ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನವರಿ 22ರಿಂದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ

|
Google Oneindia Kannada News

ಕೊಪ್ಪಳ, ಜನವರಿ 17 : ಕೊಪ್ಪಳ ಇತಿಹಾಸ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಿದ್ಧವಾಗುತ್ತಿದೆ. ಜನವರಿ 22 ರಿಂದ 24ರ ತನಕ ಈ ಬಾರಿ ಗವಿಸಿದ್ದೇಶ್ವರ ಜಾತ್ರೆ ನಡೆಯಲಿದೆ.

ಜಿಲ್ಲೆ, ದೇಶ, ಜಾತಿ ಎಲ್ಲ ಗಡಿಗಳನ್ನು ಮೀರಿ ಪ್ರಸಿದ್ಧಿ ಪಡೆದಿದೆ ಗವಿಸಿದ್ದೇಶ್ವರ ಜಾತ್ರೆ. ಶ್ರೀ ಗವಿಸಿದ್ದೇಶ್ವರ ಸಂಸ್ಥಾನ ಗವಿಮಠ ಕೊಪ್ಪಳ ಇವರ ಆಶ್ರಯದಲ್ಲಿ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರತಿ ವರ್ಷ ನಡೆಯುತ್ತದೆ.

ಜೇನಿನ ಝೇಂಕಾರದಲ್ಲಿ ಲಾಭ ಕಂಡ ಕೊಪ್ಪಳ ರೈತನ ಕಥೆ!ಜೇನಿನ ಝೇಂಕಾರದಲ್ಲಿ ಲಾಭ ಕಂಡ ಕೊಪ್ಪಳ ರೈತನ ಕಥೆ!

ಗವಿಸಿದ್ದೇಶ್ವರ ಜಾತ್ರೆಯನ್ನು ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಬಣ್ಣಿಸಲಾಗುತ್ತದೆ. ಕೊಪ್ಪಳದ ಪೂರ್ವಕ್ಕಿರುವ ಬೆಟ್ಟದ ಮೇಲೆ ಶ್ರೀ ಗವಿಸಿದ್ದೇಶ್ವರ ಮಠವಿದೆ. ಸಾವಿರಾರು ವರ್ಷಗಳ ಇತಿಹಾ ಮಠಕ್ಕೆ ಇದ್ದು, ಜಾತ್ರೆಯೂ ಪ್ರಸಿದ್ಧಿ ಪಡೆದಿದೆ.

ಕೊಪ್ಪಳದ ಅಂಜನಾದ್ರಿ ಬೆಟ್ಟ ಮುಜರಾಯಿ ಇಲಾಖೆ ವಶಕ್ಕೆ?ಕೊಪ್ಪಳದ ಅಂಜನಾದ್ರಿ ಬೆಟ್ಟ ಮುಜರಾಯಿ ಇಲಾಖೆ ವಶಕ್ಕೆ?

Koppal Sri Gavisiddeshwara Jatra from January 22

ಜನವರಿ 22, 23 ಮತ್ತು 24ರಂದು ಈ ಬಾರಿಯ ಗವಿಸಿದ್ದೇಶ್ವರ ಜಾತ್ರೆ ನಡೆಯಲಿದೆ. ಅನ್ನದ ಜಾತ್ರೆ ಎಂದೂ ಈ ಜಾತ್ರೆಯನ್ನು ಕರೆಯಲಾಗುತ್ತದೆ. ಪ್ರತಿ ದಿನ ಲಕ್ಷಾಂತರ ಜನರು ಜಾತ್ರೆಗೆ ಆಗಮಿಸಿದರೂ ಅವರಿಗೆ ಅನ್ನ ದಾಸೋಹ ನಡೆಸಲಾಗುತ್ತದೆ.

ಪುಷ್ಪ ಕೃಷಿಯಿಂದ ಲಾಭಗಳಿಸಿದ ಕೊಪ್ಪಳ ರೈತಪುಷ್ಪ ಕೃಷಿಯಿಂದ ಲಾಭಗಳಿಸಿದ ಕೊಪ್ಪಳ ರೈತ

ಗವಿಸಿದ್ದೇಶ್ವರ ಜಾತ್ರೆಗೆ ಅನ್ನ ದಾಸೋಹ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ದೊಡ್ಡ-ದೊಡ್ಡ ಪಾತ್ರೆಗಳನ್ನು ತರಲಾಗಿದ್ದು, ಕಟ್ಟಿಗೆ ಸಂಗ್ರಹ ಕಾರ್ಯವೂ ನಡೆಯುತ್ತಿದೆ. ಕೊಪ್ಪಳದ ಮಹಾವೀರ ಸಾಮಿಲ್ ಕಾರ್ಮಿಕರು, ಕಟ್ಟಿಗೆಯನ್ನು ದೇಣಿಗೆ ರೂಪದಲ್ಲಿ ನೀಡಿದರು.

English summary
The three-day Sri Gavisiddeshwara Jatra in Koppal from January 22 to 24, 2019. Thousands of devotees will witness for the jatra and it is biggest fairs in the north Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X