ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆಗಾಗಿ ರಾಹುಲ್, ಪ್ರಿಯಾಂಕಾ ಗಾಂಧಿ ಹಣೆ ಮೇಲೆ ತಿಲಕ: ಬಿಎಲ್ ಸಂತೋಷ್

|
Google Oneindia Kannada News

Recommended Video

Lok Sabha Elections 2019: ರಾಹುಲ್, ಪ್ರಿಯಾಂಕಾ, ಎಚ್ ಡಿ ಕೆ ಹಾಗು ಎಚ್ ಡಿ ಡಿ ವಿರುದ್ಧ ಬಿ ಎಲ್ ಸಂತೋಷ್ ವಾಗ್ದಾಳಿ

ಕೊಪ್ಪಳ, ಏಪ್ರಿಲ್ 20: ಪ್ರಧಾನಿ ನರೇಂದ್ರ ಮೋದಿ ಅವರು ದೇವರ ಭಕ್ತ. ಆದರೆ, ರಾಹುಲ್ ಗಾಂಧಿ ಚುನಾವಣಾ ಭಕ್ತ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟೀಕಿಸಿದರು.

ಕೊಪ್ಪಳದ ಕಾರಟಗಿಯಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರ ಪರವಾಗಿ ನಡೆದ ಶಕ್ತಿ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೋದಿ ನಿಜವಾದ ದೇವರ ಭಕ್ತ. ರಾಹುಲ್ ಗಾಂಧಿ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ಜೀನ್ಸ್, ಡಿಎನ್‌ಎ ನೋಡಿ ಟಿಕೆಟ್ ಕೊಡಲು ಆಗುತ್ತಾ?: ಬಿ.ಎಲ್. ಸಂತೋಷ್ಜೀನ್ಸ್, ಡಿಎನ್‌ಎ ನೋಡಿ ಟಿಕೆಟ್ ಕೊಡಲು ಆಗುತ್ತಾ?: ಬಿ.ಎಲ್. ಸಂತೋಷ್

ರಾಹುಲ್ ಗಾಂಧಿ ಪಂಚೆ ಉಟ್ಟುಕೊಂಡು ದೇವಸ್ಥಾನಕ್ಕೆ ಹೋದರೆ ಜೋಕರ್ ಹೋದಂತೆ ಕಾಣಿಸುತ್ತದೆ. ಗಂಡ ಇದ್ದರೂ ಪ್ರಿಯಾಂಕಾ ಗಾಂಧಿ ಅವರ ಹಣೆಯ ಮೇಲೆ ಕುಂಕುಮ ಇರುತ್ತಿರಲಿಲ್ಲ. ಇದೀಗ ಚುನಾವಣೆಗಾಗಿ ಹಣೆಯ ಮೇಲೆ ತಿಲಕ ಕಾಣಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಕಣ್ಣೀರಿಂದ ಅಭಿವೃದ್ಧಿ ಆಗೊಲ್ಲ

ಕಣ್ಣೀರಿಂದ ಅಭಿವೃದ್ಧಿ ಆಗೊಲ್ಲ

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೇರಿದಂತೆ ಜೆಡಿಎಸ್ ಕುಟುಂಬದವರೆಲ್ಲರೂ ಹೋದಲ್ಲಿ ಬಂದಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಅಪ್ಪ ಮಕ್ಕಳು ಒಂದಾಗಿ ಕಣ್ಣೀರು ಸುರಿಸುವುದರಿಂದ ರಾಜ್ಯ ಅಭಿವೃದ್ಧಿ ಆಗುವುದಿಲ್ಲ ಎಂದು ಲೇವಡಿ ಮಾಡಿದರು.

ಕೊಪ್ಪಳ ಚುನಾವಣಾ ಕಣ : ಸಂಗಣ್ಣ ಕರಡಿಗೆ ಸಿಗುವುದೇ ಗೆಲವು? ಕೊಪ್ಪಳ ಚುನಾವಣಾ ಕಣ : ಸಂಗಣ್ಣ ಕರಡಿಗೆ ಸಿಗುವುದೇ ಗೆಲವು?

ಒಂದು ಮತಕ್ಕೆ ಎರಡು ಸರ್ಕಾರ

ಒಂದು ಮತಕ್ಕೆ ಎರಡು ಸರ್ಕಾರ

ನೀವು ಒಂದು ಮತ ಹಾಕಿದರೆ ಎರಡು ಸರ್ಕಾರ ಬರುತ್ತದೆ. ಬಿಜೆಪಿಗೆ ಒಂದು ಮತ ಹಾಕಿದರೆ ನೇರವಾಗಿ ಮೋದಿ ಸರ್ಕಾರ ಬರುತ್ತದೆ. ಇನ್ನೊಂದು ವಿಧಾನಸಭೆಯಲ್ಲಿ ನಮ್ಮ ಸರ್ಕಾರಕ್ಕೆ ಸಿಗುತ್ತದೆ ಎಂದು ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ ಬಂದರೆ ರಾಜ್ಯ ಸಮ್ಮಿಶ್ರ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ದೇವೇಗೌಡರ ಮಾತು ನಂಬುತ್ತೀರಾ? ಕೊಪ್ಪಳದಲ್ಲಿ ಮೋದಿ ಪ್ರಶ್ನೆ ದೇವೇಗೌಡರ ಮಾತು ನಂಬುತ್ತೀರಾ? ಕೊಪ್ಪಳದಲ್ಲಿ ಮೋದಿ ಪ್ರಶ್ನೆ

ರಾಜ್ಯದಲ್ಲಿ ಹೊಸ ಯೋಜನೆ

ರಾಜ್ಯದಲ್ಲಿ ಹೊಸ ಯೋಜನೆ

ನೀವು ಸಂಗಣ್ಣ ಕರಡಿ ಅವರನ್ನು ಎರಡು ಲಕ್ಷ ಮತಗಳ ಅಂತರದಿಂದ ಸೋಲಿಸಬೇಕು. ಕರ್ನಾಟಕದಲ್ಲಿ ಒಂದು ಮತಕ್ಕೆ ಎರಡು ಸರ್ಕಾರ ಎಂಬ ಸ್ಕೀಮ್ ಜಾರಿಗೆ ತರುತ್ತಿದ್ದೇವೆ. ಸಾಲಮನ್ನಾ ಹೆಸರಿನಲ್ಲಿ ನೋಟಿಸ್ ಕೊಡುತ್ತಿರುವ ಸರ್ಕಾರವನ್ನು ಬೀಳಿಸಬೇಕು ಎಂದು ಅವರು ಹೇಳಿದರು.

ಪ್ರತಿ ಮತಕ್ಕೆ ಎರಡು ಸಾವಿರ

ಪ್ರತಿ ಮತಕ್ಕೆ ಎರಡು ಸಾವಿರ

ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಪರ ಪ್ರತಿ ಮತಕ್ಕೆ ಎರಡು ಸಾವಿರ ರೂಪಾಯಿ ನೀಡಿ ಮತಗಳನ್ನು ಖರೀದಿ ಮಾಡುವ ಕುತಂತ್ರ ನಡೆಸಲಾಗಿದೆ. ಆದರೆ, ಇದು ಯಶಸ್ವಿ ಆಗುವುದಿಲ್ಲ. ದೇಶದ ಜನರು ಮೋದಿ ಅವರನ್ನೇ ಮತ್ತೆ ಪ್ರಧಾನಿಯನ್ನಾಗಿ ಒಪ್ಪಿಕೊಳ್ಳುತ್ತಾರೆಯೇ ವಿನಾ ರಾಹುಲ್ ಗಾಂಧಿ ಅವರನ್ನಲ್ಲ. ಮೈತ್ರಿ ಸರ್ಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಬೇಕಿದೆ ಎಂದರು.

English summary
Lok Sabha elections 2019: BJP leader BL Santhosh In Koppal criticised Congress President Rahul Gandhi and his sister Priyanka Gandhi as putting Tilak on forehead for elections purpose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X