ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಪ್ತ ಸಹಾಯಕ ಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪತ್ರ!

|
Google Oneindia Kannada News

ಕೊಪ್ಪಳ, ಜುಲೈ 05; ಶಾಸಕರು, ಸಚಿವರು ಸರ್ಕಾರದ ವತಿಯಿಂದಲೇ ಆಪ್ತ ಸಹಾಯಕರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ಪಿಎ ನೇಮಕ ಮಾಡಿಕೊಳ್ಳಲು ಅವಕಾಶ ಕೇಳಿ ಪತ್ರ ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಪತ್ರ ವೈರಲ್ ಆಗಿದೆ. ಕೊಪ್ಫಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತ ಈ ಪತ್ರವನ್ನು ಬರೆದಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಬಳಿ ಒಪ್ಪಿಗೆ ಕೇಳಿದ್ದಾರೆ.

Stories Of Strength: ಇದು ಒಬ್ಬನೇ ಒಬ್ಬ ಕೋವಿಡ್ ಸೋಂಕಿತನಿಲ್ಲದ ಗ್ರಾಮ!Stories Of Strength: ಇದು ಒಬ್ಬನೇ ಒಬ್ಬ ಕೋವಿಡ್ ಸೋಂಕಿತನಿಲ್ಲದ ಗ್ರಾಮ!

ಪತ್ರದಲ್ಲಿ ಮುರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸಹಾಯಕರ ಸೇವೆಯನ್ನು ಪಡೆಯುವ ಕುರಿತು ಎಂದು ವಿಷಯ ನಮೂದಿಸಲಾಗಿದೆ. ಜೂನ್ 29ರಂದು ಬರೆದಿರುವ ಪತ್ರ ಈಗ ವೈರಲ್ ಆಗಿದೆ.

ರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮ; ಒಂದೂ ಕೋವಿಡ್ ಪ್ರಕರಣವಿಲ್ಲರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮ; ಒಂದೂ ಕೋವಿಡ್ ಪ್ರಕರಣವಿಲ್ಲ

Gram Panchayat President Requested For Personal Assistant

ಪತ್ರದ ವಿವರ; ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಕೆಳಗೆ ಸಹಿ ಮಾಡಿದ ನಾನು ಅಧ್ಯಕ್ಷರು ಗ್ರಾಮ ಪಂಚಾಯಿತಿ ಮುರಡಿ ಇದ್ದು, ನಾನು ಅಷ್ಟೊಂದು ಸುಶಿಕ್ಷಿತೆ ಅಲ್ಲದೇ ಇರುವ ಪ್ರಯುಕ್ತ ಇಲಾಖೆಯ ವಿವಿಧ ಯೋಜನೆಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಅನುಷ್ಠಾನಗೊಳಿಸುವಲ್ಲಿ ಕಷ್ಟವಾಗುತ್ತಿದೆ.

ಕೋವಿಡ್ ನಿಯಂತ್ರಣಕ್ಕೆ ಈ ಗ್ರಾಮ ಪಂಚಾಯಿತಿ ಮಾದರಿ! ಕೋವಿಡ್ ನಿಯಂತ್ರಣಕ್ಕೆ ಈ ಗ್ರಾಮ ಪಂಚಾಯಿತಿ ಮಾದರಿ!

ಕಾರಣ ಒಬ್ಬ ವ್ಯಕ್ತಿಯನ್ನು ಆಪ್ತ ಸಹಾಯಕರೊಂದಿಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಭಾಗವಹಿಸಲು ಅನುಮತಿ ನೀಡಲು ಕೋರಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Recommended Video

T 20 ವಿಶ್ವ ಕಪ್ ಒಮನ್ ನಲ್ಲಿ ಆದ್ರೆ ಆಟಗಾರರಿಗೆ ತೊಂದ್ರೆ ತಪ್ಪಿದ್ದಲ್ಲ!! | Oneindia Kannada

ಎಷ್ಟೋ ಹಳ್ಳಿಗಳಲ್ಲಿ ಮೀಸಲಾತಿ ಆಧಾರದ ಮೇಲೆ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡಿ ಆಕೆಯ ಪತಿ ಅಧಿಕಾರ ನಡೆಸುತ್ತಿರುತ್ತಾರೆ. ಆದರೆ ಶಾಂತ ಯೋಜನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುವ ಮನಸ್ಸು ಹೊಂದಿದ್ದು, ಅದಕ್ಕಾಗಿ ಅಪ್ತ ಸಹಾಯಕನಿಗಾಗಿ ಬೇಡಿಕೆ ಇಟ್ಟಿದ್ದಾರೆ.

English summary
Koppal district Maradi gram panchayat president requested Yelburga taluk CEO to approve for appointment of personal assistant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X