ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಧಿಗಾಗಿ ಆನೆಗುಂದಿಯಲ್ಲಿ ವ್ಯಾಸರಾಜರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳು

|
Google Oneindia Kannada News

Recommended Video

ಆನೆಗುಂದಿಯ ವ್ಯಾಸರಾಜ ಬೃಂದಾವನವನ್ನ ಧ್ವಂಸಗೊಳಿಸಿದ ದುಷ್ಕರ್ಮಿಗಳು | Oneindia Kannada

ಕೊಪ್ಪಳ, ಜುಲೈ 18: ಪುರಾತನ ದೇವಾಲಯ ಅವಶೇಷಗಳನ್ನು ಧ್ವಂಸ ಮಾಡುವ ಪರಿಪಾಠ ಹೆಚ್ಚಾದಂತಿದೆ. ಆನೆಗುಂದಿಯಲ್ಲಿರುವ ವ್ಯಾಸರಾಜರ ಬೃಂದಾವನವನ್ನು ದುಷ್ಕರ್ಮಿಗಳು ಅಗೆದು ಧ್ವಂಸಗೊಳಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ನವ ಬೃಂದಾವನ ವಿವಾದಿತ ಪ್ರದೇಶವೂ ಹೌದು. ಉತ್ತರಾದಿ ಮತ್ತು ರಾಘವೇಂದ್ರ ಮಠದ ನಡುವೆ ಇದರ ಮಾಲೀಕತ್ವಕ್ಕಾಗಿ ವಿವಾದವಿತ್ತು. ಈ ಮಧ್ಯೆ ಬುಧವಾರ ರಾತ್ರಿ ನವ ಬೃಂದಾವನವನ್ನು ದುಷ್ಕರ್ಮಿಗಳು ಅಗೆದು ಧ್ವಂಸಗೊಳಿಸಿದ್ದಾರೆ.

ಕೊನೆಗೂ ಹಂಪಿ ದೇವಾಲಯ ಕಂಬಗಳನ್ನು ಬೀಳಿಸಿದ್ದವರೇ ನಿಲ್ಲಿಸಿದರುಕೊನೆಗೂ ಹಂಪಿ ದೇವಾಲಯ ಕಂಬಗಳನ್ನು ಬೀಳಿಸಿದ್ದವರೇ ನಿಲ್ಲಿಸಿದರು

ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿರುವ ನವಬೃಂದಾವನದಲ್ಲಿ ವ್ಯಾಸರಾಜರ ಬೃಂದಾವನವೂ ಸೇರಿದಂತೆ ಒಟ್ಟು 9 ಬೃಂದಾವನಗಳಿವೆ.

Miscreants demolished the Vyasarajara Brindavan in Anegundi

ನಿಧಿಗಾಗಿ ಈ ಕೃತ್ಯವೆಸಗಿರುವ ಸಾಧ್ಯತೆಗಳಿವೆ, ಗಂಗಾವತಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ ಹಂಪಿಯಲ್ಲೂ ಇಂಥದ್ದೇ ಘಟನೆ ನಡೆದಿದ್ದು, ಕಂಬಗಳನ್ನು ಕಿಡಿಗೇಡಿಗಳು ಬೀಳಿಸಿ ಧ್ವಂಸಗೊಳಿಸಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Miscreants demolished the Vyasarajara Brindavan in Anegundi

ಬಳಿಕ ಪೊಲೀಸರು ದುಷ್ಕರ್ಮಿಗಳನ್ನು ಹಿಡಿದು ಕೋರ್ಟಿಗೆ ಒಪ್ಪಿಸಿದ್ದರು. ಕೋರ್ಟ್ 70 ಸಾವಿರ ರೂ ದಂಡದೊಂದಿಗೆ ಬೀಳಿಸಿದ್ದ ಕಂಬಗಳನ್ನು ಮರು ನಿರ್ಮಾಣ ಮಾಡುವ ಶಿಕ್ಷೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಶ್ರೀ ಪೇಜಾವರ ಸ್ವಾಮೀಜಿ ನವವೃಂದವನದಲಿ ಆಗಮಿಸಲಿದ್ದಾರೆ, ಮತ್ತು ಎಲ್ಲಾ ಮಧ್ವ ಮಠದ ಯತಿಗಳು ಸೇರಲಿದ್ದಾರೆ, ಮೊದಲು ಶ್ರೀ ವ್ಯಾಸರಾಜ ಈ ವೃಂದಾವನ ಪುನಃ ಪ್ರತಿಷ್ಠಾಪನೆ ನಡೆಯಲಿದೆ.

English summary
Some Miscreants demolished the Vyasarajara Brindavana, Nava Brindavana in Anegundi of Koppal on wednesday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X