ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳದಲ್ಲಿ ಭಾರಿ ಗಾತ್ರದ ಮೊಸಳೆಯ ಜೀವ ತೆಗೆದ ಕುರಿ!

|
Google Oneindia Kannada News

ಗಂಗಾವತಿ, ಜೂನ್ 08: ಕೊಪ್ಪಳದಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಸತ್ತಿದೆ. ಮೊಸಳೆಯ ಸಾವಿಗೆ ಕಾರಣವಾಗಿದ್ದು ಒಂದು ಸಾಮಾನ್ಯ ಕುರಿ!

ಹೌದು, ತುಂಗ ಭದ್ರಾ ನಡಿದ ದಂಡೆಯಲ್ಲಿ ಹುಲ್ಲು ಮೇಯುತ್ತಿದ್ದ ಕುರಿಯನ್ನು ಮೊಸಳೆ ತಿಂದಿದೆ. ಆದರೆ ಅದನ್ನು ಜೀರ್ಣ ಮಾಡಿಕೊಳ್ಳಲಾಗದೆ ಮೊಸಳೆ ಪ್ರಾಣ ಬಿಟ್ಟಿದೆ.

ದಾಳಿಂಬೆ ಬೆಳೆದು ಲಾಭದ ಸಿಹಿ ಸವಿದ ಕೊಪ್ಪಳದ ರೈತದಾಳಿಂಬೆ ಬೆಳೆದು ಲಾಭದ ಸಿಹಿ ಸವಿದ ಕೊಪ್ಪಳದ ರೈತ

ಕೊಪ್ಪಳ ಜಿಲ್ಲೆ ಗಂಗಾವತಿ ಬಳಿಯ ಆನೆಗುಂದಿ ಬಳಿ ತುಂಗಾಭದ್ರಾ ನದಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಮೀನುಗಾರರು ಮೀನಿಗಾಗಿ ಬಲೆ ಹಾಕಿದಾಗ ಅದರಲ್ಲಿ ಮೊಸಳೆ ಸಿಕ್ಕಿಕೊಂಡಿದೆ. ಕೂಡಲೇ ಮೀನುಗಾರರು ಸ್ಥಳೀಯ ಆಡಳಿತಕ್ಕೆ ವಿಷಯ ಮುಟ್ಟಿಸಿದ್ದಾರೆ.

ಪ್ರವಾಸಿಗರು ವನ್ಯಜೀವಿಗಳಿಗೆ ತೊಂದರೆ ಕೊಟ್ರೆ ಬೀಳುತ್ತೆ ದಂಡಪ್ರವಾಸಿಗರು ವನ್ಯಜೀವಿಗಳಿಗೆ ತೊಂದರೆ ಕೊಟ್ರೆ ಬೀಳುತ್ತೆ ದಂಡ

300 ಕೆ.ಜಿ.ತೂಕವಿದ್ದ ಮೊಸಳೆ

300 ಕೆ.ಜಿ.ತೂಕವಿದ್ದ ಮೊಸಳೆ

ನಂತರ ಜೆಸಿಬಿ ಸಯಾಹದಿಂದ ಭಾರಿ ಗಾತ್ರದ ಮೊಸಳೆಯನ್ನು ದಡಕ್ಕೆ ಎಳೆಯಾಗಿದೆ. ಮೊಸಳೆಯು ಏಳು ಅಡಿ ಉದ್ದವಿದ್ದು, ಸುಮಾರು 300 ಕೆ.ಜಿ ತೂಕವಿದೆ.

ಮೊಸಳೆಯ ಪರೀಕ್ಷೆ ಮಾಡಿದ ವನ್ಯಜೀವಿ ಅಧಿಕಾರಿಗಳು

ಮೊಸಳೆಯ ಪರೀಕ್ಷೆ ಮಾಡಿದ ವನ್ಯಜೀವಿ ಅಧಿಕಾರಿಗಳು

ಸತ್ತ ಮೊಸಳೆಯ ಪರೀಕ್ಷೆ ನಡೆಸಿದ ವನ್ಯಜೀವಿ ಅಧಿಕಾರಿಗಳು ಮೊಸಳೆಗೆ ವಯಸ್ಸಾಗಿದ್ದು, ಕುರಿಯನ್ನು ನುಂಗಿದ ಕಾರಣ ಅದು ಜೀರ್ಣವಾಗದೆ ಮೊಸಳೆ ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ.

ಮೊಸಳೆಯ ಆಯಸ್ಸೆಷ್ಟು?

ಮೊಸಳೆಯ ಆಯಸ್ಸೆಷ್ಟು?

ಮೊಸಳೆಗೆ ಜೀರ್ಣ ಶಕ್ತಿ ಉತ್ತಮವಾಗಿಯೇ ಇರುತ್ತದೆ. ಆದರೆ ಈ ಮೊಸಳೆಗೆ ವಯಸ್ಸಾಗಿತ್ತು ಎನ್ನಲಾಗಿದೆ. ಮೊಸಳೆಗಳಿಗೆ ಬಹುತೇಕ ಮನುಷ್ಯನಿಗಿರುವಷ್ಟೆ ಆಯುಷ್ಯ ಇರುತ್ತದೆ. ಮೊಸಳೆಗಳ ನಿಧನ ವಯಸ್ಸು ಸರಾಸರಿ 70, ಕೆಲವು ಮೊಸಳೆಗಳು 100 ವರ್ಷ ಬದುಕಿದ ಉದಾಹರಣೆಗಳೂ ಇವೆ.

ಮನುಷ್ಯರನ್ನು ಗಾಯಗೊಳಿಸಿದ ಉದಾಹರಣೆಯೂ ಇದೆ

ಮನುಷ್ಯರನ್ನು ಗಾಯಗೊಳಿಸಿದ ಉದಾಹರಣೆಯೂ ಇದೆ

ತುಂಗಭದ್ರಾ ನದಿಯಲ್ಲಿ ಮೊಸಳೆಗಳು ಆಗಾಗ್ಗೆ ಕಂಡು ಬರುತ್ತಿರುತ್ತವೆ. ಬೇಸಗೆಯಲ್ಲಿ ನೀರು ಕಡಿಮೆಯಾದಾಗ ಇವುಗಳ ಹಾವಳಿ ಹೆಚ್ಚು. ಜನರನ್ನು ಗಾಯಗೊಳಿಸಿದ ಉದಾಹರಣೆಗಳೂ ಇವೆ.

English summary
In Koppal Tunga Bharda river a crocodile eats sheep and died due to indigestion. Crocodile has been draged to bank of the river by officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X