ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಹಿರೇಬಣಕಲ್‌ಗೆ ಸ್ಥಾನ

|
Google Oneindia Kannada News

ನವದೆಹಲಿ, ಮೇ 21: ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನೆಸ್ಕೋ ವತಿಯಿಂದ ತಯಾರಾಗುತ್ತಿರುವ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯ ಹಿರೇಬಣಕಲ್ ಸ್ಥಾನ ಪಡೆದಿದೆ.

ಕರ್ನಾಟಕದ ಕೊಪ್ಪಳ ಜಿಲ್ಲೆಯ ಹಿರೇಬಣಕಲ್ ಸೇರಿದಂತೆ ಭಾರತದ ಇತರ ಆರು ಐತಿಹಾಸಿಕ ಸ್ಥಳಗಳು ಜಾಗ ಪಡೆದಿವೆ. ಭಾರತದ ಪ್ರಾಚ್ಯವಸ್ತುಗಳ ಇಲಾಖೆ (ಎಎಸ್‌ಐ) ಒಟ್ಟು 9 ಸ್ಥಾನಗಳ ವಿವರಗಳನ್ನು ಹಾಗೂ ಅವುಗಳ ಮಹತ್ವವನ್ನು ದಾಖಲಿಸಿ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಯುನೆಸ್ಕೋಗೆ ಮನವಿ ಮಾಡಿತ್ತು.

ಅವುಗಳಲ್ಲಿ 6 ಸ್ಥಳಗಳನ್ನು ಯುನೆಸ್ಕೋ ಆಯ್ಕೆ ಮಾಡಿಕೊಂಡಿದ್ದು, ಈ ಮೂಲಕ ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಒಟ್ಟು ಪಾರಂಪರಿಕ ಸ್ಥಳಗಳ ಸಂಖ್ಯೆ 48ಕ್ಕೇರಿದೆ.

Koppal: Hire Banakal Has Been Added To UNESCOs Tentative List

ಹಿರೇಬಣಕಲ್ ವಿಶೇಷವೇನು?

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಪಶ್ಚಿಮಕ್ಕೆ ಸುಮಾರು 10 ಕಿ.ಮೀ ದೂರದಲ್ಲಿ ಹಿರೇಬಣಕಲ್ ಇದೆ. ಇದೊಂದು ಗುಡ್ಡಗಾಡು ಪ್ರದೇಶವಾಗಿದ್ದು, ಮನುಷ್ಯನ ವಿಕಾಸ ಹಂತದ ಪ್ರಮುಖ ಘಟ್ಟವಾದ ಶಿಲಾಯುಗದ ಅಂತಿಮ ಹಂತ ನವಶಿಲಾಯುಗದ ಕಾಲಘಟ್ಟದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕಾಗಿ ಈ ಜಾಗವನ್ನು ಬಳಸಿರುವ ಕುರುಹುಗಳಿವೆ ಎಂದು ತಿಳಿದುಬಂದಿದೆ.

ಇದಕ್ಕೆ ಸಂಬಂಧಪಟ್ಟಂತೆ ಅತೀ ದೊಡ್ಡ ಸ್ಮಶಾನವೊಂದು ಇದ್ದು, 1955ರಿಂದಲೇ ಭಾರತೀಯ ಪ್ರಾಚ್ಯವಸ್ತು ಇಲಾಖೆಯ (ಧಾರವಾಡ ವೃತ್ತ) ಸುಪರ್ದಿಯಲ್ಲಿರುವ ಈ ಪ್ರದೇಶ, ದಕ್ಷಿಣ ಭಾರತದಲ್ಲಿ ಪತ್ತೆಯಾದ 2000ಕ್ಕೂ ಹೆಚ್ಚು ನವಶಿಲಾಯುಗದ ಸ್ಮಶಾನಗಳಲ್ಲೇ ಅತೀ ದೊಡ್ಡದು ಎಂದು ಹೇಳಲಾಗಿದೆ.

Koppal: Hire Banakal Has Been Added To UNESCOs Tentative List

ಬೆಟ್ಟದ ವೈಶಿಷ್ಟ್ಯವೇನು?

  • 7 ಗುಡ್ಡ ಪ್ರದೇಶದ ಗುಹೆಗಳಲ್ಲಿ ಆದಿ ಮಾನವರು ಚಿತ್ರಿಸಿದ ಗುಹಾಂತರ ಚಿತ್ರಗಳು
  • ಮೌರ್ಯರ ಬೆಟ್ಟದಲ್ಲಿ ಶಿಲಾಸಮಾಧಿ
  • ಪ್ರವಾಸೋದ್ಯಮಕ್ಕೆ ಅನುಕೂಲ, ಸ್ಥಳೀಯರಿಗೆ ಉದ್ಯೋಗಾವಕಾಶ

ಹೊಸದಾಗಿ ಆಯ್ಕೆಯಾದ ಸ್ಥಳಗಳು

Recommended Video

ತನ್ನ ಊಟವನ್ನೇ ನಿರ್ಗತಿಕ ಮಕ್ಕಳಿಗೆ ಕೊಟ್ಟ ಪೊಲೀಸ್ ಪೇದೆಯ ವಿಡಿಯೋ | Oneindia Kannada
  • ಹಿರೇಬಣಕಲ್ (ಕೊಪ್ಪಳ)
  • ಸಾತ್ಪುರ ಹುಲಿ ಮೀಸಲು ಪ್ರದೇಶ (ಮಧ್ಯಪ್ರದೇಶ)
  • ವಾರಾಣಸಿಯ ನದಿ ಬಯಲು (ಉತ್ತರ ಪ್ರದೇಶ)
  • ಮರಾಠಾ ಮಿಲಿಟರಿ ಪಾರಂಪರಿಕ ಕಟ್ಟಡ (ಮಹಾರಾಷ್ಟ್ರ)
  • ನರ್ಮದಾ ನದಿ ಕಣಿವೆಯ ಬೇಡಘಾಟ್ ಲಾಮಾಘಾಟ್ (ಮಧ್ಯಪ್ರದೇಶ)
  • ಕಾಂಚೀಪುರಂ ದೇವಸ್ಥಾನಗಳು (ತಮಿಳುನಾಡು)

English summary
Hirebanakal in Koppal district has been listed on UNESCO World Heritage Sites' temporary list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X