• search
  • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಷ್ಟಗಿಯ ಟೋಲ್ ಬಳಿ ಹೊತ್ತಿ ಉರಿದ ಸಿಮೆಂಟ್ ಲಾರಿ

By Lekhaka
|

ಕೊಪ್ಪಳ, ನವೆಂಬರ್ 09: ಕುಷ್ಟಗಿ ತಾಲೂಕಿನ ವಣಗೇರಿ ಟೋಲ್ ಗೇಟ್​ನಲ್ಲಿ ಸೋಮವಾರ ಲಾರಿಯೊಂದು ಹೊತ್ತಿ ಉರಿದಿದ್ದು, ಅರೆ ಕ್ಷಣ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೊಪ್ಪಳ ತಾಲೂಕು ಗಿಣಗೇರದಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಸಿಮೆಂಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ವಣಗೇರಿ ಟೋಲ್​ಗೇಟ್​ನಲ್ಲಿ ನಿಲ್ಲುತ್ತಿದ್ದಂತೆ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಧಗಧಗನೆ ಉರಿದು ಅಲ್ಲೇ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ದೃಶ್ಯ ನೋಡುತ್ತಿದ್ದ ವಾಹನ ಸವಾರರು ಮತ್ತು ಸ್ಥಳೀಯರು ಆತಂಕಗೊಂಡಿದ್ದರು.

ಕಂಟೇನರ್ ಲಾರಿಗೆ ಡಿಕ್ಕಿ: ಹಿರಿಯೂರಿನಲ್ಲಿ ಹೊತ್ತು ಉರಿದ ಪೇಂಟ್ ಲಾರಿಕಂಟೇನರ್ ಲಾರಿಗೆ ಡಿಕ್ಕಿ: ಹಿರಿಯೂರಿನಲ್ಲಿ ಹೊತ್ತು ಉರಿದ ಪೇಂಟ್ ಲಾರಿ

ಲಾರಿಗೆ ತಗುಲಿದ ಬೆಂಕಿ ಟೋಲ್ ಗೇಟ್​ನಲ್ಲಿದ್ದ ಹಣ ಸಂಗ್ರಹಿಸುವ ಕ್ಯಾಬಿನ್ ಗೆ ಕೂಡ ಪಸರಿಸಿದೆ. ಕ್ಯಾಬಿನ್ ಹಾಗೂ ಸಿಸಿ ಕ್ಯಾಮರಾವೂ ಸುಟ್ಟು ಕರಕಲಾಗಿದೆ. ಬೆಂಕಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಕುಷ್ಟಗಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಅಷ್ಟರಲ್ಲಿ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿತ್ತು.

ಲಾರಿಉಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಾರಿ ಚಾಲಕ ಮತ್ತು ಕ್ಲೀನರ್ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ಕುಷ್ಟಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
The lorry carrying cement catched fire at vanageri toll gate in kustagi at koppal on Monday. It has created tense situation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X