• search
 • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಜನಾದ್ರಿ ದರ್ಶನ: ಮಾವ ಪುನೀತ್‌ ರಾಜ್‌ಕುಮಾರ್‌ ಹಾದಿಯನ್ನು ಅನುಸರಿಸಿದ ಧೀರೆನ್‌

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ಆಗಸ್ಟ್‌, 19: ಡಾ.ರಾಜ್‌ಕುಮಾರ್‌ ಅವರ ಮೊಮ್ಮಗ ಧೀರನ್ ರಾಮ್‌ಕುಮಾರ್ ಇಂದು ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಹನುಮ ದರ್ಶನ ಪಡೆದಿದ್ದಾರೆ. ಧೀರನ್ ರಾಮಕುಮಾರ್ 575 ಮೆಟ್ಟಿಲುಗಳನ್ನು ಏರಿ ಹನುಮ ದರ್ಶನ ಪಡೆದಿದ್ದು, ಅವರಿಗೆ ತಾಯಿ ಪೂರ್ಣಿಮಾ ಸಾಥ್ ನೀಡಿದ್ದಾರೆ. ಡಾ.ರಾಜ್‌ಕುಮಾರ್ ಅವರ ಮಗಳಾದ ಪೂರ್ಣಿಮಾ ಅವರು ಆಂಜನೇಯನ ಜನ್ಮ ಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ತೆರಳಿದ್ದರು.

ಮಾವ ಪುನೀತ್‌ ಹಾದಿಯನ್ನೇ ಅನುಸರಿಸಿದ ಧೀರೆನ್‌
ಧೀರೆನ್‌ ರಾಮ್‌ಕುಮಾರ್‌ ಅಭಿನಯದ ಶಿವ 143 ಚಿತ್ರ ಆಗಸ್ಟ್ 26 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಹಿನ್ನೆಲೆ ಧೀರೆನ್‌ ರಾಮ್‌ಕುಮಾರ್‌ ಜೊತೆಗೆ ಚಲನಚಿತ್ರ ತಂಡದವರು ಸಹ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಹನುಮ ದರ್ಶನ ಪಡೆದರು. ಈ ಹಿಂದೆ ಪುನೀತ್ ರಾಜ್‍ಕುಮಾರ್ ಅವರು ಸಹ ಅಂಜನಾದ್ರಿಯ ದರ್ಶನ ಪಡೆದಿದ್ದರು. ಮಾವ ಪುನೀತ್ ರಾಜ್‌ಕುಮಾರ್‌ ಹಾದಿಯಂತೆ ಧೀರನ್ ರಾಮ್‌ಕುಮಾರ್ ಸಹ ಅಂಜನಾದ್ರಿ ದರ್ಶನ ಪಡೆದರು.

ಆಗಸ್ಟ್‌ 26ಕ್ಕೆ ಧೀರೆನ್‌ ತೆರೆ ಮೇಲೆ
ಅನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತುರುವ ಶಿವ 143 ಸಿನಿಮಾದಲ್ಲಿ ಧಿರೇನ್ ರಾಮ್‌ಕುಮಾರ್ ಮಿಂಚಲು ತಯಾರಾಗಿದ್ದಾರೆ. ಇದೀಗ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದು, ಆಗಸ್ಟ್‌ 26ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
ಹಾಡುಗಳ ಚಿತ್ರೀಕರಣಕ್ಕಾಗಿ ಬೃಹತ್ ಸೆಟ್ ಅನ್ನು ಹಾಕಲಾಗಿತ್ತು. ಧೀರೆನ್‌ ರಾಮ್‌ಕುಮಾರ್‌ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ತುಗಿಗಾಲಲ್ಲಿ ಕಾಯುತ್ತಿದ್ದಾರೆ.

ಅಪ್ಪು ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಗಂಗಾವತಿಯಲ್ಲಿ ಅಪ್ಪು ಅಭಿಮಾನಿಗಳು ಧೀರನ್ ರಾಮ್‌ಕುಮಾರ್ ಅವರಿಗೆ ಭರ್ಜರಿ ಸ್ವಾಗತವನ್ನು ಮಾಡಿದರು. ಪಟಾಕಿ ಸಿಡಿಸಿ ಅದ್ಧೂರಿ‌ ಸ್ವಾಗತ ಕೋರಿದ್ದಾರೆ. ಧೀರೆನ್‌ ಅವರಿಗೆ ಜೆಸಿಬಿ ಮೇಲಿಂದ ಹೂಮಳೆ ಸುರಿಸಿ ಅಪ್ಪು ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ನಂತರ ಆಟೋ, ಬೈಕ್‌ಗಳ ಮೂಲಕ ಬೃಹತ್ ಮೆರವಣಿಗೆ ರ್‍ಯಾಲಿ ಮಾಡಿದರು. ಧೀರನ್‌ ರಾಮ್‌ಕುಮಾರ್‌ ಡಾ.ರಾಜ್‌ಕುಮಾರ್‌ ಕುಟುಂಬದ ಚಿತ್ರಗಳುಳ್ಳ ವಿಶೇಷ ಶರ್ಟ್ ಧರಿಸಿ ಗಮನ ಸೆಳೆದರು.

ಸಿನಿಮಾ ಶೂಟಿಂಗ್‌ ಮುಕ್ತಾಯ:
ಒಂದು ವಿಶೇಷವಾದ ಹಾಡಿನಲ್ಲಿ ಸಾಧು ಕೋಕಿಲಾ ಅವರು ಮಾಡೆಲ್ ನಮ್ರತಾ ಮಲ್ಲಾ ಜೆನಿತ್ ಎನ್ನುವ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಆಕ್ಷನ್ ರೊಮ್ಯಾಂಟಿಕ್ ಸಿನಿಮಾದಲ್ಲಿ ಮಾನ್ವಿತಾ ಕಾಮತ್ ಧೀರೆನ್‌ಗೆ ನಟಿಯಾಗಿ ಜೋಡಿಯಾಗಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ರಾಜ್‌ಕುಮಾರ್ ಕುಟುಂಬದ ಕುಡಿ ನಟ ಧೀರನ್ ರಾಮ್‌ಕುಮಾರ್‌ ಶಿವ 143 ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದ್ದಾರೆ.

Film Actor Dheeren Ramkumar visited Anjanadri hill

ಮೊದಲು ಪುನೀತ್‌ ರಾಜ್‌ಕುಮಾರ್‌ ಸಿನಿಮಾ ಚಿತ್ರಿಕರಣ ಮುಗಿಸಿಕೊಂಡು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, ಹನುಮ ದರ್ಶನವನ್ನು ಪಡೆದಿದ್ದರು. ಇದೀಗ ಮಾವ ಪುನೀತ್ ರಾಜ್‌ಕುಮಾರ್‌ ಹಾದಿಯಂತೆ ಧೀರೆನ್‌ ರಾಮ್‌ಕುಮಾರ್‌ ಕೂಡ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

Recommended Video

   ಚಹಾಲ್ ತಮ್ಮ ವೈವಾಹಿಕ ಜೀವನದ ಬಗ್ಗೆ ಸ್ಪಷ್ಟನೆ ನೀಡಿದರು | OneIndia Kannada
   English summary
   Dheeren Ramkumar visited Anjanadri hill in Koppal district today darshan of Lord Hanuman. know more,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X