ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನದಿಯಲ್ಲಿ ಕೊಚ್ಚಿ ಹೋಗಿದ್ದ ಕಾನ್‌ಸ್ಟೆಬಲ್‌ಗಳ ಸಾವು, ಸಂತಾಪ

|
Google Oneindia Kannada News

ಕೊಪ್ಪಳ, ಸೆಪ್ಟೆಂಬರ್‌ 07: ಕರ್ನಾಟಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಮಂಗಳವಾರ ಉಕ್ಕಿ ಹರಿಯುವ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಪೊಲೀಸರು ನಿಧನರಾಗಿದ್ದಾರೆ. ಹೀಗಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಎಡಿಜಿಪಿ ಅಲೋಕ್‌ ಕುಮಾರ್‌ ಸಂತಾಪ ಸೂಚಿಸಿದ್ದಾರೆ.

ಸೆಪ್ಟೆಂಬರ್‌ 6ರಂದು ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶ ಹಾಗೂ ನಿಂಗಪ್ಪ ಎಂಬುವರು ಕೊಚ್ಚಿ ಹೋಗಿದ್ದರು. ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿತ್ತು. ಕೊಪ್ಪಳ ತಾಲೂಕಿನ ಹಿರೇಹಳ್ಳದ ಅಣೆಕಟ್ಟಿನ ನಾಲ್ಕೂ ಗೇಟ್‌ಗಳಿಂದ ನೀರು ಬಿಟ್ಟಿದ್ದರಿಂದ ನದಿ ಉಕ್ಕಿ ಹರಿಯುತ್ತಿತ್ತು.

ಕರ್ನಾಟಕ ಮಳೆ: ನದಿಯಲ್ಲಿ ಕೊಚ್ಚಿಹೋದ ಇಬ್ಬರು ಪೊಲೀಸರಿಗಾಗಿ ಶೋಧಕರ್ನಾಟಕ ಮಳೆ: ನದಿಯಲ್ಲಿ ಕೊಚ್ಚಿಹೋದ ಇಬ್ಬರು ಪೊಲೀಸರಿಗಾಗಿ ಶೋಧ

ನಿಧನರಾದ ಇಬ್ಬರು ಪೊಲೀಸರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದಾರೆ. ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ, ಮುಂಡರಗಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಗಳಾಗಿದ್ದ ಮಹೇಶ್ ಮತ್ತು ನಿಂಗಪ್ಪ ಅವರು ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಕೊಚ್ಚಿಹೋಗಿ ಮೃತರಾದ ಸುದ್ದಿ ತಿಳಿದು ಬಹಳ ದುಃಖ ಉಂಟಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಕುಟುಂಬಕ್ಕೆ ಈ ದುಃಖ ಸಹಿಸುವ ಶಕ್ತಿ ದೊರೆಯಲಿ ಎಂದು ಟ್ವಿಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

Death of two constables washed away in river, yalaburga, Home Minister Araga jnanendra condolence

ಅಲ್ಲದೆ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಹಾನಿಗೀಡಾದ ಪ್ರದೇಶಗಳಲ್ಲಿ ರಾಜ್ಯ ವಿಪತ್ತು ನಿರ್ವಹಣೆ ಘಟಕದ ಸುಮಾರು 500 ಸಿಬ್ಬಂದಿ‌ ಹಗಲಿರುಳು ಶ್ರಮಿಸಿ ಸಂತ್ರಸ್ತರ ರಕ್ಷಣೆ ಮಾಡುತ್ತಿದ್ದಾರೆ. ಅವರೆಲ್ಲರ ಕರ್ತವ್ಯ ನಿಷ್ಠೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬರೆದಿದ್ದಾರೆ.

Death of two constables washed away in river, yalaburga, Home Minister Araga jnanendra condolence

ಇನ್ನೂ ಎಡಿಜಿಪಿ ಅಲೋಕ್‌ ಕುಮಾರ್‌ ಅವರು, ನಮ್ಮ ಮಹೇಶ್ ಮತ್ತು ನಿಂಗಪ್ಪ ಎಂಬ ಇಬ್ಬರು ಪೊಲೀಸ್‌ ಸಿಬ್ಬಂದಿ ಬಂದೋಬಸ್ತ್ ಕರ್ತವ್ಯ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಬೈಕ್ ಸಮೇತ ಇಬ್ಬರೂ ಕೊಚ್ಚಿ ಹೋಗಿದ್ದು, ಇ ಇಬ್ಬರು ಯುವಕರನ್ನು ನಾವು ಕಳೆದುಕೊಂಡಿದ್ದೇವೆ. ಅವರಿಗೆ ನಮ್ಮ ಸಂತಾಪಗಳು. ನಮ್ಮ ರಾಜ್ಯಕ್ಕೆ ಮಳೆ ಮತ್ತು ಪ್ರವಾಹದ ಬಿರುಸಿನಿಂದ ಬಿಡುವು ನೀಡಲಿ ಎಂದು ಗಣೇಶನಿಗೆ ಪ್ರಾರ್ಥಿಸುತ್ತೇನೆ ಎಂದು ಟ್ವಿಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

English summary
Two policemen died after they were swept away by an overflowing river in Bandihala village of Yalaburga taluk in Koppal district of Karnataka on Tuesday. Home Minister Araga jnanendra and ADGP Alok Kumar expressed condolences
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X