ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಸತಿ, ಪ್ರಸಾದ ನಿಲಯಕ್ಕಾಗಿ ಗವಿಸಿದ್ದೇಶ್ವರ ಮಠಕ್ಕೆ 10 ಕೋಟಿ ರೂ. ನೀಡಿದ ಸಿಎಂ

|
Google Oneindia Kannada News

ಕೊಪ್ಪಳ, ಆಗಸ್ಟ್ 1: ಸಮಾಜ ಸೇವೆ, ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 10 ಕೋಟಿ ರೂ. ಮಂಜೂರಾತಿ ಆದೇಶದ ಪ್ರತಿಯನ್ನು ಸೋಮವಾರ ಹಸ್ತಾಂತರ ಮಾಡಿದರು.

ಸೋಮವಾರ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. " ಗವಿಸಿದ್ದೇಶ್ವರ ಮಠದ ಸ್ವಾಮೀಜಿ ಅಪಾರವಾದ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಅವರಿಗೆ ಸಹಾಯ ಆಗಲಿ ಎಂದು ನಾವು ಸರ್ಕಾರದಿಂದ 10 ಕೋಟಿ ರೂ. ಕೊಟ್ಟಿದ್ದೇವೆ" ಎಂದು ತಿಳಿಸಿದರು.

ಈ ಭಾಗದಲ್ಲಿ ಸ್ವಾಮೀಜಿ ಮಾಡುತ್ತಿರುವ ವಿದ್ಯೆ ಮತ್ತು ಅನ್ನ ದಾಸೋಹ ಸೇವೆ ಬಹಳ ವರ್ಷಗಳಿಂದ ನಡೆದಿದೆ. ಬಡ ಜನರಿಗೆ, ವಿದ್ಯಾರ್ಥಿಗಳಿಗೆ ಆಶ್ರಯವಾಗಿದೆ. ಈ ಭಾಗದ ಜನರ ವಿದ್ಯೆಗೆ ನಂದಾದೀಪವಾಗಿದೆ. ಅಂತಹ ಅಮೋಘವಾಗಿರುವ ಕೆಲಸವನ್ನು ಪರಮಪೂಜ್ಯರು ಮಾಡುತ್ತಿರುವಂತಹದ್ದು, ನಮ್ಮ ನಾಡಿನ ಸೌಭಾಗ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಭೋವಿ ನಿಗಮಕ್ಕೆ ಶೀಘ್ರವೇ ಹೊಸ ಅಧ್ಯಕ್ಷರ ನೇಮಕ: ಸಿಎಂ ಭರವಸೆಭೋವಿ ನಿಗಮಕ್ಕೆ ಶೀಘ್ರವೇ ಹೊಸ ಅಧ್ಯಕ್ಷರ ನೇಮಕ: ಸಿಎಂ ಭರವಸೆ

ಈ ಬಾರಿ ಎರಡು ವರ್ಷ ಕೋವಿಡ್ ಆಗಿರುವುದರಿಂದ ಒಂದೇ ಬಾರಿಗೆ 2,000 ಕ್ಕಿಂತ ಹೆಚ್ಚುವರಿಯಾಗಿ ಮಕ್ಕಳು ಬಂದಿದ್ದಾರೆ. 3,500 ಮಕ್ಕಳು ಈಗಾಗಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಕೂಡ ವಸತಿ ಕಲ್ಪಿಸಬೇಕು. ದಾಸೋಹ ಕೇಂದ್ರಗಳನ್ನು ಮಾಡಬೇಕು ಎಂದು ಸ್ವಾಮೀಜಿ ತಿಳಿಸಿದ್ದರು.

Cm Basavaraj Bommai Handed Over the Grant of Rs.10 Cr for Gavisiddeshwara Mutt to Build a Hostel

ಸಾಮಾನ್ಯವಾಗಿ ಭಕ್ತರಿಂದಲೇ ಎಲ್ಲಾ ಕಾರ್ಯವನ್ನು ಸ್ವಾಮೀಜಿ ಮಾಡುತ್ತಾರೆ. ಈ ಸನ್ನಿವೇಶದ ಬಗ್ಗೆ ಸಂಸದ ಕರಡಿ ಸಂಗಣ್ಣ, ಸಚಿವ ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಬಸವರಾಜ ನನ್ನ ಗಮನಕ್ಕೆ ತಂದಿದ್ದರು. ಸಚಿವ ಆನಂದ ಸಿಂಗ್ ಒತ್ತಾಸೆಯ ಮೇರೆಗೆ ಕೂಡಲೇ 10 ಕೋಟಿ ರೂ. ಮಂಜೂರು ಮಾಡಲಾಗಿದೆ. ಆ ಆದೇಶವನ್ನು ಸೋಮವಾರ ಮಠಕ್ಕೆ ಹಸ್ತಾಂತರ ಮಾಡಿದ್ದೇನೆ ಎಂದು ಸಿಎಂ ತಿಳಿಸಿದರು.

ಭಕ್ತರು ಸಹಾಯ ಮಾಡಬೇಕು:
ಮಠದಲ್ಲಿ ಹೆಚ್ಚುವರಿ ಮಕ್ಕಳು ವಿದ್ಯಾಭ್ಯಾಕ್ಕಾಗಿ ಬಂದಿದ್ದಾರೆ. ಅವರಿಗೆ ವಸತಿ ಸೌಲಭ್ಯ ಕೊಡುವುದು ಕಷ್ಟ ಆಗಿದ್ದು, ವಸತಿ ಕಲ್ಪಿಸುವ ಕೆಲಸವನ್ನು ಪರಮಪೂಜ್ಯರು ಆರಂಭ ಮಾಡಿದ್ದಾರೆ. ಅದಕ್ಕೆ ಸಹಾಯ ಆಗಲಿ ಎಂದು ಸರಕಾರದಿಂದ 10 ಕೋಟಿ ರೂ ಕೊಟ್ಟಿದ್ದೇವೆ. ಇನ್ನು ದೊಡ್ಡ ಪ್ರಮಾಣದಲ್ಲಿ 8 ರಿಂದ 10 ಸಾವಿರ ಮಕ್ಕಳಿಗೆ ವಸತಿ ನೀಡಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಭಕ್ತರು ಎಲ್ಲರೂ ಕೂಡ ಸಹಾಯ ಮಾಡಬೇಕು. ಈ ಭಾಗದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ದಿವ್ಯವಾಗಿರುವ ಸೇವೆಯನ್ನ ಸ್ವಾಮೀಜಿ ಮಾಡುತ್ತಿದ್ದಾರೆ. ಅವರ ಆಸೆ, ಕನಸು ನನಸಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಹಾಲಪ್ಪ ಆಚಾರ, ಡಾ. ಕೆ. ಸುಧಾಕರ್, ಬೈರತಿ ಬಸವರಾಜ, ಸಿ.ಸಿ ಪಾಟೀಲ, ಸಂಸತ್ ಸದಸ್ಯರಾದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

English summary
Chief Minister Basavaraj Bommai gave Rs 10 crores granted letter to Gavisiddeshwara Mutt swami on Monday for build Student hostel,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X