ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿರೂಪಾಪುರ; ಬೋಟ್ ಮಗುಚಿ ಅಪಾಯದಲ್ಲಿ ಸಿಲುಕಿದ ಎನ್ ಡಿಆರ್ ಎಫ್ ಸಿಬ್ಬಂದಿ ರಕ್ಷಣೆ

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ಆಗಸ್ಟ್ 12: ತುಂಗಭದ್ರಾ ಜಲಾಶಯದ ನೀರು ನದಿ ಪಾತ್ರಗಳಿಗೆ ಹರಿದು ಕೊಪ್ಪಳ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಹೋಗಿದ್ದ ತಂಡವೇ ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದ್ದು, ಅವರೆಲ್ಲರನ್ನೂ ರಕ್ಷಿಸಲಾಗಿದೆ.

ವಿರುಪಾಪುರಗಡ್ಡೆ: ನಡುಗಡ್ಡೆಯಲ್ಲಿ ಸಿಲುಕಿದ್ದ 14 ವಿದೇಶಿಗರ ರಕ್ಷಣೆವಿರುಪಾಪುರಗಡ್ಡೆ: ನಡುಗಡ್ಡೆಯಲ್ಲಿ ಸಿಲುಕಿದ್ದ 14 ವಿದೇಶಿಗರ ರಕ್ಷಣೆ

ಇಂದು ಬೆಳಿಗ್ಗೆ ವಿರೂಪಾಪುರ ಗಡ್ಡೆಯಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಲು ಎನ್ ಡಿಆರ್ ಎಫ್ ತಂಡ ಇಲ್ಲಿಗೆ ಧಾವಿಸಿತ್ತು. ಬೋಟ್ ಮೂಲಕ ರಕ್ಷಣಾ ಕಾರ್ಯ ಮುಂದುವರೆದಿತ್ತು. ಕೆಲವು ವಿದೇಶಿಗರನ್ನು ಈಗಾಗಲೇ ರಕ್ಷಿಸಲಾಗಿತ್ತು. ಆದರೆ ಮತ್ತಷ್ಟು ಮಂದಿಯನ್ನು ರಕ್ಷಿಸಲು ತೆರಳುತ್ತಿದ್ದ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡು ಬೋಟ್ ನಿಂದ ನೀರಿಗೆ ಉರುಳಿ ನೀರಿನಲ್ಲಿ ತೇಲಿ ಹೋಗುತ್ತಿದ್ದರು.

Ndrf Under Danger In Virupapura

ತಕ್ಷಣವೇ ಎನ್ ಡಿಆರ್ ಎಫ್ ಸಿಬ್ಬಂದಿ ರಕ್ಷಣೆಗೆ ಸೇನಾ ಹೆಲಿಕಾಪ್ಟರ್ ಅನ್ನು ಕರೆಸಲಾಗಿದ್ದು, ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬೋಟ್ ನಲ್ಲಿದ್ದ ಐದು ಮಂದಿ ಪೈಕಿ ಮೂವರನ್ನು ಮೊದಲು ರಕ್ಷಿಸಲಾಗಿದೆ. ನಂತರ ಮತ್ತಿಬ್ಬರನ್ನು ರಕ್ಷಿಸಲಾಗಿದೆ.

English summary
The NDRF team which went to virupapura gadde to rescue people are under danger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X