ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕಿರು ತ್ಯಾಜ್ಯ ಸಂಸ್ಕರಣಾ ಘಟಕ ತೆರೆಯಲು ಚಿಂತನೆ: ಪರಮೇಶ್ವರ್

By Nayana
|
Google Oneindia Kannada News

ಕೊಪ್ಪಳ, ಜೂನ್‌ 27: ಗ್ರಾಮೀಣ ಭಾಗದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ತೆರೆದಂತೆ ಬೆಂಗಳೂರಲ್ಲೂ ಕೂಡ ಸಣ್ಣ ಸಣ್ಣ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಹೇಳಿದರು.

ಮುನಿರಾಬಾದ್‌ನ ಹೊಸಹಳ್ಳಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿಯೂ ಕಸ ಸಂಸ್ಕರಣಾ ಘಟಕ ತೆರೆದಿರುವುದು ಶ್ಲಾಘನೀಯ. ಇಂಥ ಘಟಕಗಳು ಎಲ್ಲ ಜಿಲ್ಲೆಗಳಲ್ಲೂ ತೆರೆದು, ಭವಿಷ್ಯದಲ್ಲಿ ಗ್ರಾಮೀಣಾ ಭಾಗದಲ್ಲಿ ಉಂಟಾಗುವ ಕಸದ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು ಎಂದರು.

ಬಾಕಿ ಕೊಡದ ಬಿಬಿಎಂಪಿ: ಮತ್ತೆ ಮುಷ್ಕರಕ್ಕೆ ಮುಂದಾದ ಗುತ್ತಿಗೆದಾರರು ಬಾಕಿ ಕೊಡದ ಬಿಬಿಎಂಪಿ: ಮತ್ತೆ ಮುಷ್ಕರಕ್ಕೆ ಮುಂದಾದ ಗುತ್ತಿಗೆದಾರರು

Micro units of waste management in Bengaluru soon: DCM

ಈ ಭಾಗದಲ್ಲಿ ಕಸ ಸಂಸ್ಕರಣೆಯ ಸಣ್ಣ ಘಟಕ ತೆರೆದಿದ್ದಾರೆ. ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಕೂಡ ಎಲ್ಲಡೆ ಸಣ್ಣ ಘಟಕ ತೆರೆದರೆ, ಇನ್ನಷ್ಟು ಅನುಕೂಲವಾಗಲಿದೆ. ಬೆಂಗಳೂರು ಒಂದರಲ್ಲೇ ನಾಲ್ಕೂವರೆ ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಇದರ ಸಂಸ್ಕರಣೆಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಹೇಳಿದರು.

English summary
Deputy chief minister Dr.G.Parawhas said that micro and mini solid waste management units will be installed in Bengaluru for quicker and scientific waste management process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X