ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಗಾವತಿಯಲ್ಲಿ ಮೋದಿ : ಕರ್ನಾಟಕದಲ್ಲಿ ಈಗ 20 ಪರ್ಸೆಂಟ್ ಸರ್ಕಾರವಿದೆ

|
Google Oneindia Kannada News

ಕೊಪ್ಪಳ, ಏಪ್ರಿಲ್ 12 : 'ಕರ್ನಾಟಕದಲ್ಲಿ ಹಿಂದೆ 10 ಪರ್ಸೆಂಟ್ ಸರ್ಕಾರವಿತ್ತು. ಈಗ ಕಾಂಗ್ರೆಸ್ ಜೆಡಿಎಸ್ ಸೇರಿ 20 ಪರ್ಸೆಂಟ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಿದ್ದರು. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತಾಡಿದರು. ಕೊಪ್ಪಳ, ಬಳ್ಳಾರಿ, ರಾಯಚೂರು ಕ್ಷೇತ್ರದ ಅಭ್ಯರ್ಥಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಕೊಪ್ಪಳ ಚುನಾವಣಾ ಕಣ : ಸಂಗಣ್ಣ ಕರಡಿಗೆ ಸಿಗುವುದೇ ಗೆಲವು?ಕೊಪ್ಪಳ ಚುನಾವಣಾ ಕಣ : ಸಂಗಣ್ಣ ಕರಡಿಗೆ ಸಿಗುವುದೇ ಗೆಲವು?

Narendra modi election campaign rally Gangavathi Koppal live updates

ಧಾರವಾಡ, ಕಲಬುರಗಿ, ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಪ್ರಚಾರ ನಡೆಸಿದ್ದಾರೆ. ಶುಕ್ರವಾರ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಗಾಗಿ ಪ್ರಚಾರ ನಡೆಸಿದರು.

ಕೊಪ್ಪಳದ ಚುನಾವಣಾ ಪುಟ

ಪ್ರಧಾನಿ ನರೇಂದ್ರ ಮೋದಿ ಅವರಿಗೆ 1650 ಗ್ರಾಂ ತೂಕದ ಬೆಳ್ಳಿ ಗದೆಯನ್ನು ಉಡುಗೊರೆಯಾಗಿ ನೀಡಲಾಯಿತು. ಹನುಮ ಮಾಲಾಧಾರಿಗಳು ಗದೆಗೆ ಗಂಗಾವತಿಯ ಅಂಜನಾದ್ರಿ ಪರ್ವತದಲ್ಲಿ ವಿಶೇಷ ಪೂಜೆ ಮಾಡಿಸಿದ್ದರು. ಅಂಜನಾದ್ರಿ ಪರ್ವತ ಹನುಮಂತ ಹುಟ್ಟಿದ ಸ್ಥಳ ಎಂದೇ ಪ್ರಸಿದ್ಧಿ ಪಡೆದಿದೆ...

Newest FirstOldest First
4:05 PM, 12 Apr

ನನ್ನ ಜೊತೆಯಲ್ಲಿ ಹೇಳಿ ಹಳ್ಳಿ ಹಳ್ಳಿಯೂ ಚೌಕಿದಾರ್, ಉಳುವ ಭೂಮಿಯಲ್ಲೂ, ದೇಶದ ಗಡಿಯಲ್ಲೂ, ಡಾಕ್ಟರ್ ಇಂಜಿನಿಯರ್ ಸಹ, ಕಲೆಗಾರ ಸಹ, ರೈತ ಶ್ರಮಿಕ ಸಹ, ವಿದ್ಯಾರ್ಥಿಗಳು ಸಹ ಚೌಕಿದಾರ್
4:02 PM, 12 Apr

ಮತ್ತೆ ಘೋಷಣೆ ಕೂಗುವ ಮೂಲಕ ನರೇಂದ್ರ ಮೋದಿ ಭಾಷಣಕ್ಕೆ ಅಡ್ಡಿ. ನಿಮ್ಮ ಅಭಿಮಾನಕ್ಕೆ ಋಣಿ ಎಂದ ಪ್ರಧಾನಿ ನರೇಂದ್ರ ಮೋದಿ
4:01 PM, 12 Apr

ಮೇ 23ರಂದು ದೆಹಲಿಯಲ್ಲಿ ಮತ್ತೆ ಮೋದಿ ಸರ್ಕಾರ ಬರಲಿದೆ. ನಮ್ಮ ಚೌಕಿದಾರ್ ಸರ್ಕಾರ ರೈತರಿಗೆ ಕಿಸಾನ್ ಸಮ್ಮನ್ ಯೋಜನೆ ಯಡಿ ನೆರವು ನೀಡಲಿದೆ.
3:59 PM, 12 Apr

ಸಾಲಮನ್ನಾ ಭರವಸೆಯನ್ನು ಮುಖ್ಯಮಂತ್ರಿಗಳು ಈಡೇರಿಸಿಲ್ಲ. ಜೊತೆಗೆ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ತಲುಪದಂತೆ ಮಾಡುತ್ತಿದ್ದಾರೆ. ಆದ್ದರಿಂದ, ಕರ್ನಾಟಕದಿಂದ ಯೋಜನೆ ಫಲಾನುಭವಿ ರೈತರ ಪಟ್ಟಿಯನ್ನು ನೀಡಿಲ್ಲ.
3:56 PM, 12 Apr

ಕಾಂಗ್ರೆಸ್ ನಮ್ಮ ದೇಶದ ಸುರಕ್ಷತೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಕಾಂಗ್ರೆಸ್‌ನ ಕಮೀಷನ್ ಆಲೋಚನೆಯಿಂದಾಗಿ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಸಿಗಲಿಲ್ಲ. ಇವರು ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಜನರ ಜೊತೆ ನಿಂತಿದ್ದಾರೆ.
3:54 PM, 12 Apr

ಎರಡು ಹೊತ್ತಿನ ಊಟ ಸಿಗದವರು ಸೇನೆಗೆ ಸೇರುತ್ತಾರೆ ಎಂದು ಹೇಳಿಕೆ ನೀಡುವುದು ಯೋಧರಿಗೆ ಮಾಡುವ ಅವಮಾನವಾಗಿದೆ. ಹೀಗೆ ಮತ ಕೇಳುವವರಿಗೆ ನೀವು ಬೆಂಬಲ ನೀಡುತ್ತೀರಾ? ಎಂದು ನರೇಂದ್ರ ಮೋದಿ ಪ್ರಶ್ನೆ ಮಾಡಿದರು.
3:53 PM, 12 Apr

ಪದೇ ಪದೇ ಘೋಷಣೆ ಕೂಗುವ ಮೂಲಕ ನರೇಂದ್ರ ಮೋದಿ ಭಾಷಣಕ್ಕೆ ಅಡ್ಡಿ. ಜನರಲ್ಲಿ ಕೈ ಮುಗಿದು ಶಾಂತಿ ಇಂದ ಇರುವಂತೆ ಮನವಿ ಮಾಡಿದ ಯಡಿಯೂರಪ್ಪ, ಬಿ.ಶ್ರೀರಾಮುಲು
Advertisement
3:52 PM, 12 Apr

ಕರ್ನಾಟಕದ ಮುಖ್ಯಮಂತ್ರಿಗಳು ಎರಡು ಹೊತ್ತಿನ ಊಟ ಸಿಗದವರು ಸೇನೆಗೆ ಸೇರುತ್ತಾರೆ ಎಂದು ಹೇಳಿದ್ದಾರೆ. ಇದು ಯಾವ ಮಾತು ಕುಮಾರಸ್ವಾಮಿಜೀ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದರು.
3:51 PM, 12 Apr

ಭೂ ಹಗರಣ, ಸೇವಾ ವಸ್ತುಗಳ ಖರೀದಿ ಎಲ್ಲದರಲ್ಲೂ ಕಾಂಗ್ರೆಸ್ ಹಗರಣ ಮಾಡಿದೆ. ಈಗ ಮಧ್ಯಪ್ರದೇಶದಲ್ಲಿ ನವಜಾತ ಶಿಶುಗಳ ಆಹಾರದ ಹಣವನ್ನು ಕಿತ್ತುಗೊಂಡು ಅನ್ಯಾಯ ಮಾಡಿ ಹಣವನ್ನು ಚುನಾವಣೆಗಾಗಿ ತರಲಾಗಿದೆ.
3:49 PM, 12 Apr

ದೆಹಲಿಯಲ್ಲಿ ತುಘಲಕ್ ರಸ್ತೆ ಇದೆ. ಅಲ್ಲಿ ದೊಡ್ಡ ನಾಯಕರ ಮನೆ ಇದೆ. ಅಲ್ಲಿ ಏನಾಯಿತು ಎಂದು ನೀವು ಟಿವಿಯಲ್ಲಿ ನೋಡಿರುತ್ತೀರಿ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಕೆಲವೇ ದಿನಗಳು ಕಳೆದಿದೆ. ಅಲ್ಲಿಂದ ಚುನಾವಣೆಗಾಗಿ ಹಣವನ್ನು ತುಘಲಕ್ ರಸ್ತೆಗೆ ಕಳಿಸಲಾಗಿದೆ.
3:48 PM, 12 Apr

ಈಗ ಕಾಂಗ್ರೆಸ್-ಜೆಡಿಎಸ್ ಸೇರಿ ರಾಜ್ಯದಲ್ಲಿ 20 ಪರ್ಸೆಂಟ್ ಸರ್ಕಾರ ಬಂದಿದೆ.
3:47 PM, 12 Apr

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಆದ್ಯತೆ ಪರಿವಾರ ಮೊದಲು, ಅವರ ವಿಷನ್ ಕಮೀಷನ್. ಕರ್ನಾಟಕದಲ್ಲಿ ಮೊದಲು ಮಿಸ್ಟರ್ 10 ಪರ್ಸೆಂಟ್ ಸರ್ಕಾರವಿತ್ತು
Advertisement
3:46 PM, 12 Apr

ರಾಷ್ಟ್ರವಾದ ಮತ್ತು ಕುಟುಂಬ ವಾದದ ಜೊತೆ ಈ ಬಾರಿಯ ಚುನಾವಣೆ ನಡೆಯುತ್ತಿದೆ. ದೇಶದ ಮೊದಲು ನಂತರ ಪರಿವಾರ.
3:45 PM, 12 Apr

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ಸನ್ಯಾನ ದೀಕ್ಷೆ ಸ್ವೀಕರಿಸುವೆ ಎಂದು ದೇವೇಗೌಡ ಹೇಳಿದ್ದರು. ಆದರೆ, ಈಗ ಅವರು ಸನ್ಯಾಸ ಪಡೆದರೆ?. ಮನೆಯಲ್ಲಿರುವ ಎಲ್ಲಾ ಮಕ್ಕಳಿಗೂ ಟಿಕೆಟ್ ಕೊಡುತ್ತಿದ್ದಾರೆ.
3:44 PM, 12 Apr

ನಮ್ಮ ವಿರೋಧಿಗಳು ಮೋದಿ ವಿರುದ್ಧ ಒಂದಾಗಿದ್ದಾರೆ. ದೇವೇಗೌಡರ ಸುಪುತ್ರ ಹೇಳಿದ್ದಾರೆ ಕೇಂದ್ರದಲ್ಲಿ ಮತ್ತೆ ಸರ್ಕಾರ ಬಂದರೆ ರಾಜಕೀಯದಿಂದ ನಿವೃತ್ತಿ ಪಡೆಯುವೆ ಎಂದು ಹೇಳಿದ್ದಾರೆ. ಆದರೆ, ನಿಮಗೆ ಇದರ ಬಗ್ಗೆ ನಂಬಿಕೆ ಇದೆಯೇ?
3:41 PM, 12 Apr

ರಾಮನವಮಿಗೂ ಮೊದಲೇ ಆತನ ಭಂಟನ ಪುಣ್ಯ ನೆಲಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿದೆ.
3:41 PM, 12 Apr

ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಪ್ರಣಾಮಗಳನ್ನು ತಿಳಿಸಿ ನರೇಂದ್ರ ಮೋದಿ ಅವರು ಮಾತು ಆರಂಭಿಸಿದರು. ಭಾರತದಲ್ಲಿ ಎಲ್ಲೆಲ್ಲಿ ನೋಡಿದರೂ ಫಿರ್ ಏಕ್ ಬಾರ್, ಫಿರ್ ಏಕ್ ಬಾರ್ ಎಂಬ ಘೋಷಣೆ ಮೊಳಗುತ್ತಿದೆ.
3:38 PM, 12 Apr

ಭಾಷಾಂತರ ಬೇಕೆ?, ಬೇಡವೆಂದು ಜೋರಾಗಿ ಕೂಗಿದ ಜನರು
3:30 PM, 12 Apr

ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
3:21 PM, 12 Apr

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ 22 ಸ್ಥಾನಗಳನ್ನು ಬಿಜೆಪಿ ಗೆದ್ದರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
3:15 PM, 12 Apr

ಕೊಪ್ಪಳದಲ್ಲಿ ಸಂಗಣ್ಣ ಕರಡಿ, ಬಳ್ಳಾರಿಯಲ್ಲಿ ವೈ.ದೇವೇಂದ್ರಪ್ಪ, ರಾಯಚೂರಿನಲ್ಲಿ ರಾಜಾ ಅಮರೇಶ ನಾಯಕ ಅವರು ಬಿಜೆಪಿ ಅಭ್ಯರ್ಥಿಗಳು
3:14 PM, 12 Apr

ಗಂಗಾವತಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ನರೇಂದ್ರ ಮೋದಿ
3:13 PM, 12 Apr

ಕೊಪ್ಪಳ, ಬಳ್ಳಾರಿ, ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ
3:08 PM, 12 Apr

ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಪುಲ್ವಾಮಾ ದಾಳಿಯ ಬಳಿಕ ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸಸ್ಥಾನಕ್ಕೆ ಮೋದಿ ತಕ್ಕ ಉತ್ತರ ನೀಡಿದರು. ಬಿಜೆಪಿ ಬೆಂಬಲಿಸುವ ಮೂಲಕ ನಾವು ನರೇಂದ್ರ ಮೋದಿ ಅವರ ಕೈ ಬಲಪಡಿಸೋಣ ಎಂದು ಅವರು ಕರೆ ನೀಡಿದರು.
3:05 PM, 12 Apr

ಕೊಪ್ಪಳದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಸಂಗಣ್ಣ ಕರಡಿ, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ರಾಘವೇಂದ್ರ ಹಿಟ್ನಾಳ್ ಕಣದಲ್ಲಿದ್ದಾರೆ.
3:04 PM, 12 Apr

ಧಾರವಾಡ, ಕಲಬುರಗಿ, ಮೈಸೂರು, ಚಿತ್ರದುರ್ಗದ ಬಳಿಕ ಕೊಪ್ಪಳದಲ್ಲಿ ನರೇಂದ್ರ ಮೋದಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
2:56 PM, 12 Apr

ನರೇಂದ್ರ ಮೋದಿ ಅವರಿಗೆ ಹನುಮ ಮಾಲಾಧಾರಿಗಳು 1650 ಗ್ರಾಂ ತೂಕದ ಬೆಳ್ಳಿಯಗದೆಯನ್ನು ಉಡುಗೊರೆಯಾಗಿ ನೀಡಲಿಲಿದ್ದಾರೆ.
2:56 PM, 12 Apr

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮನಿಸಿದ ಮೋದಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಗಂಗಾವತಿಗೆ ಆಗಮಿಸುತ್ತಿದ್ದಾರೆ.
2:55 PM, 12 Apr

ಕೊಪ್ಪಳದ ಗಂಗಾವತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ

English summary
Prime ministers of India Narendra Modi addressed election campaign rally in Gangavathi, Koppal on April 12, 2019. Election will be held in Karnataka on April 18 and 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X