ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಜೆಟ್‌; ಆಟಿಕೆ ಉದ್ಯಮಕ್ಕೆ ವಿಶೇಷ ನೀತಿ, ಕೊಪ್ಪಳಕ್ಕೆ ಕೊಡುಗೆ?

|
Google Oneindia Kannada News

ಕೊಪ್ಪಳ, ಜನವರಿ 25 : ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ತಿಂಗಳ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದಂತೆ ದೇಶದಲ್ಲಿಯೇ ಆಟಿಕೆಗಳ ತಯಾರಿಕೆಗೆ ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ. 2021ರ ಬಜೆಟ್‌ನಲ್ಲಿ ಈ ಕುರಿತ ನೀತಿ ಘೋಷಣೆಯಾಗುವ ನಿರೀಕ್ಷೆ ಇದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಆಟಿಕೆ ಉದ್ಯಮಕ್ಕೆ ಪೂರಕವಾಗುವ ವಾತಾವರಣನ್ನು ಸೃಷ್ಟಿಸಲು, ಆಟಿಕೆ ತಯಾರಿಕೆ ವಲಯಕ್ಕೆ ಹೊಸ ಉದ್ಯಮಗಳನ್ನು ಆಕರ್ಷಿಸಲು ಹಲವು ಘೋಷಣೆ ಮಾಡಲು ಸಾಧ್ಯತೆ ಇದೆ.

ಕೊಪ್ಪಳ ಆಟಿಕೆ ಕ್ಲಸ್ಟರ್ ಕುಮಾರಸ್ವಾಮಿ ಯೋಜನೆ, ಬಿಎಸ್‌ವೈ ಅವರದ್ದಲ್ಲ: ನಿಖಿಲ್ ಕುಮಾರಸ್ವಾಮಿಕೊಪ್ಪಳ ಆಟಿಕೆ ಕ್ಲಸ್ಟರ್ ಕುಮಾರಸ್ವಾಮಿ ಯೋಜನೆ, ಬಿಎಸ್‌ವೈ ಅವರದ್ದಲ್ಲ: ನಿಖಿಲ್ ಕುಮಾರಸ್ವಾಮಿ

ಆಟಿಕೆಗಳ ತಯಾರಿಕೆಗೆ ಉತ್ತೇಜನ ನೀಡಿದರೆ ಭಾರತದಿಂದ ಆಟಿಕೆಗಳನ್ನು ರಫ್ತು ಮಾಡಲು ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಆಟಿಕೆಗಳ ರಫ್ತಿನಲ್ಲಿ ಭಾರತದ ಪಾಲು ಪ್ರಸ್ತುತ ಶೇ 5ರಷ್ಟು ಮಾತ್ರವಿದೆ. ಆಟಿಕೆ ರಫ್ತಿನ ವಲಯದಲ್ಲಿ ದೊಡ್ಡ ಅವಕಾಶವಿದೆ ಎಂಬುದನ್ನು ಸರ್ಕಾರ ತಿಳಿದಿದೆ.

ಕೊಪ್ಪಳ; ದೇಶದಲ್ಲೇ ದೊಡ್ಡ ಆಟಿಕೆ ತಯಾರಿಕಾ ಘಟಕ ನಿರ್ಮಾಣ ಕೊಪ್ಪಳ; ದೇಶದಲ್ಲೇ ದೊಡ್ಡ ಆಟಿಕೆ ತಯಾರಿಕಾ ಘಟಕ ನಿರ್ಮಾಣ

Budget 2021 Dedicated Policy May Announce For Toys Sector

ಶ್ರೀಲಂಕಾ, ಮಲೇಷ್ಯಾ, ಜರ್ಮನಿ, ಅಮೆರಿಕದಿಂದಲೂ ಭಾರತಕ್ಕೆ ಆಟಿಕೆಗಳು ಆಮದಾಗುತ್ತವೆ. ಭಾರತದ ಆಟಿಕೆ ಉದ್ಯಮ ಅಸಂಘಟಿತ ವಲಯದಲ್ಲಿಯೇ ಇದ್ದು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಸುಮಾರು 4 ಸಾವಿರ ಉದ್ಯಮಗಳು ಆಟಿಕೆ ತಯಾರಿಕೆಯಲ್ಲಿ ತೊಡಗಿವೆ.

ಮೇಕ್ ಇನ್ ಇಂಡಿಯಾಕ್ಕೆ ಒತ್ತು, ಆಮದು ಆಟಿಕೆ ದುಬಾರಿ ಮೇಕ್ ಇನ್ ಇಂಡಿಯಾಕ್ಕೆ ಒತ್ತು, ಆಮದು ಆಟಿಕೆ ದುಬಾರಿ

ಕೊಪ್ಪಳದಲ್ಲಿ ಕ್ಲಸ್ಟರ್; ದೇಶದಲ್ಲೇ ಮೊದಲ ಬಾರಿಗೆ ಆಟಿಕೆಗಳ ಕ್ಲಸ್ಟರ್ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳದಲ್ಲಿ 'ಕೊಪ್ಪಳ ಟಾಯ್ ಕ್ಲಸ್ಟರ್' ನಿರ್ಮಾಣವಾಗಲಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರ ಈಗಾಗಲೇ ಶಂಕು ಸ್ಥಾಪನೆ ಮಾಡಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಗ್ರಾಮದಲ್ಲಿ ಜನವರಿ 9ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 'ಕೊಪ್ಪಳದ ಆಟಿಕೆಗಳ ಕ್ಲಸ್ಟರ್' ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ದಾರೆ. ಬಜೆಟ್‌ನಲ್ಲಿಯೂ ಆಟಿಕೆ ಉತ್ಪಾದನೆ ನೀತಿ ಘೋಷಣೆಯಾದರೆ ಕೊಪ್ಪಳಕ್ಕೂ ಬಜೆಟ್‌ನಲ್ಲಿ ಕೊಡುಗೆ ಸಿಗುವ ನಿರೀಕ್ಷೆ ಇದೆ.

ಭಾರತದ ಮಟ್ಟಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಕೊಪ್ಪಳದಲ್ಲಿ ನಿರ್ಮಾಣವಾಗುತ್ತಿದೆ. ಪಾರಂಪರಿಕ ಕಿನ್ನಾಳ ಆಟಿಕೆಗೆ ಹೆಸರಾದ ಕೊಪ್ಪಳ ಜಿಲ್ಲೆ ಇದೀಗ ಆಟಿಕೆ ಉತ್ಪಾದನೆ ಕೇಂದ್ರವಾಗಿ ರೂಪುಗೊಳ್ಳುತ್ತಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಕೊಪ್ಪಳದ ಟಾಯ್ ಕ್ಲಸ್ಟರ್‌ ಅನ್ನು ಎಕಸ್ ಸಂಸ್ಥೆಯವರು ಅಭಿವೃದ್ಧಿ ಪಡೆಸುತ್ತಿದ್ದಾರೆ. ಈ ಸಂಸ್ಥೆಯ ಅಧ್ಯಕ್ಷ ಅರವಿಂದ ಮೆಳ್ಳಗೇರಿ ಅವರು ನಮ್ಮ ಕರ್ನಾಟಕದವರೇ.

Recommended Video

ಗಣರಾಜ್ಯೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಬ್ರೇಕ್- ರಾಜಧಾನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ | Oneinda Kannada

ಈ ಆಟಿಕೆ ಕ್ಲಸ್ಟರ್ 2021ರ ಡಿಸೆಂಬರ್ ವೊಳಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಮುಂದಿನ 5 ವರ್ಷಗಳಲ್ಲಿ ಸುಮಾರು ಐದು ಸಾವಿರ ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ ಸಾಧ್ಯತೆ ಇದ್ದು, 25 ಸಾವಿರ ನೇರ ಹಾಗೂ 1 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿ ಮಾಡಲಿದೆ.

English summary
Finance minister Nirmala Sitharaman may announce formulation of a dedicated policy for the toys sector to boost domestic manufacturing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X