ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಚುನಾವಣೆ ಬಳಿಕ ಕುಮಾರಸ್ವಾಮಿ ನೆಗೆದು ಬೀಳ್ತಾರೆ' ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

|
Google Oneindia Kannada News

Recommended Video

ಚುನಾವಣೆ ಆದ್ಮೇಲೆ ಕುಮಾರಸ್ವಾಮಿ ನೆಗೆದು ಬೀಳೋದು ಪಕ್ಕಾ ಅಂತೆ..!? | Oneindia Kannada

ಕೊಪ್ಪಳ, ಏ.2: ಚುನಾವಣೆ ಹೊಸ್ತಿಲಲ್ಲಿರುವಾಗ ಪ್ರತಿಪಕ್ಷ ವಿರೋಧ ಪಕ್ಷಗಳು ಆರೋಪ, ಪ್ರತ್ಯಾರೋಪಗಳನ್ನು ಮಾಡುವುದು ಸಾಮಾನ್ಯ ಆದರೆ ಇದೀಗ ಅದು ತಾರರಕ್ಕೇರಿದೆ. 'ಚುನಾವಣೆ ಮುಗಿದ ಬಳಿಕ ಸಿಎಂ ಕುಮಾರಸ್ವಾಮಿ ನೆಗೆದು ಬೀಳ್ತಾರೆ' ಎಂದು ಬಿಜೆಪಿ ಮುಖಂಡ ಕೆಎಸ್‌ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜೆಡಿಎಸ್‌ ಒಂದೂ ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ, ಎಚ್‌ಡಿ ದೇವೇಗೌಡ ಅವರ ಕುಟುಂಬದ ನಾಲ್ವರೂ ಕೂಡ ಕಣ್ಣೀರು ಹಾಕುತ್ತಾರೆ. ಈ ನಾಟಕ ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದರು. ಸರ್ಕಾರ ಪತನಗೊಳ್ಳುತ್ತದೆ ಎನ್ನುವ ಬದಲು ಕುಮಾರಸ್ವಾಮಿಯವರೇ ಸಾಯುತ್ತಾರೆ ಎಂದು ಹೇಳಿದ್ದಾರೆ.

ks eshwarappa rakes up controversy

ಇಡೀ ದೇಶಕ್ಕೆ ಮೋದಿ ಪ್ರಧಾನಿಯಾಗ್ತಾರೆ, ಸಗಣ್ಣ ಗೆದ್ದೇ ಗೆಲ್ತಾರೆ, 20ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆದ್ದೇ ಗೆಲ್ಲುತ್ತೆ, ಚುನಾವಣೆ ಮುಗಿಯುತ್ತಿದ್ದಂತೆಯೇ ಕುಮಾರಸ್ವಾಮಿ ನೆಗೆದು ಬೀಳ್ತಾರೆ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಜೆಡಿಎಸ್ ಯಾವೊಬ್ಬ ಅಲ್ಪಸಂಖ್ಯಾತ ಮುಖಂಡನನ್ನೂ ಬೆಳೆಸಿಲ್ಲ ಎಂದು ಗುಡುಗಿದ್ದಾರೆ.

ಕಾಂಗ್ರೆಸ್‌ಗೆ ಕೇವಲ ಮತ ಬೇಕು, ನಿಮಗೆ ಟಿಕೆಟ್ ಮಾತ್ರ ನೀಡುವುದಿಲ್ಲ, ಮುಸಲ್ಮಾನರಿಗೆ ಟಿಕೆಟ್ ನೀಡುವುದಿಲ್ಲ ಯಾಕೆಂದರೆ ಮುಸಲ್ಮಾನರನ್ನು ನಂಬುವುದಿಲ್ಲ, ನಮ್ಮನ್ನು ನಂಬಿ ನಾವು ನಿಮಗೆ ಟಿಕೆಟ್ ನೀಡುತ್ತೇವೆ ಎಂದರು.

English summary
BJP leader ks Eshwarappa rakes up controversy, says Chief minsiter HD Kumaraswamy expires after polls instead of saying government will expire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X