• search
 • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಪ್ಪಳ; ನರೇಗಾ ಕೂಲಿಕಾರರಿಗೆ ಸ್ಥಳದಲ್ಲೇ ಕೋವಿಡ್ ಲಸಿಕೆ

|
Google Oneindia Kannada News

ಕೊಪ್ಪಳ, ಜೂನ್ 23; ಕೊಪ್ಪಳದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರಿಗೆ ಸ್ಥಳದಲ್ಲೇ ಕೋವಿಡ್-19 ಲಸಿಕೆಯನ್ನು ನೀಡಲಾಯಿತು. 248 ಜನರು ಸ್ಥಳದಲ್ಲಿಯೇ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದರು.

ಕೊಪ್ಪಳ ತಾಲೂಕು ಪಂಚಾಯತಿ ವತಿಯಿಂದ ಗುಳದಳ್ಳಿ ಗ್ರಾಮ ಪಂಚಾಯತಿಯ ಗಬ್ಬೂರ ಗ್ರಾಮದಲ್ಲಿ ನರೇಗಾ ಕೂಲಿಕಾರರಿಗೆ ಕೋವಿಡ್ ಲಸಿಕೆಯನ್ನು ನೀಡಲಾಯಿತು. ಉದ್ಯೋಗ ಹುಡುಕಿಕೊಂಡು ಗುಳೆ ಹೊಗದೇ ಸ್ಥಳೀಯವಾಗಿ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ಎಂದು ಮನವಿ ಮಾಡಲಾಯಿತು.

ದೇಶದಲ್ಲಿ ಮಂಗಳವಾರ ಕೋವಿಡ್‌ ಲಸಿಕೆ ನೀಡಿಕೆ ಪ್ರಮಾಣ ದಿಢೀರ್‌ ಇಳಿಕೆದೇಶದಲ್ಲಿ ಮಂಗಳವಾರ ಕೋವಿಡ್‌ ಲಸಿಕೆ ನೀಡಿಕೆ ಪ್ರಮಾಣ ದಿಢೀರ್‌ ಇಳಿಕೆ

ತಾಲೂಕ ಪಂಚಾಯತಿ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಸೌಮ್ಯ ಕೆ. ಮಾತನಾಡಿ, "ಕೂಲಿ ಕೆಲಸಕ್ಕಿಂತ ದೇಹದ ಆರೋಗ್ಯ ಮುಖ್ಯವಾಗಿದ್ದು, ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರರು ಪ್ರಮುಖ ಘಟ್ಟದಲ್ಲಿ ಬರುವುದರಿಂದ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಲ್ಲಿ ಕೋವಿಡ್‌ನಿಂದ ಪಾರಾಗಬಹುದು" ಎಂದರು.

ಕೋವಿಡ್ ಲಸಿಕೆ ಮೇಳ: ಆರೋಗ್ಯ ಸಚಿವರ ಜಿಲ್ಲೆ ಪ್ರಥಮಕೋವಿಡ್ ಲಸಿಕೆ ಮೇಳ: ಆರೋಗ್ಯ ಸಚಿವರ ಜಿಲ್ಲೆ ಪ್ರಥಮ

ನರೇಗಾ ಯೋಜನೆಯಡಿ ಪ್ರಸ್ತುತ ಪ್ರತಿ ದಿನಕ್ಕೆ ಕೂಲಿ 289 ರೂ. ನಿಗದಿ ಮಾಡಲಾಗಿದೆ ಮತ್ತು ಉಪಕರಣಗಳ ಬಳಕೆಗಾಗಿ (ಗುದ್ದಲಿ, ಸಲಿಕೆ ಹರಿತಕ್ಕಾಗಿ) 10 ರೂ. ಹೆಚ್ಚುವರಿಯಾಗಿ ಪಾವತಿಸಲು ಅವಕಾಶವಿದೆ.

 ಡೆಲ್ಟಾ ರೂಪಾಂತರಿ ವಿರುದ್ಧ ಎರಡು ಲಸಿಕೆ ಪರಿಣಾಮಕಾರಿ ಡೆಲ್ಟಾ ರೂಪಾಂತರಿ ವಿರುದ್ಧ ಎರಡು ಲಸಿಕೆ ಪರಿಣಾಮಕಾರಿ

ಉದ್ಯೋಗಕ್ಕಾಗಿ ಜನರು ಸ್ಥಳೀಯ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿದರೆ ಸಾಮುದಾಯಿಕ ಕಾಮಗಾರಿಗಳಾದ ಕೆರೆ ಹೂಳೆತ್ತುವುದು, ಚೆಕ್ ಡ್ಯಾಂ ಹೂಳೆತ್ತುವದು, ಕೃಷಿಹೊಂಡ ನಿರ್ಮಾಣ ಮತ್ತು ಬದು ನಿರ್ಮಾಣ ಮುಂತಾದ ಕಾಮಗಾರಿಗಳಲ್ಲಿ ಪಾಲ್ಗೊಳ್ಳಬಹುದುದ.

ಕೆಲಸ ನಿರ್ವಹಿಸಿದ ಬಳಿಕ ಕೂಲಿಯನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಪಡೆಯಬಹುದು. ನಗರ ಪ್ರದೇಶಗಳಲ್ಲಿ ಲಾಕ್‌ಡೌನ್ ಆದ ಕಾರಣ ಬಹಳಷ್ಟು ಕೂಲಿಕಾರರು ಗ್ರಾಮಗಳಿಗೆ ವಾಪಸ್ ಆಗಿದ್ದು, ಗ್ರಾಮ ಪಂಚಾಯತಿಯಿಂದ ಕೂಲಿ ಕೆಲಸ ನೀಡಲಾಗಿದೆ.

   ತಿಹಾರ್ ಜೈಲಿನಲ್ಲಿ ಸಹಾಯ ಮಾಡಿದ ಕೈದಿಗಳಿಗೆ ಹೊಸ ಜೀವನ ಕಟ್ಟಿಕೊಟ್ಟ ಡಿಕೆ ಶಿವಕುಮಾರ್ | Oneindia Kannada

   ಈ ವರ್ಷದ ಏಪ್ರಿಲ್‌ನಿಂದ ಜೂನ್ ತನಕ 24595 ಮಾನವ ದಿನಗಳ ಕೆಲಸವನ್ನು ಮಾಡಿಸುವ ಗುರಿ ಇದೆ. ಒಟ್ಟು 32,501 ಮಾನವ ದಿನಗಳನ್ನು ಸೃಜಿಸಲಾಗಿದ್ದು, 2,251 ಕೂಲಿಕಾರರಿಗೆ ಕೂಲಿ ಕೆಲಸ ಒದಗಿಸಲಾಗಿದೆ.

   English summary
   In Koppal Covid vaccine administered on spot for 248 people who working under Mahatma Gandhi National Rural Employment Guarantee Act (​MGNREGA).
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X