• search
  • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳ: ತಂದೆ ಸಾಲ ತೀರುತ್ತೆಂದು ಬಾಲಕನಿಂದ ಬೆತ್ತಲೆ ಪೂಜೆ ಮಾಡಿಸಿ ವಿಡಿಯೋ ವೈರಲ್!

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ಅಕ್ಟೋಬರ್ 3: ಬೆತ್ತಲೆಯಾಗಿ ಪೂಜೆ ಮಾಡಿದರೆ ನಿನ್ನ ತಂದೆಯ ಸಾಲ ತೀರುತ್ತದೆ ಎಂದು ಹೇಳಿ ಬಾಲಕನೊಬ್ಬನನ್ನು ಗ್ರಾಮಸ್ಥರು ಬೆತ್ತಲೆ ಪೂಜೆ ಮಾಡಿಸಿದ ಅಮಾನವೀಯ ಘಟನೆ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ನಡೆದಿದೆ. ಹಾಸಗಲ್ ಗ್ರಾಮದ 16 ವರ್ಷದ ಬಾಲಕನನ್ನು ಪುಸಲಾಯಿಸಿ ಮೈಮೇಲೆ ಬಟ್ಟೆಯಿಲ್ಲದೆ ಪೂಜೆ ಮಾಡಿಸಿ ಆ ಬಾಲಕನ ಬೆತ್ತಲೆ ಪೂಜೆ ವಿಡಿಯೋ ವೈರಲ್​ ಮಾಡು ವಿಕೃತಿ ಮೆರಯಲಾಗಿದೆ.

ನಿಮ್ಮ ತಂದೆಯ ಸಾಲ ತೀರಬೇಕೆಂದರೆ ನೀನು ವಿವಸ್ತ್ರನಾಗಿ ಪೂಜೆ ಮಾಡು, ಹೀಗೆ ಮಾಡಿದರೆ ನಿಮಗೆ ಕೈ ತುಂಬಾ ಹಣ ಸಿಗುತ್ತದೆ, ಆ ಹಣದಿಂದ ನಿಮ್ಮ ಸಾಲಗಳನ್ನು ತೀರಿಸಬಹುದು ಎಂದು ಗ್ರಾಮದ ಕೆಲವರು ಬಾಲಕನ ತಲೆ ಕೆಡಿಸಿದ್ದಾರೆ. ಇನ್ನು ಬಡತನದ ಬೇಗೆಯಿಂದ ಬಳಲುತ್ತಿದ್ದ ಬಾಲಕನನ್ನು ಪುಸಲಾಯಿಸಿ ಪರಿಚಯಸ್ಥರೇ ಪೂಜೆಯ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

'23 ಕೋಟಿ ಜನರು ದಿನಕ್ಕೆ 375ಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೆ' - RSS ಹೊಸಬಾಳೆ ಕಳವಳ'23 ಕೋಟಿ ಜನರು ದಿನಕ್ಕೆ 375ಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೆ' - RSS ಹೊಸಬಾಳೆ ಕಳವಳ

ಹುಬ್ಬಳ್ಳಿಯಲ್ಲಿ ರೂಮ್‌ವೊಂದರಲ್ಲಿ ಬಾಲಕನ ಬೆತ್ತಲೆ ಪೂಜೆಯ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ನೊಂದ ಬಾಲಕ ಮತ್ತು ಕುಟುಂಬಸ್ಥರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಕೃತ ಮೆರೆದ ಶರಣಪ್ಪ, ವಿರುಪನಗೌಡ, ಶರಣಪ್ಪ ತಳವರ್ ವಿರುದ್ಧ ದೂರು ದಾಖಲಸಿದ್ದಾರೆ.

ಬಾಲಕನ ತಂದೆ ಕೊಪ್ಪಳದಲ್ಲಿ ಮನೆ ಕಟ್ಟಿಸಿದ್ದರು. ಮನೆ ಕಟ್ಟಿಸಲು ಸಾಲ ಮಾಡಿದ್ದರು. ಆ ಸಾಲವನ್ನು ತೀರಿಸುವುದಕ್ಕಾಗು ಬಾಲಕ ಹುಬ್ಬಳ್ಳಿಗೆ ಬಂದು ಕೆಲಸ ಮಾಡುತ್ತಿದ್ದ. ದಿನಗೂಲಿ ನೌಕರನಾಗಿದ್ದ ಆತ ದುಡಿದು ಮನೆಯ ಸಾಲ ತೀರಿಸಲು ಶ್ರಮಿಸುತ್ತಿದ್ದ. ಆ ಬಾಲಕ ತನ್ನ ಕಷ್ಟವನ್ನು ಪರಿಚಯಸ್ಥರ ಬಳಿ ಹೇಳಿಕೊಂಡಿದ್ದಾನೆ. ಆದರೆ ಪರಿಹಾರಿ ಒದಗಿಸಿಕೊಡುವ ನೆಪದಲ್ಲಿ ಕಿರಾತರು ಬಾಲಕರ ಮರ್ಯಾದೆ ತೆಗೆಯುವ ಕೆಲಸ ಮಾಡಿದ್ದಾರೆ.

ದೂರಿನಲ್ಲಿರುವುದೇನು?

ಜೂನ್‌ 6ರಂದು ಮೂವರು ನನ್ನ ಮನೆಗೆ ಬಂದು ನಿನ್ನ ಮಗನನ್ನು ಕೆಲಸಕ್ಕೆ ಕಳುಹಿಸು. ಹುಬ್ಬಳ್ಳಿ ಹತ್ತಿರದ ಗ್ರಾಮವೊಂದರಲ್ಲಿ ಜಲಜೀವನ್‌ ಮಿಷನ್‌ ಯೋಜನೆ ಕಾಮಗಾರಿಯ ಗುತ್ತಿಗೆ ಪಡೆದಿದ್ದೇವೆ. ಅಲ್ಲಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಒತ್ತಾಯ ಮಾಡಿದರು. ಆದ್ದರಿಂದ ನಾನು ಕಳುಹಿಸಿಕೊಟ್ಟಿದ್ದೆ. ಕೆಲಸದ ವೇಳೆ ನನ್ನ ಮಗ ಮನೆಯ ಆರ್ಥಿಕ ಸಮಸ್ಯೆ ಮತ್ಯು ನನಗೆ ಇರುವ ಸಾಲವನ್ನು ಅವರ ಬಳಿ ಹೇಳಿಕೊಂಡಿದ್ದಾನೆ.

ಇದನ್ನು ದುರುಪಯೋಗ ಪಡಿಸಿಕೊಂಡ ಅವರು ನೀನು ಬೆತ್ತಲೆ ಪೂಜೆ ಮಾಡಿದರೆ ನಿಮ್ಮ ಅಪ್ಪನಿಗೆ ಕೊಟ್ಟ ಸಾಲವನ್ನು ಯಾರೂ ವಾಪಸ್‌ ಕೇಳುವುದಿಲ್ಲ. ಜೊತೆಗೆ ಹಣವೂ ಸಿಕ್ಕಿ ಶ್ರೀಮಂತರಾಗುತ್ತೀರಿ ಎಂದು ಪುಸಲಾಯಿಸಿ ಹುಬ್ಬಳ್ಳಿ ಸಮೀಪದ ತಿಮ್ಮಾಪುರ ಗ್ರಾಮದ ವಾಲ್ಮೀಕಿನ ಭವನದ ಕೊಠಡಿಯಲ್ಲಿ ಬೆತ್ತಲೆ ಮಾಡಿ, ಮೈಗೆ ವಿಭೂತಿ ಹಚ್ಚಿ, ಕೊರಳಲ್ಲಿ ಹೂವಿನ ಹಾರ ಹಾಕಿ ಪೂಜೆ ಮಾಡಿದ್ದಾರೆ. ನಿಂಬೆ ಹಣ್ಣಿನಿಂದ ದೃಷ್ಟಿ ತೆಗೆದು ನಿಂಬೆಹಣ್ಣನ್ನು ಕತ್ತರಿಸಿ ನನ್ನ ಮಗನ ತಲೆಯ ಮೇಲೆ ರಸ ಹಿಂಡಿದ್ದಾರೆ. ಮರ್ಮಾಂಗಗಳನ್ನು ಮುಟ್ಟಿ ಅಸಹ್ಯ ಮಾಡಿ ವಿಡಿಯೊ ಮಾಡಿದ್ದಾರೆ ಬಾಲಕನ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ವಿಡಿಯೋ ಮಾಡಿರುವ ದುರುಳರು ಈ ವಿಷಯವನ್ನು ಎಲ್ಲಾದರೂ ಬಾಯಿಬಿಟ್ಟರೆ ನಿನ್ನ ಹಾಗೂ ನಿನ್ನ ತಂದೆಯನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಐಟಿ ಕಾಯ್ದೆ, ಬಾಲ ನ್ಯಾಯ (ಮಕ್ಕಳ ಹಕ್ಕುಗಳ ಪೋಷಣೆ) ಕಾಯ್ದೆಯಡಿ ದೂರು ದಾಖಲಾಗಿದೆ.

ಅರೋಪಿಗಳ ಪತ್ತೆಗೆ 2 ತಂಡ ರಚನೆ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಹುಬ್ಬಳ್ಳಿ ಗ್ರಾಮೀಣ ವ್ಯಾಪ್ತಿಯಲ್ಲಿ ಬಾಲಕನಿಂದ ಬೆತ್ತಲೆ ಪೂಜೆ ಮಾಡಿಸಲಾಗಿದೆ, ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ . ಈಗಾಗಲೇ ಎಫ್‌ಐಆರ್‌ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ತಂಡಗಳ ಸದಸ್ಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

English summary
A 16-years old boy from Koppal was stripped off his cloths and made to perform Nude Worship ritual as the boy's father failed to pay a loan, Police complaint filed against three people at Koppal Rural Police Station,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X