ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್‌ನಿಂದ ನೋಟಿಸ್, ಏನು ಮಾಡಬೇಕು ಎಂದು ಸಿಎಂಗೆ ರೈತನ ಪತ್ರ

|
Google Oneindia Kannada News

Recommended Video

ಬ್ಯಾಂಕ್‌ನಿಂದ ನೋಟಿಸ್, ಏನು ಮಾಡಬೇಕು ಎಂದು ಸಿಎಂಗೆ ರೈತನ ಪತ್ರ | Oneindia Kannada

ಕೊಪ್ಪಳ, ಡಿಸೆಂಬರ್ 7: ರಾಜ್ಯ ಸರ್ಕಾರವು ರೈತರ ಕೃಷಿ ಸಾಲ ಮನ್ನಾ ಘೋಷಿಸಿದರೂ ಕೂಡ ಇದುವರೆಗೆ ಸಾಲಮನ್ನಾ ಆಗಿಲ್ಲ, ರೈತರಿಗೆ ಬ್ಯಾಂಕ್‌ಗಳಿಂದ, ಸೊಸೈಟಿಗಳಿಂದ ನೋಟಿಸ್ ಬರುವುದು ಕೂಡ ತಪ್ಪಿಲ್ಲ.

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಬ್ಯಾಂಕ್‌ಗಳು ಒಂದೊಮ್ಮೆ ರೈತರಿಗೆ ನೋಟಿಸ್ ಕಳುಹಿಸಿದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದ್ದರು. ಅದ್ಯಾವುದಕ್ಕೂ ತಲೆ ಕೆಡೆಸಿಕೊಳ್ಳದ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ಕಳುಹಿಸುತ್ತಲೇ ಇದ್ದು ರೈತರು ಕಂಗಾಲಾಗುವಂತೆ ಮಾಡಿದ್ದಾರೆ.

ಮುಖ್ಯಮಂತ್ರಿಗೆ ಹೃದಯ ಹಿಂಡುವ ಡೆತ್‌ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ ಮುಖ್ಯಮಂತ್ರಿಗೆ ಹೃದಯ ಹಿಂಡುವ ಡೆತ್‌ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ

ಕೊಪ್ಪಳ ಜಿಲ್ಲೆಯ ರೈತನೊಬ್ಬ ಸಾಲ ಮರುಪಾವತಿಗೆ ಮೊಬೈಲ್‌ಗೆ ಸಂದೇಶ ಬಂದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

ಯಮನೂರಪ್ಪ ಮೇಟಿ ಎನ್ನುವ ರೈತ ಸಿಎಂಗೆ ಪತ್ರ ಬರೆದಿದ್ದಾರೆ, ನೀವು ಬ್ಯಾಂಕ್‌ಗಳಿಗೆ ಸೂಚನೆ ಕೊಟ್ಟಿದ್ದೀರಿ, ನಮಗೂ ಭರವಸೆ ನೀಡಿದ್ದೀರಿ ಆದರೂ ಸಾಲ ಮರುಪಾವತಿಸಿ ಎಂದು ಸಂದೇಶ ಬರುತ್ತಿದ್ದು, ಏನು ಮಾಡಬೇಕು ಎಂದು ತೋಚುತ್ತಿಲ್ಲ, ಹಲವು ವರ್ಷಗಳಿಂದ ಸರಿಯಾಗಿ ಮಳೆಯಾಗಿಲ್ಲ, ಉತ್ತಮ ಬೆಳೆಯೂ ಇಲ್ಲ ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

ರೈತ ಆಂಧ್ರ ಬ್ಯಾಂಕ್‌ನಲ್ಲಿ 2 ಲಕ್ಷ ಸಾಲ

ರೈತ ಆಂಧ್ರ ಬ್ಯಾಂಕ್‌ನಲ್ಲಿ 2 ಲಕ್ಷ ಸಾಲ

ರೈತ ಯಮನೂರಪ್ಪ ಕಳೆದ 1 ವರ್ಷದ ಹಿಂದೆ ಆಂಧ್ರ ಬ್ಯಾಂಕಿನಲ್ಲಿ 1 ಲಕ್ಷ 70 ಸಾವಿರ ಬೆಳೆ ಸಾಲ ಮಾಡಿದ್ದರು. ಇದೇ ತಿಂಗಳು 20ರೊಳಗೆ ಸಾಲ ಮರುಪಾವತಿ ಮಾಡಿ ನವೀಕರಣ ಮಾಡಿ ಎಂದು ಅವರ ಮೊಬೈಲ್ ಗೆ ಬ್ಯಾಂಕ್ ನಿಂದ ಸಂದೇಶ ಬಂದಿದೆ ಇದರಿಂದ ರೈತರಿಗೆ ಬೇಸರ ಉಂಟಾಗಿದೆ.

ದಯಾಮರಣ ಕರುಣಿಸಿ ಎಂದು ಪತ್ರ

ದಯಾಮರಣ ಕರುಣಿಸಿ ಎಂದು ಪತ್ರ

ಈ ಹಿಂದೆ ರೈತನೊಬ್ಬ ಸಾಲದ ಹೊರೆ ವಿಪರೀತವಾಗಿದೆ, ಅದನ್ನು ತೀರಿಸಲು ಆಗುತ್ತಿಲ್ಲ, ದಯಾಮರಣವನ್ನು ಕರುಣಿಸಿ ಎಂದು ರಕ್ತದಲ್ಲಿ ಪತ್ರ ಬರೆದಿದ್ದರು.

ರೈತರಿಂದ ಸಿಎಂಗೆ ಕ್ಲಾಸ್‌, ಮತ್ತೆ ಹಂಗಿನ ಮಾತಾಡಿದ ಕುಮಾರಸ್ವಾಮಿರೈತರಿಂದ ಸಿಎಂಗೆ ಕ್ಲಾಸ್‌, ಮತ್ತೆ ಹಂಗಿನ ಮಾತಾಡಿದ ಕುಮಾರಸ್ವಾಮಿ

ದನ ಕರುಗಳಿಗೆ ನೀರಿಲ್ಲ, ಸಾಲವೂ ತೀರಿಲ್ಲ

ದನ ಕರುಗಳಿಗೆ ನೀರಿಲ್ಲ, ಸಾಲವೂ ತೀರಿಲ್ಲ

ಕೆರೆ ಕಟ್ಟೆಗೆ, ದನ ಕರುಗಳಗಳಿಗೆ ನೀರು ನೀಡಿ ಇಲ್ಲಾ ದಯಾಮರಣ ನೀಡಿ ಅಂತ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಪಂಚಾಯಿತಿ ವ್ಯಾಪ್ತಿಯ ರೈತರು ಈ ರೀತಿ ಮುಖ್ಯಮಂತ್ರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ರಾಜ್ಯದಲ್ಲಿ ಮಳೆಯಾಗ್ತಿದ್ರೂ ಇಲ್ಲಿನ ಜನ ಮಾತ್ರ ಬೆಳೆ ಬೆಳೆಯಲು ಆಗ್ತಿಲ್ಲ, ಈಗಾಗಿ ಬದಕಲು ಆಗದ ಸ್ಥಿತಿಯನ್ನು ತಲುಪಿದ್ದೇವೆ. ಈಗಲಾದರೂ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ರೈತರು ಕೋರಿದ್ದರು.

ಸಾಲಮನ್ನಾಕ್ಕೆ ಬ್ಯಾಂಕುಗಳು ಸಹಕರಿಸದಿದ್ದರೆ ನೇರ ರೈತರ ಖಾತೆಗೆ ಹಣ: ರೇವಣ್ಣ ಸಾಲಮನ್ನಾಕ್ಕೆ ಬ್ಯಾಂಕುಗಳು ಸಹಕರಿಸದಿದ್ದರೆ ನೇರ ರೈತರ ಖಾತೆಗೆ ಹಣ: ರೇವಣ್ಣ

ಚನ್ನರಾಯಪಟ್ಟಣದಲ್ಲಿ ಮಳೆ ಕಡಿಮೆ

ಚನ್ನರಾಯಪಟ್ಟಣದಲ್ಲಿ ಮಳೆ ಕಡಿಮೆ

ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣವೂ ಕಡಿಮೆ ಆಗಿದ್ದು, ಅಂತರ್ಜಲ ಸಂಪೂರ್ಣ ಕುಸಿದಿದೆ. ಈ ಸಮಸ್ಯೆ ಕಳೆದ ಮೂರು ದಶಕಗಳಿಂದ ಮುಂದುವರಿದಿದೆ.

ಎಚ್ಡಿಕೆ ಸಾಲಮನ್ನಾ ಕನಸಿಗೆ ಕೈ ಜೋಡಿಸಿದ ದೊಡ್ಡ ಬ್ಯಾಂಕ್ ಗಳು ಎಚ್ಡಿಕೆ ಸಾಲಮನ್ನಾ ಕನಸಿಗೆ ಕೈ ಜೋಡಿಸಿದ ದೊಡ್ಡ ಬ್ಯಾಂಕ್ ಗಳು

English summary
A farmer from Koppal wrote a letter to Chief minister HD Kumaraswamy to explain his agriculture problems and how to bank officials are harassing him over loan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X