ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎ.ಮಂಜು ಬಳಿಕ ಮತ್ತೊಬ್ಬ ಸಿದ್ದರಾಮಯ್ಯ ಆಪ್ತ ಬಿಜೆಪಿಯತ್ತ?

|
Google Oneindia Kannada News

ಕೊಪ್ಪಳ, ಮಾರ್ಚ್ 23: ಹಾಸನದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ, ಸಿದ್ದರಾಮಯ್ಯ ಅವರ ಆಪ್ತ ಎ.ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೆ ಸಿದ್ದರಾಮಯ್ಯ ಅವರ ಮತ್ತೊಬ್ಬ ಆಪ್ತ ಕಾಂಗ್ರೆಸ್ ಮಾಜಿ ಸಚಿವರೊಬ್ಬರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ.

ಕೊಪ್ಪಳದ ಬಸವರಾಜರಾಯರೆಡ್ಡಿ ಅವರು ಬಿಜೆಪಿಯತ್ತ ಕೈಚಾಚುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಇತ್ತೀಚಿನ ಅವರ ವರ್ತನೆ ಮತ್ತು ಮಾತುಗಳು ಇದಕ್ಕೆ ಪುಷ್ಠಿ ನೀಡುತ್ತಿವೆ.

ಮಾಜಿ ಸಚಿವ ಎ.ಮಂಜು ಬಿಜೆಪಿಗೆ, ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆ?ಮಾಜಿ ಸಚಿವ ಎ.ಮಂಜು ಬಿಜೆಪಿಗೆ, ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆ?

ಬಸವರಾಜರಾಯರೆಡ್ಡಿ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಆದರೆ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಉಮೇದು ವ್ಯಕ್ತಪಡಿಸಿದ್ದರು. ಆದರೆ ಬಸವರಾಜರಾಯರೆಡ್ಡಿ ಅವರ ಮನವಿಗೆ ರಾಜ್ಯ ನಾಯಕರು ಸೊಪ್ಪು ಹಾಕಿಲ್ಲ.

ಟಿಕೆಟ್ ಆಕಾಂಕ್ಷಿ ಆಗಿದ್ದ ರಾಯರೆಡ್ಡಿ

ಟಿಕೆಟ್ ಆಕಾಂಕ್ಷಿ ಆಗಿದ್ದ ರಾಯರೆಡ್ಡಿ

ಲೋಕಸಭಾ ಟಿಕೆಟ್ ನಿರಾಕರಿಸಿದ ಕಾರಣ ರಾಯರೆಡ್ಡಿ ಅವರು ಬಿಜೆಪಿಗೆ ಸೇರಲಿದ್ದಾರೆ ಎನ್ನಲಾಗಿದೆ. ಆದರೆ ಅವರಿಗೆ ಬಿಜೆಪಿಯಲ್ಲಿಯೂ ಟಿಕೆಟ್ ಸಿಗುವ ಯಾವ ಸಾಧ್ಯತೆಗಳೂ ಇಲ್ಲ. ಆದರೆ ಕಾಂಗ್ರೆಸ್‌ಗೆ ಹಿನ್ನಡೆ ಮಾಡಲೆಂದೇ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಸಚಿವ ಎಚ್ ಡಿ ರೇವಣ್ಣಗೆ ಬುದ್ಧಿ ಕಮ್ಮಿ: ಎ ಮಂಜು ಟೀಕೆ ಸಚಿವ ಎಚ್ ಡಿ ರೇವಣ್ಣಗೆ ಬುದ್ಧಿ ಕಮ್ಮಿ: ಎ ಮಂಜು ಟೀಕೆ

ರಾಯರೆಡ್ಡಿ ಸ್ಪಷ್ಟೀಕರಣ ನೀಡಿಲ್ಲ

ರಾಯರೆಡ್ಡಿ ಸ್ಪಷ್ಟೀಕರಣ ನೀಡಿಲ್ಲ

ಬಸವರಾಜರಾಯರೆಡ್ಡಿ ಅವರು ಬಿಜೆಪಿ ಸೇರಲಿದ್ದಾರೆ ಎಂಬುದು ಪ್ರಸ್ತುತ ಕೇವಲ ವದಂತಿಯಾಗಿ ಮಾತ್ರವೇ ಇದ್ದು, ಅವರಾಗಲಿ ಅಥವಾ ಬಿಜೆಪಿಯ ಮುಖಂಡರಾಗಲಿ ಇದನ್ನು ಅಧಿಕೃತಗೊಳಿಸಿಲ್ಲ. ಒಂದು ವೇಳೆ ಬಸರಾಜರಾಯರೆಡ್ಡಿ ಅವರು ಬಿಜೆಪಿಗೆ ಸೇರಿದರೆ ಕಾಂಗ್ರೆಸ್‌ ಗೆ ಅದು ಹಿನ್ನಡೆ ಆಗಲಿದೆ.

ಸಿದ್ದರಾಮಯ್ಯ ಹಠ ಕಾಂಗ್ರೆಸ್- ಜೆಡಿಎಸ್ ನ ಆಟ ಕೆಡಿಸಿದ್ದು ಹೇಗೆ? ಸಿದ್ದರಾಮಯ್ಯ ಹಠ ಕಾಂಗ್ರೆಸ್- ಜೆಡಿಎಸ್ ನ ಆಟ ಕೆಡಿಸಿದ್ದು ಹೇಗೆ?

ಕಾಂಗ್ರೆಸ್ ವಕ್ತಾರರಂತೆ ಕಾರ್ಯ

ಕಾಂಗ್ರೆಸ್ ವಕ್ತಾರರಂತೆ ಕಾರ್ಯ

ಬಸವರಾಜರಾಯರೆಡ್ಡಿ ಅವರು ಕಾಂಗ್ರೆಸ್‌ನ ವಕ್ತಾರಂತೆ ಇದ್ದಾರೆ, ಮಾಧ್ಯಮಗಳಲ್ಲಿ ಕಾಂಗ್ರೆಸ್ ಪರವಾದ ಚರ್ಚೆಗಳಲ್ಲಿ ಬಹುವಾಗಿ ಭಾಗವಹಿಸುತ್ತಾರೆ. ರಾಷ್ಟ್ರೀಯ ವಿಷಯಗಳ ಬಗ್ಗೆ ಕಾಂಗ್ರೆಸ್ ಪರ ವಹಿಸಿ ಅವರು ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ.

ಸಿದ್ದರಾಮಯ್ಯ ಅವರ ಆಪ್ತರು

ಸಿದ್ದರಾಮಯ್ಯ ಅವರ ಆಪ್ತರು

ಇತ್ತೀಚೆಗಷ್ಟೆ ಹಾಸನದ ಎ.ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಅಲ್ಲಿ ಅವರಿಗೆ ಟಿಕೆಟ್ ದೊರೆತಿದ್ದು, ಪ್ರಜ್ವಲ್ ರೇವಣ್ಣ ಅವರ ಎದುರಾಗಿ ಮಂಜು ಸ್ಪರ್ಧಿಸುತ್ತಿದ್ದಾರೆ. ಅವರು ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದರು. ಬಸವರಾಜರಾಯರೆಡ್ಡಿ ಸಹ ಸಿದ್ದರಾಮಯ್ಯ ಅವರ ಪರಮಾಪ್ತರು.

English summary
Congress party former state minister Basavaraja Rayareddy may join BJP. He was expecting Lok Sabha election ticket but congress leaders refuses his request, so he planing to join BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X