ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತಿವ್ರತೆಯರಾಗಿದ್ದ ಅನರ್ಹ ಶಾಸಕರು ಈಗ ದೇವದಾಸಿಯರು: ಸಿಎಂ ಇಬ್ರಾಹಿಂ ವ್ಯಂಗ್ಯ

|
Google Oneindia Kannada News

Recommended Video

ಪತಿವ್ರತೆಯರಾಗಿದ್ದ ಅನರ್ಹ ಶಾಸಕರು ಈಗ ದೇವದಾಸಿಯರು: ಸಿಎಂ ಇಬ್ರಾಹಿಂ ವ್ಯಂಗ್ಯ | Oneindia Kannada

ಕೊಪ್ಪಳ, ಆಗಸ್ಟ್ 3: ಅನರ್ಹ ಶಾಸಕರು ದೇವದಾಸಿಯರಿದ್ದಂತೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಲೇವಡಿ ಮಾಡಿದರು.

ಕೊಪ್ಪಳದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರ ತೀನ್‌ ದಿನ್ ಕಾ ಮಜಾ ಖತಂ ಆಗಿದೆ. ಸುಧಾಕರ್ ಅವರು ತಮಗೆ ನೋವಾಗಿದೆ ಎನ್ನುತ್ತಿದ್ದಾರೆ. ಅವರಿಗೇನು ಹೆರಿಗೆ ಆಗಿತ್ತಾ? ಎಂದು ವ್ಯಂಗ್ಯವಾಡಿದರು.

ನಾವು ಹುಟ್ಟಿಸಿದ 17 ಜನರನ್ನು ಕರೆದುಕೊಂಡು ಹೋಗಿ ಬಿಜೆಪಿಯವರು ನಮ್ಮ ಮಕ್ಕಳು ಎನ್ನುತ್ತಿದ್ದಾರೆ. ಸ್ವಂತ ಮಕ್ಕಳನ್ನು ಹುಟ್ಟಿಸಲು ಆಗದ ನೀವೆಂತ ಗಂಡಸರು? ನಡತೆಗೆಟ್ಟ ಹುಡುಗಿ ಹೊಸಲು ದಾಟಿದರೆ ಏನೂ ಮಾಡಲು ಆಗೊಲ್ಲ. ಇವರೆಲ್ಲ ಏಕೆ ಹೋಗಬೇಕು ಎಂದು ಕಿಡಿಕಾರಿದರು.

ಯಡಿಯೂರಪ್ಪ ಭೇಟಿ ಬಳಿಕ ಅನರ್ಹ ಶಾಸಕ ಸುಧಾಕರ್ ಹೇಳಿದ್ದೇನು?ಯಡಿಯೂರಪ್ಪ ಭೇಟಿ ಬಳಿಕ ಅನರ್ಹ ಶಾಸಕ ಸುಧಾಕರ್ ಹೇಳಿದ್ದೇನು?

ಅನರ್ಹಗೊಂಡ ಶಾಸಕರು ಮುಂಬೈಗೆ ಹೋಗಲು ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಲಾಗುತ್ತಿದೆ. ಸಿದ್ದರಾಮಯ್ಯ ಅವರು ಯಾವ ಶಾಸಕರನ್ನೂ ಅಲ್ಲಿಗೆ ಕಳುಹಿಸಿಲ್ಲ. ತಾವು ಹಾಳಾಗಿದ್ದೇವೆ ಎಂದುಕೊಂಡು ಸಿದ್ದರಾಮಯ್ಯ ಅವರ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಪತಿವ್ರತೆಯರು ದೇವದಾಸಿಯರಾದರು

ಪತಿವ್ರತೆಯರು ದೇವದಾಸಿಯರಾದರು

ನಮ್ಮ ಪಕ್ಷದಲ್ಲಿದ್ದ 13 ಜನ ಪತಿವ್ರತೆಯರು ರಾಜ್ಯ ಬಿಟ್ಟು ಮುಂಬೈ ಸೇರಿಕೊಂಡರು. ಬಾಂಬೆ ಶೇಟ್ ಅವರನ್ನೆಲ್ಲ ಕರೆದುಕೊಂಡು ಮೂರು ದಿನ ಲಾಡ್ಜ್‌ನಲ್ಲಿರಿಸಿಕೊಂಡು ಈಗ ಕೈಬಿಟ್ಟನು. ಅವರೆಲ್ಲ ಈಗ ದೇವದಾಸಿಯರಾಗಿದ್ದಾರೆ. ಬೇರೆಯವರಿಗೆ ಹುಟ್ಟಿದ ಮಕ್ಕಳನ್ನು ತೆಗೆದುಕೊಂಡು ತಮ್ಮ ಮಕ್ಕಳು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಯಡಿಯೂರಪ್ಪ, ರಾಜ್ಯಪಾಲರಿಗೆ ಸಿದ್ದರಾಮಯ್ಯ ಕುಟುಕು ಟ್ವೀಟ್‌ಯಡಿಯೂರಪ್ಪ, ರಾಜ್ಯಪಾಲರಿಗೆ ಸಿದ್ದರಾಮಯ್ಯ ಕುಟುಕು ಟ್ವೀಟ್‌

ಮಧ್ಯಂತರ ಚುನಾವಣೆ ಬರಲಿದೆ

ಮಧ್ಯಂತರ ಚುನಾವಣೆ ಬರಲಿದೆ

ರಾಜ್ಯದಲ್ಲಿ ಬಹುಮತವಿಲ್ಲದೆ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಇದುವರೆಗೂ ಅದು ಸಂಪುಟ ವಿಸ್ತರಣೆ ಮಾಡಿಲ್ಲ. ಅದರ ರಚನೆಯಾಗುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಪಕ್ಷದಲ್ಲಿ ನಮ್ಮನ್ನು ಬಿಟ್ಟುಹೋದವರ ಅನುಮತಿಗಾಗಿ ಕಾಯುತ್ತಿರಬಹುದು. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಮುಂದಿನ ವರ್ಷ ಮಧ್ಯಂತರ ಚುನಾವಣೆ ಎದುರಾಗಬಹುದು. ರಾಜ್ಯಕ್ಕೆ ಈ ಸ್ಥಿತಿ ಬರಬಾರದಿತ್ತು ಎಂದರು.

ಸರ್ಕಾರದ ನೀತಿಗಳೇ ಕಾರಣ

ಸರ್ಕಾರದ ನೀತಿಗಳೇ ಕಾರಣ

ಕಾಫಿಡೇ ಸಂಸ್ಥಾಪಕ ಸಿದ್ಧಾರ್ಥ ಅವರ ಸಾವಿಗೆ ಸರ್ಕಾರದ ನೀತಿಗಳೇ ಕಾರಣ. ಅವರು ಐಡಿ ಇಲಾಖೆಯ ಒತ್ತಡದ ಕುರಿತು ಬರೆದಿದ್ದ ಪತ್ರವೇ ಅದನ್ನು ಹೇಳುತ್ತಿದೆ. ಕೇಂದ್ರ ಸರ್ಕಾರದ ನೀತಿಗಳಿಂದಾಗಿ ವಾಣಿಜ್ಯೋದ್ಯಮಿಗಳು ದೇಶ ಬಿಡುತ್ತಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದರು.

ಟಿಪ್ಪು ಜಯಂತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ತ್ರಿವಳಿ ತಲಾಖ್ ಬಗ್ಗೆ ಜಾಣಮೌನ: ಈಶ್ವರಪ್ಪಟಿಪ್ಪು ಜಯಂತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ತ್ರಿವಳಿ ತಲಾಖ್ ಬಗ್ಗೆ ಜಾಣಮೌನ: ಈಶ್ವರಪ್ಪ

ಟಿಪ್ಪು ಜಯಂತಿಯನ್ನು ರದ್ದು ಮಾಡಿಸಿರುವುದು

ಟಿಪ್ಪು ಜಯಂತಿಯನ್ನು ರದ್ದು ಮಾಡಿಸಿರುವುದು

ಟಿಪ್ಪು ಜಯಂತಿಯನ್ನು ಯಡಿಯೂರಪ್ಪ ರದ್ದು ಮಾಡಿದ್ದಲ್ಲ, ಅವರ ಕಡೆಯಿಂದ ರದ್ದು ಮಾಡಿಸಿದ್ದಾರೆ ಅಷ್ಟೇ. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಎಲ್ಲರೂ ಟಿಪ್ಪು ಜಯಂತಿ ಆಚರಿಸಿದ್ದರು. ಈಗ ಅವರೇ ರದ್ದು ಮಾಡಿದ್ದಾರೆ ಎಂದರೆ ಇಲ್ಲಿ ಸಂಘ ಪರಿವಾರದ ಒತ್ತಡ ಇರಬಹುದು. ಟಿಪ್ಪು ಜಯಂತಿ ರದ್ದಾಗಿರುವುದಕ್ಕೆ ಯಾವುದೇ ಬೇಸರವಿಲ್ಲ. ಇಸ್ಲಾಂ ಧರ್ಮದಲ್ಲಿ ಪೂಜೆ ಮಾಡುವುದು, ಫೋಟೊಗೆ ಹಾರಹಾಕುವಂತಹ ಪದ್ಧತಿ ಇಲ್ಲ. ಜಯಂತಿ ಮೂಲಕ ಬಡಮಕ್ಕಳಿಗೆ ಸಹಾಯ ಮಾಡಲಾಗುತ್ತದೆ ಎಂದು ಹೇಳಿದರು.

English summary
Congress leader CM Ibrahim said in Koppal, disqualifief MLAs were become Devadasi's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X