ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗವಿಸಿದ್ಧೇಶ್ವರನಿಗೆ ನಮೋನ್ನಮಃ : ಇದು ಯಾತ್ರೆ ಅಲ್ಲ ಜಾತ್ರೆ

By Mahesh
|
Google Oneindia Kannada News

ಕೊಪ್ಪಳ, ಜನವರಿ 01: ಪುಷ್ಯ ಹುಣ್ಣಿಮೆದಿನದಂದು (ಜ.2ರಿಂದ 4ರವರೆಗೆ) ಆರಂಭವಾಗಿರುವ ಇತಿಹಾಸ ಪ್ರಸಿದ್ಧ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ದೇಶ ಗಡಿ ದಾಟಿ ಎಲ್ಲರನ್ನು ಆಕರ್ಷಿಸಿರುವುದಷ್ಟೇ ಅಲ್ಲದೆ, ಇಂಟರ್ನೆಟ್ ನಲ್ಲೂ ಸದ್ದು ಮಾಡುತ್ತಿದೆ.

ತಾಳೆ ಬೆಳೆದು ಯಶಸ್ಸು ಕಂಡ ಕೊಪ್ಪಳದ ರೈತತಾಳೆ ಬೆಳೆದು ಯಶಸ್ಸು ಕಂಡ ಕೊಪ್ಪಳದ ರೈತ

ಪ್ರತಿ ವರ್ಷದಂತೆ ಈ ವರ್ಷ ಕೂಡಾ ಗವಿಸಿದ್ಧೇಶ್ವರ ಜಾತ್ರಾ ಮಹಾರಥೋತ್ಸವ ಹಾಗೂ ಅನುಭಾವಿಗಳ ಅಮೃತ ಚಿಂತನ ಗೋಷ್ಠಿ ಸಮಾರಂಭ ಆನ್ ಲೈನ್ ಮೂಲಕ ಲಕ್ಷಾಂತರ ಭಕ್ತಾದಿಗಳನ್ನು ತಲುಪಲಿದೆ.

ಕೊಪ್ಪಳದ ಇಂಜಿನಿಯರಿಂಗ್ ಕಾಲೇಜು ಕನಸು ನನಸುಕೊಪ್ಪಳದ ಇಂಜಿನಿಯರಿಂಗ್ ಕಾಲೇಜು ಕನಸು ನನಸು

ಗವಿಮಠ ಮಹಾಸಂಸ್ಥಾನ ತನ್ನ ಅಧಿಕೃತ ವೆಬ್ ತಾಣ ಹಾಗೂ ಫೇಸ್ ಬುಕ್ ಪುಟಗಳ ಮೂಲಕ ಶ್ರೀಮಠದ ಜಾತ್ರಾ ಕಾರ್ಯಕ್ರಮಗಳನ್ನು ಆನ್ ಲೈನ್ ಮೂಲಕ ನೇರ ಪ್ರಸಾರ ವೀಕ್ಷಣೆಗೆ ಒದಗಿಸುತ್ತಿದೆ.

ದೇಶದ ಗಮನ ಸೆಳೆದ ಕೊಪ್ಪಳದ ಕಡಿಮೆ ವೆಚ್ಚದ ಮೂತ್ರಾಲಯ ಮಾದರಿದೇಶದ ಗಮನ ಸೆಳೆದ ಕೊಪ್ಪಳದ ಕಡಿಮೆ ವೆಚ್ಚದ ಮೂತ್ರಾಲಯ ಮಾದರಿ

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ದಕ್ಷಿಣ ಭಾರತ ಕುಂಭಮೇಳ ಎಂದೆ ಪ್ರಸಿದ್ಧಿ ಪಡೆದಿದೆ. ಈ ಜಾತ್ರಾ ಮಹೋತ್ಸವದಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದಾರೆ. 15 ದಿನಗಳ ಕಾಲ ಸ್ವಯಂಪ್ರೇರಿತರಾಗಿ ಭಕ್ತರು ದಾಸೋಹದಲ್ಲಿ ಪಾಲ್ಗೊಳ್ಳುತ್ತಾರೆ.

ಗವಿಮಠದ ಪರಂಪರೆಯ ಜಗದ್ಗುರು

ಗವಿಮಠದ ಪರಂಪರೆಯ ಜಗದ್ಗುರು

ಗವಿಮಠದ ಪರಂಪರೆಯಲ್ಲಿ ಜಗದ್ಗುರು ಗವಿಸಿದ್ಧೇಶ್ವರರು ಗುರು ಪರಂಪರೆ ಯಲ್ಲಿ ಹನ್ನೊಂದನೆಯವರು, ಪರಮ ಪೂಜ್ಯ ಸ್ವಾಮೀಜಿಗಳು 1816ರ ಶ್ರೀಮುಖ ಸಂವತ್ಸರದ ಶುದ್ಧ ಬಿದಿಗೆಯಂದು ಪ್ರಾಣವನ್ನು ಬ್ರಹ್ಮಸ್ಥಾನಕ್ಕೇರಿಸಿ ಸಜೀವ ಸಮಾಧಿಯಾದರು.

ವಿದಿತ ಮಹಾ ಕೋಪಣ ನಗರ

ವಿದಿತ ಮಹಾ ಕೋಪಣ ನಗರ

ಶುದ್ಧ ಬಿದಿಗೆಯಿಂದ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಅಮೋಘವರ್ಷ ನೃಪತುಂಗನು ಕೊಪ್ಪಳ ನಗರವನ್ನು 'ವಿದಿತ ಮಹಾ ಕೋಪಣ ನಗರ' ಎಂದು ಬಣ್ಣಿಸಿದ್ದಾನೆ. ಕೊಪ್ಪಳ ಜಿಲ್ಲೆಯಲ್ಲಿ ಕನಕಗಿರಿ, ಹುಲೆಗಮ್ಮ ದೇಗುಲ, ಆನೆಗುಂದಿ ಸಂಸ್ಥಾನಗಳು ಪ್ರಮುಖ ಧಾರ್ಮಿಕ ಸ್ಥಳಗಳಾಗಿದೆ.

ಭಕ್ತರಿಗೆ ಪ್ರಸಾದ ರೂಪ

ಭಕ್ತರಿಗೆ ಪ್ರಸಾದ ರೂಪ

15 ದಿನಗಳ ಕಾಲ ಸ್ವಯಂಪ್ರೇರಿತರಾಗಿ ಭಕ್ತರು ದಾಸೋಹದಲ್ಲಿ ಪಾಲ್ಗೊಳ್ಳುತ್ತಾರೆ. 3 ಲಕ್ಷ ಕ್ವಿಂಟಾಲ್ ರೊಟ್ಟಿ ಹಾಗೂ ವಿವಿಧ ಖಾದ್ಯಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.ಈ ಜಾತ್ರಾ ಮಹೋತ್ಸವದಲ್ಲಿ ಇಲ್ಲಿ ತನಕ ಸರಾಸರಿ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದಾರೆ. ಪ್ರತಿವರ್ಷ ಈ ಸಂಖ್ಯೆ ಹೆಚ್ಚಾಗುತ್ತಲೆ ಇರುತ್ತದೆ.

ಶ್ರೀ ಗವಿಮಠ ಪ್ರಸಿದ್ಧಿ

ಶ್ರೀ ಗವಿಮಠ ಪ್ರಸಿದ್ಧಿ

ಶ್ರೀಮಠದ ಪರಂಪರೆಯಲ್ಲಿ ಬಂದ ಶ್ರೀ ಗವಿಸಿದ್ಧೇಶ್ವರರು, ಸಿದ್ಧಪುರುಷರು ಭಕ್ತರ ಪಾಲಿನ ಕಾಮಧೇನುವಾಗಿದ್ದರು. ಇವರ ಕರ್ತೃತ್ವ ಶಕ್ತಿಯಿಂದ ಶ್ರೀ ಗವಿಮಠ ಪ್ರಸಿದ್ಧಿಯನ್ನು ಪಡೆಯಿತು.

ಪ್ರತಿ ವರ್ಷದಂತೆ ಈ ವರ್ಷ ಕೂಡಾ ಗವಿಸಿದ್ಧೇಶ್ವರ ಜಾತ್ರಾ ಮಹಾರಥೋತ್ಸವ ಹಾಗೂ ಅನುಭಾವಿಗಳ ಅಮೃತ ಚಿಂತನ ಗೋಷ್ಠಿ ಸಮಾರಂಭ ಆನ್ ಲೈನ್ ಮೂಲಕ ಲಕ್ಷಾಂತರ ಭಕ್ತಾದಿಗಳನ್ನು ತಲುಪಲಿದೆ

English summary
Koppal : Gavimath Samsthan of Koppal district is web telecasting Gavi Siddheshwar jatra Mahothsava Live on Jan.03, 2017, Jatra will be attended by more than 5 lakhs devotees from across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X