• search
 • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಪ್ಪಳದಲ್ಲಿ ಕೋವಿಡ್ - 19 ಪರೀಕ್ಷೆ ಲ್ಯಾಬ್ ಆರಂಭ

|

ಕೊಪ್ಪಳ, ಮೇ 26 : ಕೊಪ್ಪಳದಲ್ಲಿ ಕೋವಿಡ್ - 19 ಪರೀಕ್ಷೆಯ ಲ್ಯಾಬ್ ಉದ್ಘಾಟನೆಗೊಂಡಿದೆ. ಇಲ್ಲಿ ಪ್ರತಿದಿನ 40 ರಿಂದ 45 ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ.

   ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಅಡುಗೆ ಸಹಾಯಕಿಗೆ ಗ್ರಾಮಸ್ಥರು ಮಾಡಿದ್ದೇನು | Koppala | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಕೊಪ್ಪಳ ಜಿಲ್ಲೆಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜೀವಶಾಸ್ತ್ರ ವಿಭಾಗದಲ್ಲಿ ಕೋವೀಡ್-19 ಪರೀಕ್ಷೆ ಪ್ರಯೋಗಾಲಯ ಸ್ಥಾಪನೆ ಮಾಡಲಾಗಿದೆ. ಮಂಗಳವಾರ ಸಂಸದ ಸಂಗಣ್ಣ ಕರಡಿ ಪ್ರಯೋಗಾಲಯವನ್ನು ಉದ್ಘಾಟನೆ ಮಾಡಿದರು.

   ಕೋವಿಡ್-19 ಗೆ ಲಸಿಕೆ: ಆಸ್ಟ್ರೇಲಿಯಾದಲ್ಲಿ ಮನುಷ್ಯರ ಮೇಲೆ ಪ್ರಯೋಗ ಶುರು!

   ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಮಂಜುನಾಥ ಪಿ.ಸಾಲ್ಮನಿ ಲ್ಯಾಬ್ ಬಗ್ಗೆ ಮಾಹಿತಿ ನೀಡಿದರು. "ಕೊವೀಡ್-19 ಸ್ಕ್ರೀನಿಂಗ್ (ಟ್ರೋನ್ಯಾಟ್) ಪರೀಕ್ಷೆ ಕೇವಲ ಕೊವೀಡ್ - 19 ನೆಗೆಟಿವ್ ಫಲಿತಾಂಶವನ್ನು ಮಾತ್ರ ದೃಢಿಕರಿಸುತ್ತದೆ. ಪಾಸಿಟಿವ್ ಫಲಿತಾಂಶವನ್ನು ಆರ್. ಟಿ. ಪಿ. ಸಿ. ಆರ್. ಪರೀಕ್ಷೆ ಮೂಲಕ ಪಡೆಯಬೇಕು" ಎಂದರು.

   SDRF ಅನುದಾನದಲ್ಲಿ ದಾವಣಗೆರೆಗೆ ಪ್ರತ್ಯೇಕ ಲ್ಯಾಬ್

   ಜೀವಶಾಸ್ತ್ರ ವಿಭಾಗದಲ್ಲಿ ವೈರಾಣು ಸಂಶೋಧನೆ ಹಾಗೂ ರೋಗ ನಿರ್ಣಯ ಪ್ರಯೋಗಲಯ ಮುಕ್ತಾಯದ ಹಂತದಲ್ಲಿದ್ದು, ಈ ಮಾಸಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ. ವೈರಾಣು ಸಂಶೋಧನೆ ಹಾಗೂ ರೋಗ ನಿರ್ಣಯ ಪ್ರಾಯೋಗಲಯದಲ್ಲಿ ಆರ್. ಟಿ. ಪಿ. ಸಿ. ಆರ್. ವಿಧಾನ ಮೂಲಕ ಕೊವೀಡ್-19 ಪರೀಕ್ಷೆ ಮಾಡಲಾಗುತ್ತದೆ.

   ಕೊಪ್ಪಳ; ಕ್ವಾರಂಟೈನ್‌ ಇಲ್ಲ, ಟೆಂಟ್‌ಗಳಲ್ಲಿ ಕಾರ್ಮಿಕರ ವಾಸ

   ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಂತೇಶ ಪಾಟೀಲ್ ಮೈನಳ್ಳಿ ಮುಂತಾದವರು ಲ್ಯಾಬ್ ಉದ್ಘಾಟನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

   ಮತ್ತೊಂದು ಪ್ರಕರಣ ದಾಖಲು: ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ರಾಯಚೂರು ಜಿಲ್ಲೆಯ ಮಸ್ಕಿಯ ಕೆನರಾ ಬ್ಯಾಂಕ್‌ನಲ್ಲಿ ಅಗ್ರಿಕಲ್ಚರ್ ಫಿಲ್ಡ್ ಆಫಿಸರ್ ಆಗಿ ಇವರು ಕಾರ್ಯ ನಿರ್ವಹಿಸುತ್ತಿದ್ದರು.

   English summary
   Koppal district of Karnataka get the COVID 19 test lab. On May 26 lab inaugurated . 40 to 50 samples can test in the lab per day.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X