ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳದಲ್ಲಿ ಮರ್ಯಾದಾ ಹತ್ಯೆ; ಅಕ್ಕನನ್ನು ಕೊಂದ ತಮ್ಮ

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ಅಕ್ಟೋಬರ್ 19: ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಅ.17ರಂದು ನಡೆದಿದ್ದ ತ್ರಿವೇಣಿ ಎಂಬ ಮಹಿಳೆಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆ ಮಹಿಳೆಯ ತಮ್ಮನನ್ನು ಬಂಧಿಸಿದ್ದಾರೆ. ಇದು ಮರ್ಯಾದಾ ಹತ್ಯೆ ಎಂದು ತಿಳಿದುಬಂದಿದೆ.

ಅ.17ರಂದು ಇಲ್ಲಿನ ಬಸವೇಶ್ವರ ನಗರದಲ್ಲಿ ವಿನೋದ್, ತ್ರಿವೇಣಿ ದಂಪತಿ ಮೇಲೆ ಮೂವರು ಹಲ್ಲೆ ನಡೆಸಿದ್ದರು. ಅದರಲ್ಲಿ ತ್ರಿವೇಣಿ ಸಾವನ್ನಪ್ಪಿದ್ದರು. ಅಂತರ ಜಾತಿಯ ವಿವಾಹವಾದ ಕಾರಣ ತ್ರಿವೇಣಿ ಸಹೋದರ ಅವಿನಾಶ್ ಈ ಹತ್ಯೆ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ. ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ವಿನೋದ್ (31) ಹಾಗೂ ತ್ರಿವೇಣಿ (34) ಏಳು ತಿಂಗಳ ಹಿಂದೆ ಮದುವೆಯಾಗಿದ್ದರು. ತ್ರಿವೇಣಿ ಮತ್ತು ವಿನೋದ ಮುಧೋಳದ ಖಾಸಗಿ ಬ್ಯಾಂಕ್​ವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೀತಿಸಿದ್ದರು. ಆದರೆ ಈ ಮದುವೆಗೆ ತ್ರಿವೇಣಿ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಕಳೆದ ಮಾರ್ಚ್​ನಲ್ಲಿ ಗಂಗಾವತಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟ್ರಾರ್ ಮದುವೆಯಾದ ಇವರು ತಮ್ಮನೆರೆ ಮನೆಯವರ ಸಹಕಾರದೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಕೊಂಡಿದ್ದರು. ತಮ್ಮ ವೈವಾಹಿಕ ಜೀವನವನ್ನೂ ಆರಂಭಿಸಿದ್ದರು.

Honor killing At Koppal: Brother Killed His Sister At Karatagi

ಈ ಸಂಗತಿಯಿಂದ ಕೋಪಗೊಂಡಿದ್ದ ತ್ರಿವೇಣಿ ಸಹೋದರ ಅವಿನಾಶ್ (27) ಇಬ್ಬರ ಜೊತೆ ಸೇರಿ ಅಕ್ಕನ ಕೊಲೆಗೆ ಸಂಚು ರೂಪಿಸಿದ್ದಾನೆ. ಅಕ್ಟೋಬರ್ 17ರ ರಾತ್ರಿ 7ಕ್ಕೆ ಬಸವೇಶ್ವರ ನಗರದಲ್ಲಿನ ಅವರ ಮನೆ ಸಮೀಪದಲ್ಲೇ ಇಬ್ಬರ ಮೇಲೂ ರಾಡ್​ನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ತ್ರಿವೇಣಿ ಸ್ಥಳದಲ್ಲೇ ಮೃತಪಟ್ಟಿದ್ದು, ವಿನೋದ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು

Recommended Video

Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2

ಕೊಪ್ಪಳ ಎಸ್ಪಿ ಟಿ.ಶ್ರೀಧರ ನೇತೃತ್ವದ ಪೊಲೀಸ್ ತಂಡ ಈ ಹತ್ಯೆಗೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಕಾಕನಕಟ್ಟೆ ಗ್ರಾಮದ ಅವಿನಾಶ್ ನನ್ನು ಬಂಧಿಸಿದೆ. ಕೊಲೆ ಮಾಡಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಮುಂದುವರೆದಿದೆ.

English summary
Koppal police arrested a man for killing his sister. The murder was took place on october 17 at basaweshwara nagar at karatagi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X