ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಟಿಡಿ ಇಂಗ್ಲಿಷ್‌ ಟೀಕಿಸಿದವರ ಮೇಲೆ ರಾಯರೆಡ್ಡಿ ಬೇಸರ

By Nayana
|
Google Oneindia Kannada News

Recommended Video

ಜಿ ಟಿ ದೇವೇಗೌಡ್ರ ಇಂಗ್ಲಿಷ್ ಟೀಕಿಸಿದ್ದಕ್ಕೆ ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಬೇಸ |Oneindia Kannada

ಕೊಪ್ಪಳ, ಜೂನ್ 26: ಉನ್ನತ ಶಿಕ್ಷಣ ಸಚಿವರಾದ ಜಿ.ಟಿ. ದೇವೇಗೌಡರು ಇಂಗ್ಲಿಷ್‌ನಲ್ಲಿ ಮಾತನಾಡುವ ಅಗತ್ಯವಿಲ್ಲ ಅವರು ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಉನ್ನತ ಶಿಕ್ಷಣಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನವೇ ಅವರಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಬರುವುದಿಲ್ಲ ಎಂದು ಅಪಹಾಸ್ಯ ಮಾಡಿರುವ ಮಂದಿ ಸಾಕಷ್ಟು ಇದ್ದಾರೆ ಆದರೆ ನಾವೇನು ಇಂಗ್ಲಿಷರ ಗುಲಾಮರಲ್ಲ, ದೇವೇಗೌಡರಿಗೆ ಇಂಗ್ಲಿಷ್‌ ಬರೊಲ್ಲ ಎಂಬ ಕೆಲವರ ವಾದದಿಂದ ನನಗೆ ಬೇಜಾರಾಗಿದೆ ಎಂದರು.

ಇಂಗ್ಲಿಷ್ ಮಾತನಾಡಲು ಬಾರದೆ ಇರಿಸುಮುರಿಸು ಅನುಭವಿಸಿದ ಜಿಟಿಡಿಇಂಗ್ಲಿಷ್ ಮಾತನಾಡಲು ಬಾರದೆ ಇರಿಸುಮುರಿಸು ಅನುಭವಿಸಿದ ಜಿಟಿಡಿ

ಜಿ.ಟಿ‌. ದೇವೆಗೌಡ ಅವರು ಬಟ್ಲರ್ ಇಂಗ್ಲೀಷ್ ಮಾತನಾಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಬಸವರಾಜ ರಾಯರೆಡ್ಡಿ ದೇವೇಗೌಡರು ಇಂಗ್ಲಿಷ್‌​ನಲ್ಲಿ ಮಾತನಾಡಕೂಡದು. ಕನ್ನಡ ಮಾತನಾಡಿದರೆ ಕೀಳಿರಿಮೆ, ಇಂಗ್ಲಿಷ್ ಮಾತನಾಡಿದ್ರೆ ದೊಡ್ಡಸ್ತಿಕೆ ಎಂಬ ಭಾವ ತಪ್ಪು ಎಂದು ಹೇಳಿದರು.

Former higher education minister bats for present minister

ನಮ್ಮನ್ನಾಳುವ ಮಂತ್ರಿಗಳಲ್ಲಿ ಪಿಯುಸಿ ಪಾಸಾದವರು ಎಷ್ಟು ಜನ?ನಮ್ಮನ್ನಾಳುವ ಮಂತ್ರಿಗಳಲ್ಲಿ ಪಿಯುಸಿ ಪಾಸಾದವರು ಎಷ್ಟು ಜನ?

ಕೊಟ್ಟಿರುವ ಖಾತೆ ಸಂವಿಧಾನತ್ಮಕವಾಗಿ ಸರಿ ಇದೆ, ನಾನು ಜಿ‌.ಟಿ.ದೇವೆಗೌಡರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ, ಖಾತೆ ಹೇಗೆ ನಿರ್ವಹಿಸುತ್ತಾರೆ ಅನ್ನೋದು ಮುಖ್ಯವೇ ಹೊರತು ಭಾಷೆ ಮುಖ್ಯವಲ್ಲ. ಅವರಿಗೆ ಕೊಟ್ಟಿರುವ ಖಾತೆ ಸಂವಿಧಾನತ್ಮಕವಾಗಿ ಸರಿ ಇದೆ. ನಮ್ಮ ಸಂವಿಧಾನದಲ್ಲಿ ಅನಕ್ಷರಸ್ಥರು ಕೂಡಾ ರಾಷ್ಟ್ರಪತಿ, ಪ್ರಧಾನಿ ಮುಖ್ಯಮಂತ್ರಿ ಆಗಲು ಅವಕಾಶವಿದೆ ಎಂದು ತಿಳಿಸಿದರು.

English summary
Former higher education minister Basavaraj Rayareddy has expressed disappointment on media which have criticised present higher education minister G.T.Devegowda on his spoken English during US delegation visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X