗೂ ಬಹುಮುಖ್ಯವಾದ ಮಾಹಿತಿ ಪತ್ರಗಳೂ ಸೇರಿವೆ.

 ಸುಮಾರು 1500 ಪತ್ರಗಳ ವಿಲೇವಾರಿ ಬಾಕಿ

ಸುಮಾರು 1500 ಪತ್ರಗಳ ವಿಲೇವಾರಿ ಬಾಕಿ

ಸುಮಾರು 1500 ಪತ್ರಗಳು ಹಾಗೂ ವಿವಿಧ ವಸ್ತುಗಳು ಬಂದರೂ ಅವುಗಳನ್ನು ವಿರಿಸಿಲ್ಲ. ಕೈಗೆ ಸೇರಬೇಕಾದ ದಾಖಲೆ ಸರಿಯಾದ ಸಮಯಕ್ಕೆ ಸೇರದ್ದರಿಂದ ಗ್ರಾಮಸ್ಥರು ಬಹಳ ತಲೆ ಕೆಡಿಸಿಕೊಂಡಿದ್ದರು. ಕೆಲವರು ಸರ್ಕಾರಿ ಕಚೇರಿಯ ಕೆಲಸಗಳು ಇದರಿಂದ ಬಾಕಿಯಾಗಿ ಬಹಳ ಸಮಸ್ಯೆಗಳಿದ್ದವು. ಹಲವರು ಪತ್ರ ಕಳಿಸಿರುವ ವಿವಿಧ ಕಚೇರಿಗಳಿಗೆ ಕರೆ ಮಾಡಿ, ಹೋಗಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಗಲಾಟೆಯನ್ನೂ ಕೂಡ ಮಾಡಿದ್ದರು.

English summary
No letter has been received for the last three years. The money order, ATM's are not in the hand of the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X